ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರನೌಟ್ ಕಾರಣಕ್ಕೆ ಉಗ್ರರೂಪ ತಾಳಿದ ಸ್ಟೀವ್ ಸ್ಮಿತ್: ಅನುಭವಿ ಆಟಗಾರನ ಕೋಪಕ್ಕೆ ದಂಗಾದ ಅಭಿಮಾನಿಗಳು!

Sri Lanka vs Australia: Aussis star Steve Smith angry after a mix-up with Usman Khawaja

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಗಾಲ್ಲೆ ಅಂತಾರಾಷ್ಟ್ರೀಯ ಕ್ರಿಡಾಂಗಣದಲ್ಲಿ ನಡೆಯುತ್ತಿದೆ. ಮೊದಲ ದಿನದಾಟದಲ್ಲಿ ಶ್ರೀಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿರುವ ಆಸಿಸ್ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ಮೈದಾನದಲ್ಲಿ ಕೋಪಗೊಂಡು ಉಗ್ರರೂಪ ತಾಳಿದ ಘಟನೆ ಈ ಪಂದ್ಯದ ಸಂದರ್ಭದಲ್ಲಿ ನಡೆದಿದೆ. ಸಾಮಾನ್ಯವಾಗಿ ಯಾವಾಲಗೂ ತಾಳ್ಮೆ ಕಳೆದುಕೊಳ್ಳದ ಸ್ಟೀವ್ ಸ್ಮಿತ್ ಅವರ ಈ ಕೋಪಕ್ಕೆ ಅಭಿಮಾನಿಗಳು ದಂಗಾಗಿದ್ದಾರೆ. ಸ್ಟೀವ್ ಸ್ಮಿತ್ ಹೀಗೆ ಕೋಪಗೊಳ್ಳಲು ಕಾರಣ ತಮ್ಮದೇ ತಂಡದ ಆಟಗಾರ.

IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!

ರನೌಟ್ ಕಾರಣಕ್ಕೆ ಸಿಡುಕಿದ ಸ್ಮಿತ್

ಸ್ಟೀವ್ ಸ್ಮಿತ್ ಕೋಪಕ್ಕೆ ಕಾರಣವಾಗಿದ್ದು ಅವರ ರನೌಟ್. ಮೊದಲ ದಿನದಾಟದಲ್ಲಿ ರನ್‌ಗಾಗಿ ಓಡುತ್ತಿದ್ದಾಗ ಜೊತೆಗಾರ ಆಟಗಾರ ಉಸ್ಮಾನ್ ಖವಾಜ ಜೊತೆಗೆ ಸಂವಹನದಲ್ಲಿ ಎಡವಿದ ಸ್ಟೀವ್ ಸ್ಮಿತ್ ಕೇವಲ 7 ರನ್‌ಗೆ ವಿಕೆಟ್ ಕಳೆದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಉಸ್ಮಾನ್ ಖವಾಜ ವಿರುದ್ಧ ತಮ್ಮ ಅಸಮಾಧಾನವನ್ನು ಮೈದಾನದಲ್ಲಿಯೇ ವ್ಯಕ್ತಪಡಿಸಿದರು ಸ್ಟೀವ್ ಸ್ಮಿತ್. ಫೆವಿಲಿಯನ್‌ಗೆ ಸಾಗುತ್ತಿದ್ದ ಸಂದರ್ಭದಲ್ಲಿಯೂ ಸ್ಟೀವ್ ಸ್ಮಿತ್ ಆಕ್ರೋಶವನ್ನು ಹೊರಹಾಕುತ್ತಲೇ ಸಾಗಿದ್ದರು.

20ನೇ ಓವರ್‌ನಲ್ಲಿ ಆಗಿದ್ದೇನು?

