ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನಗಿಂತಲೂ ಕೊಹ್ಲಿಯ ಕೌಶಲ್ಯ ಅದ್ಭುತ: ವಿರಾಟ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರಶಂಸೆಯ ಮಾತು

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಏಷ್ಯಾ ಕಪ್ ಮೂಲಕ ತಮ್ಮ ಫಾರ್ಮ್‌ಗೆ ಮರಳಿದ್ದಾರೆ. ಟೂರ್ನಿಯಲ್ಲಿ ಆಡಿದ ಬಹುತೇಕ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಕೊಹ್ಲಿ ಸುದೀರ್ಘ ಸಮಯದ ಬಳಿಕ ತಮ್ಮ ಶತಕವನ್ನು ಪೂರ್ಣಗೊಳಿಸಿದ್ದಾರೆ. ಚುಟುಕು ಮಾದರಿಯಲ್ಲಿ ಸಿಡಿಸಿದ ಚೊಚ್ಚಲ ಶತಕ ಕೂಡ ಇದಾಗಿದ್ದು ಎಲ್ಲೆಡೆಯಿಂದ ಭಾರೀ ಪ್ರಶಂಸೆಗಳು ಹರಿದುಬರುತ್ತಿದೆ. ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಪ್ರತಿಕ್ರಿಯೆ ನೀಡಿದ್ದು ವಿರಾಟ್ ಕೊಹ್ಲಿ ಬಗ್ಗೆ ಭಾರೀ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಏಷ್ಯಾ ಕಪ್‌ನ ಸೂಪರ್ 4 ಹಂತದಿಂದಲೇ ಭಾರತ ಹೊರಬಿದ್ದಿದೆ. ಆದರೆ ವಿರಾಟ್ ಕೊಹ್ಲಿ ಈ ಟೂರ್ನಿಯಲ್ಲಿ ಫಾರ್ಮ್ ಕಂಡುಕೊಂಡಿರುವುದು ಭಾರತದ ದೊಡ್ಡ ಸಕಾರಾತ್ಮಕ ಸಂಗತಿಯಾಗಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ಕೊಹ್ಲಿ ಫಾರ್ಮ್ ಭಾರತ ತಂಡಕ್ಕೆ ಅನಿವಾರ್ಯವಾಗಿತ್ತು. ವಿರಾಟ್ ಕೊಹ್ಲಿ ನೀಡಿದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಅಧ್ಯಕ್ಷ ಸೌರಬ್ ಗಂಗೂಲಿ ವಿಶೇಷ ಮಾತುಗಳನ್ನಾಡಿದ್ದಾರೆ. ಆಟದ ಕೌಶಲ್ಯದ ವಿಚಾರವಾಗಿ ಕೊಹ್ಲಿ ತನಗಿಂತಲೂ ಮೇಲು ಎಂದು ಸ್ವತಃ ಗಂಗೂಲಿ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.

T20 ವಿಶ್ವಕಪ್‌ 2022: ಭಾರತದ ಸಂಭಾವ್ಯ ಸ್ಕ್ವಾಡ್‌ ಘೋಷಿಸಿದ ಆಶಿಶ್ ನೆಹ್ರಾT20 ವಿಶ್ವಕಪ್‌ 2022: ಭಾರತದ ಸಂಭಾವ್ಯ ಸ್ಕ್ವಾಡ್‌ ಘೋಷಿಸಿದ ಆಶಿಶ್ ನೆಹ್ರಾ

