ದ.ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯನ್ನು ಹೀನಾಯವಾಗಿ ಸೋತು ಕೆಟ್ಟ ದಾಖಲೆ ಮುಂದುವರೆಸಿದ ಭಾರತ!

ಈ ತಪ್ಪುಗಳನ್ನು ಟೀಮ್ ಇಂಡಿಯಾ ಮಾಡಬಾರ್ದಿತ್ತು | Oneindia Kannada

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯ ಫಲಿತಾಂಶ ಹೊರಬಿದ್ದಿದೆ. ಇತ್ತಂಡಗಳ ನಡುವೆ ನಡೆದ ಮೊದಲನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸುವುದರ ಮೂಲಕ ಶುಭಾರಂಭವನ್ನು ಮಾಡಿತ್ತು. ಆದರೆ ನಂತರ ಜೊಹಾನ್ಸ್ ಬರ್ಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಸಮಬಲ ಸಾಧಿಸಿತ್ತು. ಹೀಗಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಕೇಪ್ ಟೌನ್ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯ ಮಹತ್ವದ್ದಾಗಿತ್ತು.

ಭಾರತ vs ದ.ಆಫ್ರಿಕಾ: ಮಕ್ಕಳ ರೀತಿ ಆಡುವುದನ್ನು ಬಿಡಬೇಕು ಎಂದು ಕೊಹ್ಲಿಗೆ ಚಾಟಿ ಬೀಸಿದ ಮಾಜಿ ಕ್ರಿಕೆಟಿಗಭಾರತ vs ದ.ಆಫ್ರಿಕಾ: ಮಕ್ಕಳ ರೀತಿ ಆಡುವುದನ್ನು ಬಿಡಬೇಕು ಎಂದು ಕೊಹ್ಲಿಗೆ ಚಾಟಿ ಬೀಸಿದ ಮಾಜಿ ಕ್ರಿಕೆಟಿಗ

ಇತ್ತಂಡಗಳ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ದಿನಕ್ಕೆ ಜಯಭೇರಿ ಬಾರಿಸಿರುವ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ತವರು ನೆಲದಲ್ಲಿನ ತನ್ನ ವಿಶೇಷ ದಾಖಲೆಯೊಂದನ್ನು ಮುಂದುವರೆಸಿದೆ. ಹೌದು, ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗಲೆಲ್ಲಾ ನಡೆದಿರುವ ಟೆಸ್ಟ್ ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ ಯಾವುದೇ ಬಾರಿ ಕೂಡ ಸರಣಿಯನ್ನು ಸೋತಿರಲಿಲ್ಲ. ಈ ವಿಶೇಷ ದಾಖಲೆಯನ್ನು ಈ ಬಾರಿಯೂ ಕೂಡ ಮುಂದುವರಿಸಿರುವ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾಗೆ ಸೋಲುಣಿಸಿದೆ. 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಹರಿಣಗಳು ಗೆದ್ದು ಬೀಗಿವೆ.

ಇನ್ನು ಇತ್ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 111 ರನ್‌ಗಳ ಅಗತ್ಯತೆ ಇತ್ತು ಹಾಗೂ ಟೀಮ್ ಇಂಡಿಯಾಗೆ ಗೆಲ್ಲಲು 8 ವಿಕೆಟ್‍ಗಳು ಬೇಕಾಗಿತ್ತು. ಆದರೆ ಟೀಮ್ ಇಂಡಿಯಾ ನಾಲ್ಕನೇ ದಿನದಾಟದಂದು ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದು ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ನೀಡಿದ್ದ 212 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನತ್ತಿದೆ. ಮೂರನೇ ದಿನದಾಟದಂದು ನಾಯಕ ಡೀನ್ ಎಲ್ಗರ್ ಜತೆ ಉತ್ತಮ ಪ್ರದರ್ಶನವನ್ನು ನೀಡಿದ್ದ ಕೀಗನ್ ಪೀಟರ್ಸನ್ ನಾಲ್ಕನೇ ದಿನದಾಟದಂದು ಕೂಡ ಭಾರತದ ಬೌಲರ್‌ಗಳನ್ನು ಕಾಡಿದ್ದಾರೆ. 113 ಎಸೆತಗಳಿಗೆ 82 ರನ್ ಬಾರಿಸಿದ ಕೀಗನ್ ಪೀಟರ್ಸನ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಟೀಮ್ ಇಂಡಿಯಾದ ಕನಸಿಗೆ ತಣ್ಣೀರು ಎರಚಿದ್ದಾರೆ.

