ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಇತಿಹಾಸದಲ್ಲಿ ಇದು ಕೆಟ್ಟಸೋಲು: ಕಿಡಿಕಾರಿದ ದಕ್ಷಿಣ ಆಫ್ರಿಕಾ ಕೋಚ್

South Africa Coach Mark Boucher Unhappy With Team Performance

ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ 2022ರ ಟೂರ್ನಿಯಿಂದ ಹೊರಬಿದ್ದಿದೆ. ನೆದರ್ಲ್ಯಾಂಡ್ಸ್ ವಿರುದ್ಧ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಂಡದ ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಚರ್, ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸೋಲು ಎಂದು ಹೇಳಿದ್ದಾರೆ.

ನೆದರ್ಲ್ಯಾಂಡ್ಸ್ ವಿರುದ್ಧ ಸುಲಭವಾಗಿ ಜಯಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತದೆ ಎಂದುಕೊಳ್ಳಲಾಗಿತ್ತು. ಆದರೆ, ನೆದರ್ಲ್ಯಾಂಡ್ಸ್ ಅತ್ಯುತ್ತಮವಾಗಿ ಆಡುವ ಮೂಲಕ ಎಲ್ಲರ ನಿರೀಕ್ಷೆಗಳನ್ನು ಸುಳ್ಳುಮಾಡಿದೆ.

ದಕ್ಷಿಣ ಆಫ್ರಿಕಾದ ಮುಖ್ಯ ಕೋಚ್, ಮಾರ್ಕ್ ಬೌಚರ್ ತಮ್ಮ ತಂಡದ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಕಪ್ ಇತಿಹಾಸದಲ್ಲೇ ಇದು ಅತ್ಯಂತ ಕೆಟ್ಟ ಸೋಲು ಎಂದು ಅವರು ಒಪ್ಪಿಕೊಂಡಿದ್ದಾರೆ. ಟಿ20 ವಿಶ್ವಕಪ್‌ನ ಸೆಮಿಫೈನಲ್‌ಗೆ ಹೋಗಲು ಗೆಲುವಿನ ಅಗತ್ಯವಿದ್ದ ದಕ್ಷಿಣ ಆಫ್ರಿಕಾವನ್ನು ನವೆಂಬರ್ 6 ಭಾನುವಾರದಂದು ನೆದರ್ಲೆಂಡ್ಸ್ 13 ರನ್‌ಗಳ ಅಂತರದಿಂದ ಸೋಲಿಸಿತು.

ಸೂರ್ಯ ಆರ್ಭಟಕ್ಕೆ ಜಿಂಬಾಬ್ವೆ ಕಂಗಾಲು: ಭಾರತದ ಪರ ಯಾರೂ ಮಾಡದ ಸಾಧನೆ ಮಾಡಿದ SKYಸೂರ್ಯ ಆರ್ಭಟಕ್ಕೆ ಜಿಂಬಾಬ್ವೆ ಕಂಗಾಲು: ಭಾರತದ ಪರ ಯಾರೂ ಮಾಡದ ಸಾಧನೆ ಮಾಡಿದ SKY

ತಮ್ಮ ಸೂಪರ್ 12 ಗುಂಪು 2 ಪಂದ್ಯದಲ್ಲಿ ಭಾರತವನ್ನು ಸೋಲಿಸಿದ ನಂತರ ದಕ್ಷಿಣ ಆಫ್ರಿಕಾ 2022 ರ ಟಿ20 ವಿಶ್ವಕಪ್‌ನಿಂದ ನಿರ್ಗಮಿಸುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ದಕ್ಷಿಣ ಆಫ್ರಿಕಾ ಇದುವರೆಗೂ ನೆದರ್ಲ್ಯಾಂಡ್ಸ್ ವಿರುದ್ಧ ಸೋತಿರಲಿಲ್ಲ.

ವಿಶ್ವ ದರ್ಜೆಯ ವೇಗಿಗಳಾದ ಕಗಿಸೊ ರಬಾಡ ಮತ್ತು ಅನ್ರಿಚ್ ನೋಕಿಯಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಅಂತಿಮ ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ ಹೆಚ್ಚಿನ ರನ್ ಬಿಟ್ಟುಕೊಟ್ಟಿತು.

ವಿಫಲರಾದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು

ವಿಫಲರಾದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು

ನೆದರ್‌ಲ್ಯಾಂಡ್‌ನ ಟಾಮ್ ಕೂಪರ್ ಮತ್ತು ಕಾಲಿನ್ ಅಕರ್‌ಮನ್ ಕೊನೆಯ ಎರಡು ಓವರ್ ಗಳಲ್ಲಿ 31 ರನ್ ಗಳಿಸಿದರು. ಅಂತಿಮವಾಗಿ ನೆದರ್ಲ್ಯಾಂಡ್ಸ್ 20 ಓವರ್‌ಗಳಲ್ಲಿ 158 ರನ್ ಕಲೆಹಾಕಿತು.

