ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲು ಹೈದ್ರಾಬಾದ್ ಪವಾಡ ಮಾಡಬೇಕಿದೆ: ಆಕಾಶ್ ಚೋಪ್ರಾ

SRH Will Need To Miracle To Defeat Mumbai Indians: Aakash Chopra

ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾರ (ಅ.03) ನಡೆಯಲಿರುವ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಗೆಲ್ಲಲು ಪವಾಡವನ್ನೇ ಸೃಷ್ಟಿಸಬೇಕಿದೆ ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.

ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಇಂದು (ಅ.03) ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದ್ರಾಬಾದ್ ನಡುವಿನ ಕೊನೆಯ ಲೀಗ್ ಪಂದ್ಯದಲ್ಲಿ ಹೈದ್ರಾಬಾದ್ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿಯುತ್ತಿದೆ. ಈಗಾಗಲೇ ಮುಂಬೈ ಇಂಡಿಯನ್ಸ್‌ ಪ್ಲೇ ಆಫ್ ತಲುಪಿರುವ ಮೊದಲ ತಂಡವಾಗಿರುವುದರಿಂದ ಡೇವಿಡ್ ವಾರ್ನರ್ ಪಡೆ ಗೆಲ್ಲಲೇಬೇಕಿದೆ.

ಲೀಗ್‌ ಕೊನೇ ಪಂದ್ಯದಲ್ಲಿ ಮುಂಬೈ-ಹೈದರಾಬಾದ್: ಪ್ರಮುಖ ಮಾಹಿತಿಲೀಗ್‌ ಕೊನೇ ಪಂದ್ಯದಲ್ಲಿ ಮುಂಬೈ-ಹೈದರಾಬಾದ್: ಪ್ರಮುಖ ಮಾಹಿತಿ

ಆದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪಂದ್ಯವನ್ನು ಗೆಲ್ಲವು ಸಾಧ್ಯತೆ ಹೆಚ್ಚಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ, ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಹೇಳಿದ್ದಾರೆ. ಡೇವಿಡ್ ವಾರ್ನರ್ ಮತ್ತು ಜಸ್ಪ್ರಿತ್ ಬುಮ್ರಾ ನಡುವಿನ ಮುಖಾಮುಖಿಯನ್ನು ನೋಡಲು ಅವರು ಉತ್ಸುಕರಾಗುತ್ತಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಇದಲ್ಲದೆ, ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಲು ಎಸ್ಆರ್‌ಹೆಚ್ ಪವಾಡವನ್ನು ಮಾಡಬೇಕಾಗಿದೆ ಎಂದು ಅವರು ಭಾವಿಸುತ್ತಾರೆ.
ವೇಗದ ಬೌಲರ್‌ಗಳಿಗೆ ಈ ಪಿಚ್‌ನಲ್ಲಿ ಹೆಚ್ಚಿನ ಸಹಾಯವಿಲ್ಲದಿದ್ದರೂ ಬುಮ್ರಾ ಪಿಚ್‌ನಿಂದ ಪ್ರಭಾವಿತವಾಗುವುದಿಲ್ಲ. ಬುಮ್ರಾ ಎಂತದ್ದೇ ಪಿಚ್‌ನಲ್ಲಿ ಎದುರಾಳಿಯನ್ನು ಧೂಳೀಪಟ ಮಾಡುವ ಸಾಮರ್ಥ್ಯ ಹೊಂದಿರುವ ಬೌಲರ್ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

"ಬಮ್ರಾ ವಾರ್ನರ್‌ಗೆ ಬೌಲಿಂಗ್ ಮಾಡುವಾಗ ಔಟ್‌ಸೈಡ್ ಎಡ್ಜ್‌ ಅಥವಾ ಪ್ಯಾಡ್‌ಗಳನ್ನು ಮತ್ತು ಸ್ಟಂಪ್‌ಗಳ ಮೇಲೆ ಗುರಿಯಾಗಿಸಿ ದಾಳಿ ನಡೆಸಬಹುದು. ಆತ ಬೌನ್ಸರ್‌ನೊಂದಿಗೂ ವಾರ್ನರ್‌ರನ್ನು ಕಾಡಬಹುದು, ಬುಮ್ರಾ ಮೇಲುಗೈ ಸಾಧಿಸುತ್ತಾನೆ ಎಂದು ನಾನು ಭಾವಿಸುತ್ತೇನೆ'' ಎಂದಿದ್ದಾರೆ.

"ಇದು(ಈ ಪಂದ್ಯ) ಮುಂಬೈ ಕಡೆಗೆ ಆಗಲಿದೆ ಎಂದು ನಾನು ಭಾವಿಸುತ್ತೇನೆ. ಇದು ಉತ್ತಮ ತಂಡ ಎಂದು ನಾನು ಭಾವಿಸುತ್ತೇನೆ ಮತ್ತು ಲೀಗ್ ಹಂತವನ್ನು ಗೆಲುವಿನೊಂದಿಗೆ ಕೊನೆಗೊಳಿಸಲು ಬಯಸುತ್ತಿದೆ. ಅವರನ್ನು ಸೋಲಿಸಲು ಸನ್‌ರೈಸರ್ಸ್ ಹೈದರಾಬಾದ್‌ಗೆ ಒಂದು ಪವಾಡ ಬೇಕು. " ಎಂದು ಆಕಾಶ್ ಚೋಪ್ರಾ ನುಡಿದಿದ್ದಾರೆ.

ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ಈಗಾಗಲೇ ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದು, ಕೆಕೆಆರ್ ತಂಡವು ನಾಲ್ಕನೇ ಸ್ಥಾನದಲ್ಲಿದ್ದರೂ ಇಂದಿನ ಮುಂಬೈ-ಹೈದ್ರಾಬಾದ್ ಪಂದ್ಯದ ಫಲಿತಾಂಶಕ್ಕಾಗಿ ಕಾಯುತ್ತಿದೆ.

Story first published: Tuesday, November 3, 2020, 17:51 [IST]
Other articles published on Nov 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X