ಅಫ್ಘಾನಿಸ್ತಾನದ ವಿರುದ್ಧ ಸಿಡಿದ ಕೊಹ್ಲಿ

ಅಫ್ಘಾನಿಸ್ತಾನದ ವಿರುದ್ಧ ಸಿಡಿದ ಕೊಹ್ಲಿ

ಏಷ್ಯಾ ಕಪ್ ಟೂರ್ನಿಯಲ್ಲಿ ಆರಂಭದಿಂದಲೂ ಉತ್ತಮ ಲಯದಲ್ಲಿದ್ದ ವಿರಾಟ್ ಕೊಹ್ಲಿ ಎರಡು ಶತಕವನ್ನು ಸಿಡಿಸಿದ್ದರು. ಅಫ್ಘಾನಿಸ್ತಾನದ ವಿರುದ್ಧ ನಡೆದ ಸೂಪರ್ 4 ಹಂತದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಸ್ಪೋಟಕ ಪ್ರದರ್ಶನ ನೀಡಿದರು. ಕೇವಲ 61 ಎಸೆತಗಳನ್ನು ಎದುರಿಸಿದ ಕೊಹ್ಲಿ ಭರ್ಜರಿ 122 ರನ್‌ಗಳನ್ನು ಸಿಡಿಸುವ ಮೂಲಕ ಟೂರ್ನಿಯಲ್ಲಿ ಭಾರತದ ಪರವಾಗಿ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಹೈಯೆಸ್ಟ್ ಸ್ಕೋರರ್ ಎನಿಸಿಕೊಂಡರು. ಇದು ವಿರಾಟ್ ಕೊಹ್ಲಿಯ ಮೊದಲ ಟಿ20 ಶತಕವೂ ಹೌದು. 2019ರ ಬಳಿಕ ಕೊಹ್ಲಿ ಬ್ಯಾಟ್‌ನಿಂದ ಸಿಡಿದ ಮೊದಲ ಶತಕ ಕೂಡ ಹೌದು.

ನನಗಿಂತಲೂ ಹೆಚ್ಚಿನ ಕೌಶಲ್ಯದ ಆಟಗಾರ ಕೊಹ್ಲಿ

ನನಗಿಂತಲೂ ಹೆಚ್ಚಿನ ಕೌಶಲ್ಯದ ಆಟಗಾರ ಕೊಹ್ಲಿ

ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಮಾತನಾಡಿರುವ ಹಾಲಿ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ನಾಯಕ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ಬಗ್ಗೆ ಪ್ರಶಮಸೆಯ ಮಾತುಗಳನ್ನಾಡಿದ್ದಾರೆ. "ಆಟಗಾರರನ್ನು ಕೌಶಲ್ಯದ ಆಧಾರದಲ್ಲಿ ಹೋಲಿಕೆ ಮಾಡಬೇಕು. ನನ್ನ ಪ್ರಕಾರ ಕೊಹ್ಲಿ ನನಗಿಂತಲೂ ಅದ್ಭುತವಾದ ಕೌಶಲ್ಯವನ್ನು ಹೊಂದಿರುವ ಕ್ರಿಕೆಟಿಗ. ನಾವು ಭಿನ್ನ ಪೀಳಿಗೆಯಲ್ಲಿ ಆಡಿದವರು ಹಾಗೂ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ನಾನು ನನ್ನ ಕಾಲಿದಲ್ಲಿ ಆಡಿದ್ದು ಅವರು ಈಗಲೂ ಆಡುತ್ತಿದ್ದಾರೆ. ಬಹುಶಃ ನನಗಿಂತಲೂ ಹೆಚ್ಚಿನ ಪಂದ್ಯಗಳನ್ನು ಆವರು ಆಡಲಿದ್ದಾರೆ. ಈಗ ಅವರಿಗಿಂತ ನಾನು ಹೆಚ್ಚಿನ ಪಂದ್ಯಗಳನ್ನು ಆಡಿರುವೆ. ಆದರೆ ಅವರು ನನಗಿಂತ ಹೆಚ್ಚು ಆಡಲಿದ್ದಾರೆ. ಆತ ನಿಜಕ್ಕೂ ಅದ್ಭುತ ಆಟಗಾರ" ಎಂದಿದ್ದಾರೆ ಸೌರವ್ ಗಂಗೂಲಿ.