ಅದು ಪಂದ್ಯದ ಮೊದಲ ಇನ್ನಿಂಗ್ಸ್‌ನ 20ನೇ ಓವರ್. 82-2 ವಿಕೆಟ್ ಕಳೆದುಕೊಂಡಿತ್ತು ಆಸ್ಟ್ರೇಲಿಯಾ. 20ನೇ ಓವರ್‌ನ ಮೊದಲ ಎಸೆತವನ್ನು ಸ್ಟೀವ್ ಸ್ಮಿತ್ ಫ್ಲಿಕ್ ಮಾಡಲು ಪ್ರಯತ್ನಿಸಿದ್ದರು. ಆದರೆ ಅದರಲ್ಲಿ ವಿಫಲವಾಗಿ ಅದು ಸ್ಮಿತ್ ಪ್ಯಾಡ್‌ಗೆ ಬಡಿದಿತ್ತು. ಆಗ ಎದುರಾಳಿ ಆಟಗಾರರು ಎಲ್‌ಬಿಡಬ್ಲ್ಯುಗಾಗಿ ಮನವಿ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ಯಾಡ್‌ಗೆ ಬಡಿದ ಚೆಂಡು ಪಾಯಿಂಟ್ ಭಾಗದತ್ತ ಸಾಗಿತ್ತು. ಈ ಸಂದರ್ಭದಲ್ಲಿ ಉಸ್ಮಾನ್ ಖವಾಜ ಆರಂಭದಲ್ಲಿ ಒಂಟಿ ರನ್ ಕದಿಯುವ ಮನಸ್ಸು ಮಾಡಿದರು. ಹೀಗಾಗಿ ಸ್ಮಿತ್ ಕೂಡ ರನ್‌ಗಾಗಿ ಓಡಿ ಬಂದರು. ಆದರೆ ಮಧ್ಯದಲ್ಲಿ ಗೊಂದಲವೊಂಟಾಗಿ ಉಸ್ಮಾನ್ ಖವಾಜ ರನ್‌ಗೆ ನಿರಾಕರಿಸಿದರು. ಆದರೆ ಅದಾಗಲೇ ಕ್ರೀಸ್‌ನ ಮುಕ್ಕಾಲು ಭಾಗ ದಾಟಿದ್ದ ಸ್ಮಿತ್ ವಿಕೆಟ್ ಕೈಚೆಲ್ಲಬೇಕಾಯಿತು.

ಆಸ್ಟ್ರೇಲಿಯಾಗೆ ಆಸರೆಯಾದ ಖವಾಜ

ಆಸ್ಟ್ರೇಲಿಯಾಗೆ ಆಸರೆಯಾದ ಖವಾಜ

ಇನ್ನು ಆಸ್ಟ್ರೇಲಿಯಾ ತಂಡದ ಪರವಾಗಿ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಹಾಗೂ ಕ್ಯಾಮರೂನ್ ಗ್ರೀನ್ ಮಾತ್ರವೇ ಉತ್ತಮ ಪ್ರದರ್ಶನ ನೀಡಲು ಸಫಲವಾಗಿದ್ದಾರೆ. ಉಸ್ಮಾನ್ ಖವಾಜ 71 ರನ್‌ಗಳಿಸಿದರೆ ಕ್ಯಾಮರೂನ್ ಗ್ರೀನ್ ಕೂಡ ಅರ್ಧ ಶತಕ ಸಿಡಿಸಿ ಆಡುತ್ತಿದ್ದಾರೆ. ಇನ್ನು ಅಲೆಕ್ಸ್ ಕ್ಯಾರಿ 45 ರನ್‌ಗಳ ಕೊಡುಗೆ ನೀಡಿದರು. ಶ್ರಿಲಂಕಾ ವಿರುದ್ಧ ಆಸಿಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದೆ.

ಸಾಧಾರಣ ರನ್ ಗಳಿಸಿದ ಲಂಕಾ ಪಡೆ

ಸಾಧಾರಣ ರನ್ ಗಳಿಸಿದ ಲಂಕಾ ಪಡೆ

ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಆತಿಥೆಯ ಶ್ರೀಲಂಕಾ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. ಲಂಕಾ ಪರವಾಗಿ ಮಧ್ಯಮ ಕ್ರಮಾಂಕದ ಆಟಗಾರ ನಿರೋಶನ್ ಡಿಕ್ವೆಲ್ಲಾ ಮಾತ್ರವೇ ಉತ್ತಮ ಪ್ರದರ್ಶನ ನೀಡಲು ಸಫಲವಾದರು. 58 ರನ್‌ಗಳಿಸಿ ತಂಡದ ಪರವಾಗಿ ಅರ್ಧ ಶತಕ ಸಿಡಿಸಿದರು. ಈ ಮೂಲಕ ಶ್ರೀಲಂಕಾ ತಂಡ 212 ರನ್‌ಗಳಿಗೆ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರವಾಗಿ ಅನುಭವಿ ಸ್ಪಿನ್ನರ್ ನಾಥನ್ ಲಿಯಾನ್ 5 ವಿಕೆಟ್‌ಗಳ ಗೊಂಚಲು ಪಡೆದರೆ ಸ್ವೆಪ್ಸನ್ ಮೂರು ವಿಕೆಟ್ ಸಂಪಾದಿಸಿದರು.

Story first published: Thursday, June 30, 2022, 18:17 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X