8ನೇ ಬಾರಿಯೂ ನನಸಾಗಲಿಲ್ಲ ಟೀಮ್ ಇಂಡಿಯಾ ಕನಸು

8ನೇ ಬಾರಿಯೂ ನನಸಾಗಲಿಲ್ಲ ಟೀಮ್ ಇಂಡಿಯಾ ಕನಸು

ಟೀಮ್ ಇಂಡಿಯಾ ಈ ಬಾರಿ ಕೈಗೊಂಡಿರುವ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಸೇರಿದಂತೆ ಇದುವರೆಗೂ ಒಟ್ಟು 8 ಬಾರಿ ದಕ್ಷಿಣ ಆಫ್ರಿಕಾದ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಿದೆ. ಈ ಸರಣಿಗೂ ಮುನ್ನ ಒಟ್ಟು 7 ಬಾರಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡು ಟೆಸ್ಟ್ ಸರಣಿಗಳಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾ ಯಾವುದೇ ಬಾರಿ ಕೂಡ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ. ಆದರೆ ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಗೆಲುವು ಸಾಧಿಸಲಿದೆ ಎಂದು ಎಲ್ಲರೂ ಊಹಿಸಿದ್ದರು. ಆದರೆ ಈ ಊಹೆ ಇದೀಗ ತಪ್ಪಾಗಿದ್ದು ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆದ ಎಂಟನೇ ಟೆಸ್ಟ್ ಸರಣಿಯಲ್ಲಿಯೂ ಕೂಡ ಟೀಮ್ ಇಂಡಿಯಾ ಸೋಲಿಗೆ ಶರಣಾಗಿ ತನ್ನ ಕೆಟ್ಟ ದಾಖಲೆಯನ್ನು ಮುಂದುವರೆಸಿದೆ.

ಟೀಮ್ ಇಂಡಿಯಾಗೆ ಕಂಟಕವಾದ ಕೀಗನ್ ಪೀಟರ್ಸನ್

ಟೀಮ್ ಇಂಡಿಯಾಗೆ ಕಂಟಕವಾದ ಕೀಗನ್ ಪೀಟರ್ಸನ್

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಕಂಟಕವಾಗಿ ಪರಿಣಮಿಸಿದ್ದು ದಕ್ಷಿಣ ಆಫ್ರಿಕಾದ ಕೀಗನ್ ಪೀಟರ್ಸನ್. ಹೌದು, ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 72 ರನ್ ಗಳಿಸಿದ್ದ ಕೀಗನ್ ಪೀಟರ್ಸನ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 82 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾಗೆ ಕಂಟಕವಾಗಿ ಪರಿಣಮಿಸಿದರು. ಎರಡೂ ಇನ್ನಿಂಗ್ಸ್‌ನಲ್ಲಿಯೂ ಅರ್ಧಶತಕದ ಆಟಗಳನ್ನಾಡಿದ ಕೀಗನ್ ಪೀಟರ್ಸನ್ ಸದ್ಯ ಟೀಮ್ ಇಂಡಿಯಾಗೆ ಖಳನಾಯಕನಾಗಿ ಪರಿಣಮಿಸಿದ್ದಾರೆ. ಹೀಗೆ ಸರಣಿಯಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ಕೀಗನ್ ಪೀಟರ್ಸನ್ ಸರಣಿ ಶ್ರೇಷ್ಠ ಹಾಗೂ ಮೂರನೇ ಟೆಸ್ಟ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಕೂಡಾ ಭಾಜನರಾಗಿದ್ದಾರೆ.