ಏಷ್ಯಾ ಕಪ್‌ಗೆ ಮುನ್ನವೂ ಕೊಹ್ಲಿ ಬೆನ್ನಿಗೆ ನಿಂತಿದ್ದ ಗಂಗೂಲಿ

ಏಷ್ಯಾ ಕಪ್‌ಗೆ ಮುನ್ನವೂ ಕೊಹ್ಲಿ ಬೆನ್ನಿಗೆ ನಿಂತಿದ್ದ ಗಂಗೂಲಿ

ಇನ್ನು ಬಿಸಿಸಿಐ ಅಧ್ಯಕ್ಷನಾಗಿರುವ ಸೌರವ್ ಗಂಗೂಲಿ ಏಷ್ಯಾ ಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಕೂಡ ವಿರಾಟ್ ಕೊಹ್ಲಿಗೆ ಬೆಂಬಲಿಸಿ ಮಾತನಾಡಿದ್ದರು. ಕಳಪೆ ಫಾರ್ಮ್‌ನಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಕೊಹ್ಲಿ ಆರು ವಾರಗಳ ವಿಶ್ರಾಂತಿ ಪಡೆದುಕೊಂಡಿದ್ದರು. ಏಷ್ಯಾ ಕಪ್‌ನ ಹಿನ್ನೆಲೆಯಲ್ಲಿ ಮಾತನಾಡಿದ್ದ ಅವರು ಏಷ್ಯಾ ಕಪ್‌ ಟೂರ್ನಿಯಲ್ಲಿ ಫಾರ್ಮ್ ಕಂಡುಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ಏಷ್ಯಾ ಕಪ್‌ನಲ್ಲಿ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂದಿದ್ದ ಗಂಗೂಲಿ

ಏಷ್ಯಾ ಕಪ್‌ನಲ್ಲಿ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂದಿದ್ದ ಗಂಗೂಲಿ

ಏಷ್ಯಾ ಕಪ್‌ಗೆ ಮುನ್ನ ಮಾತನಾಡಿದ್ದ ಸೌರವ್ ಗಂಗೂಲಿ "ವಿರಾಟ್ ಕೊಹ್ಲಿಗೆ ಅಭ್ಯಾಸಕ್ಕೆ ಅವಕಾಶ ಮಾಡಬೇಕು. ಅವರನ್ನು ಆಡುವುದಕ್ಕೆ ಬಿಡಬೇಕು. ಆತನೋರ್ವ ದೊಡ್ಡ ಆಟಗಾರನಾಗಿದ್ದು ಸಾಕಷ್ಟು ರನ್‌ಗಳನ್ನು ಗಳಿಸಿದ್ದಾರೆ. ಅವರು ಕಮ್‌ಬ್ಯಾಕ್ ಮಾಡುವ ವಿಶ್ವಾಸ ನನಗಿದೆ. ಅವರು ಕೇವಲ ಶತಕವನ್ನು ಬಾರಿಸಿದರೆ ಮಾತ್ರವೇ ಸಾಲದು ನನ್ನ ಪ್ರಕಾರ ಅವರು ಏಷ್ಯಾಕಪ್‌ನಲ್ಲಿ ತಮ್ಮ ಫಾರ್ಮ್ ಕಂಡುಕೊಳ್ಳಲಿದ್ದಾರೆ" ಎಂದಿದ್ದರು ಸೌರವ್ ಗಂಗೂಲಿ. ಇದೀಗ ವಿರಾಟ್ ಕೊಹ್ಲಿ ಫಾರ್‌ ಕಂಡುಕೊಂಡಿರುವುದು ಟೀಮ್ ಇಂಡಿಯಾ ಮ್ಯಾನೇಜ್‌ಎಂಟ್‌ಗೂ ನಿರಾಳ ಭಾವ ಮೂಡಿಸಿದೆ.

Story first published: Saturday, September 10, 2022, 19:15 [IST]
Other articles published on Sep 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X