ಪಂದ್ಯದ ಆರಂಭದಲ್ಲಿ ಸ್ಫೋಟಕ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಔಟಾದರು. ಟೆಂಬಾ ಬವುಮಾ, ಐಡೆನ್ ಮಾಕ್ರಮ್, ರಿಲೀ ರೊಸೊವ್ ಮತ್ತು ಡೇವಿಡ್ ಮಿಲ್ಲರ್ ಬ್ಯಾಟಂಗ್‌ನಲ್ಲಿ ವಿಫಲರಾದ ಕಾರಣ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 145 ರನ್ ಗಳಿಸುವ ಮೂಲಕ 13 ರನ್‌ಗಳ ಸೋಲನುಭವಿಸಿತು. ಡಚ್ ಆಟಗಾರರು ಸಂಭ್ರಮಾಚರಣೆ ಆರಂಭಿಸಿದಾಗಲೂ ಅವರ ಡ್ರೆಸ್ಸಿಂಗ್ ರೂಮ್ ಖಿನ್ನತೆಗೆ ಒಳಗಾಗಿತ್ತು.

T20 World Cup: ಫೈನಲ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿ ಸಾಧ್ಯತೆ, ಮರುಕಳಿಸುತ್ತಾ ಇತಿಹಾಸ?

ಬೇಸರ ವ್ಯಕ್ತಪಡಿಸಿದ ಮಾರ್ಕ್ ಬೌಚರ್

ಬೇಸರ ವ್ಯಕ್ತಪಡಿಸಿದ ಮಾರ್ಕ್ ಬೌಚರ್

"ಒಬ್ಬ ತರಬೇತುದಾರನಾಗಿ ಹೌದು. ಇದು ಸಾಕಷ್ಟು ನಿರಾಶಾದಾಯಕವಾಗಿದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಆಟಗಾರನಾಗಿ, ನೀವು ಕನಿಷ್ಟ ಆಟದಲ್ಲಿ ಹೇಳಬಹುದು. ಆದರೆ ತರಬೇತುದಾರರಾಗಿ, ನೀವು ಇತರ ವ್ಯಕ್ತಿಗಳಿಗೆ ಪ್ರದರ್ಶನ ನೀಡಲು ಮಾರ್ಗದರ್ಶನ ನೀಡುತ್ತೀರಿ. ಆದ್ದರಿಂದ, ಖಂಡಿತವಾಗಿಯೂ, ತರಬೇತುದಾರನಾಗಿ ನನಗೆ ಎಲ್ಲರಿಗಿಂತ ಹೆಚ್ಚಿನ ನಿರಾಶೆಯಾಗಿದೆ" ಎಂದು ಮಾರ್ಕ್ ಬೌಚರ್ ಭಾನುವಾರ ಅಡಿಲೇಡ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

"ಪ್ರತಿಯೊಂದೂ ವೈಯಕ್ತಿಕ ಘಟನೆಯಾಗಿದೆ. ವಿಶ್ವಕಪ್ ಪಂದ್ಯಾವಳಿಗಳಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಸಾಕಷ್ಟು ಇತಿಹಾಸವಿದೆ ಎಂದು ನನಗೆ ತಿಳಿದಿದೆ. ಆದರೆ ಕಳೆದ ವಿಶ್ವಕಪ್‌ನಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ." ಎಂದು ಹೇಳಿದರು.

ಹಲವು ಉತ್ತಮ ತಂಡಗಳು ಸೋಲನುಭವಿಸಿವೆ

ಹಲವು ಉತ್ತಮ ತಂಡಗಳು ಸೋಲನುಭವಿಸಿವೆ

ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡಿದ್ದ ದಕ್ಷಿಣ ಆಫ್ರಿಕಾ ಕೊನೆಯ ಎರಡು ಪಂದ್ಯಗಳಲ್ಲಿ ಕಳಪೆ ಆಟವಾಡಿತು. ಪಾಕಿಸ್ತಾನ ವಿರುದ್ಧ ಸೋಲನುಭವಿಸಿದ ಬಳಿಕ ನೆದರ್ಲ್ಯಾಂಡ್ಸ್ ವಿರುದ್ಧ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿತ್ತು ಆದರೆ ಒತ್ತಡದಲ್ಲಿ ಸೋಲನುಭವಿಸಿತು.

"ಈ ವಿಶ್ವಕಪ್‌ನಲ್ಲಿ, ಈ ಸಂಗತಿಗಳು ಸಂಭವಿಸುತ್ತವೆ. ಇದು ಈ ಟಿ 20 ವಿಶ್ವಕಪ್‌ನಲ್ಲಿ ಸಂಭವಿಸಿದ ಏಕೈಕ ಸೋಲಲ್ಲ. ಕೆಲವು ಉತ್ತಮ ತಂಡಗಳನ್ನು ಕಡಿಮೆ ತಂಡಗಳು ಸೋಲಿಸಿವೆ. ಇದು ರೋಮಾಂಚನಕಾರಿ ಕ್ರಿಕೆಟ್‌ಗೆ ಕಾರಣವಾಗುತ್ತದೆ" ಎಂದು ಬೌಚರ್ ಹೇಳಿದರು. ಸೂಪರ್ 12 ಗುಂಪು 2 ರಿಂದ ಪಾಕಿಸ್ತಾನ ಮತ್ತು ಭಾರತ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ.

Story first published: Sunday, November 6, 2022, 16:38 [IST]
Other articles published on Nov 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X