ವ್ಯರ್ಥವಾಯಿತು ರಿಷಭ್ ಪಂತ್ ಶತಕ

ವ್ಯರ್ಥವಾಯಿತು ರಿಷಭ್ ಪಂತ್ ಶತಕ

ಇನ್ನು ಈ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ 198 ರನ್‌ಗಳ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಗಿತ್ತು. ಈ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಅಜೇಯ 100 ರನ್ ಗಳಿಸಿ ಅಬ್ಬರಿಸಿದ್ದರು. ತಂಡದ ಉಳಿದೆಲ್ಲ ಆಟಗಾರರು ವಿಫಲವಾದರೂ ಸಹ ಏಕಾಂಗಿ ಹೋರಾಟ ನಡೆಸಿ ರಿಷಭ್ ಪಂತ್ ಸಿಡಿಸಿದ ಆಕರ್ಷಕ ಶತಕ ಇದೀಗ ವ್ಯರ್ಥವಾಗಿದೆ.

ನಡೆಯಲಿಲ್ಲ ಟೀಮ್ ಇಂಡಿಯಾ ಬೌಲಿಂಗ್ ಜಾದೂ

ನಡೆಯಲಿಲ್ಲ ಟೀಮ್ ಇಂಡಿಯಾ ಬೌಲಿಂಗ್ ಜಾದೂ

ಈ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬೌಲಿಂಗ್ ವಿಭಾಗ ಜಾದೂ ಮಾಡಿತ್ತು ಎಂದೇ ಹೇಳಬಹುದು. ದಕ್ಷಿಣ ಆಫ್ರಿಕಾ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 210 ರನ್‌ಗಳಿಗೆ ಆಲ್ ಔಟ್ ಮಾಡಿದ್ದ ಟೀಮ್ ಇಂಡಿಯಾ ಬೌಲರ್‌ಗಳು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಕ್ಷರಶಃ ಮಂಕಾದರು. ತೃತೀಯ ದಿನದಾಟದಂದು ಏಡನ್ ಮಾರ್ಕ್ರಮ್ ಮತ್ತು ಡೀನ್ ಎಲ್ಗರ್ ಅವರ ವಿಕೆಟ್ ಪಡೆದ ಟೀಮ್ ಇಂಡಿಯಾ ಬೌಲರ್‌ಗಳು ನಾಲ್ಕನೇ ದಿನದಾಟದಂದು ಕೀಗನ್ ಪೀಟರ್ಸನ್ ಅವರ ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು. ಕೀಗನ್ ಪೀಟರ್ಸನ್ ಔಟ್ ಆದ ಬಳಿಕ ಒಂದಾದ ಟೆಂಬಾ ಬವುಮಾ ಮತ್ತು ವಾನ್ ಡರ್ ಡಸನ್ ಜೋಡಿ 57 ರನ್‌ಗಳ ಜವಾಬ್ದಾರಿಯುತ ಜತೆಯಾಟವನ್ನು ಆಡುವುದರ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಗೆಲುವಿನ ದಡ ಸೇರಿಸಿದರು. ಟೆಂಬಾ ಬವುಮಾ ಅಜೇಯ 32 ರನ್ ಗಳಿಸಿದರೆ, ವಾನ್ ಡರ್ ಡಸನ್ ಅಜೇಯ 41 ರನ್ ಕಲೆ ಹಾಕಿದರು.

For Quick Alerts
ALLOW NOTIFICATIONS
For Daily Alerts
Story first published: Friday, January 14, 2022, 17:23 [IST]
Other articles published on Jan 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X