ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಶ್ರೀಲಂಕಾ ಆಲ್‌ರೌಂಡರ್ ತಿಸಾರ ಪೆರೆರ

Sri Lankan Cricketer Thisara Perera announces retirement from international cricket

ಶ್ರೀಲಂಕಾ ಕ್ರಿಕೆಟ್ ತಂಡದ ಆಲ್‌ರೌಂಡರ್ ತಿಸಾರ ಪೆರೆರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯವನ್ನು ಘೋಷಿಸಿದ್ದಾರೆ. ಈ ಮೂಲಕ ಲಂಕಾ ಕ್ರಿಕೆಟ್ ಪ್ರೇಮಿಗಳಿಗೆ ಪೆರೆರ ಆಘಾತವನ್ನು ನೀಡಿದ್ದಾರೆ. ಶ್ರೀಲಂಕಾ ಕ್ರಿಕೆಟ್ ತಂಡದ ಈ ಅನುಭವಿ ಆಟಗಾರ 32ರ ಹರೆಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಸರಿಯುವ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ.

ಮೂಲಗಳ ಮಾಹಿತಿಯ ಪ್ರಕಾರ ತಿಸಾರ ಪೆರೆರ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ತೆಗೆದುಕೊಳ್ಳುವ ನಿರ್ಧಾರವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಮಾಹಿತಿಯನ್ನು ನೀಡಿದ್ದಾರೆ ಎನ್ನಲಾಗಿದೆ. ಶ್ರೀಲಂಕಾದ ಈ ಆಟಗಾರ 2009ರಲ್ಲಿ ಏಕದಿನ ಕ್ರಿಕೆಟ್‌ಗೆ, 2010ರಲ್ಲಿ ಟಿ20 ಹಾಗೂ 2011ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದಾರೆ.

ಐಪಿಎಲ್ 2021 : ಕೊಲ್ಕತ್ತಾ vs ಬೆಂಗಳೂರು ಇಂದಿನ ಪಂದ್ಯ ಮುಂದೂಡಿಕೆಐಪಿಎಲ್ 2021 : ಕೊಲ್ಕತ್ತಾ vs ಬೆಂಗಳೂರು ಇಂದಿನ ಪಂದ್ಯ ಮುಂದೂಡಿಕೆ

ಒಟ್ಟು 8 ಟೆಸ್ಟ್ ಪಂದ್ಯಗಳಲ್ಲಿ ಶ್ರಿಲಂಕಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿರುವ ಪೆರೆರ ಒಂದು ಅರ್ಧ ಶತಕದ ಸಹಿತ 203 ರನ್‌ಗಳಿಸಿದ್ದಾರೆ. 166 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2338 ರನ್‌ ಹಾಗೂ 175 ವಿಕೆಟ್ ಪಡೆದುಕೊಂಡಿದ್ದರೆ 84 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿದ್ದು 1204 ರನ್‌ ಹಾಗೂ 51 ವಿಕೆಟ್ ಸಂಪಾದಿಸಿದ್ದಾರೆ. ಐಪಿಎಲ್‌ನಲ್ಲಿಯೂ ಆಡಿದ ಅನುಭವ ಹೊಂದಿರುವ ಪೆರೆರಾ ಈ ಬಾರಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಗೆ ಹೆಸರನ್ನು ನೊಂದಾಯಿಸಿದ್ದರು. 50 ಲಕ್ಷ ಮೂಲ ಬೆಲೆ ಹೊಂದಿದ್ದ ಪೆರೆರ ಅವರನ್ನು ಯಾವುದೇ ಫ್ರಾಂಚೈಸಿ ಕೊಂಡುಕೊಳ್ಳುವ ಮನಸ್ಸು ಮಾಡದ ಕಾರಣ ಹರಾಜಾಗದೆ ಉಳಿದುಕೊಂಡಿದ್ದರು.

ಶ್ರೀಲಂಕಾ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅನುಭವಿ ಆಟಗಾರರನ್ನು ಪರಿಗಣಿಸದಿರುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದೇ ಕಾರಣದಿಂದಾಗಿ ಪೆರೆರ ತಮ್ಮ ಅಂತಾರಾಷ್ಟ್ರೀಯ ನಿವೃತ್ತಿ ಘೋಷಣೆಯನ್ನು ಹಠಾತ್ ಆಗಿ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಐಪಿಎಲ್ 2021: ಕೊರೊನಾ ಆತಂಕದ ಮಧ್ಯೆಯೂ ಕೆಕೆಆರ್ ಪಾಳಯದಲ್ಲಿ ಸಣ್ಣ ನಿರಾಳತೆಐಪಿಎಲ್ 2021: ಕೊರೊನಾ ಆತಂಕದ ಮಧ್ಯೆಯೂ ಕೆಕೆಆರ್ ಪಾಳಯದಲ್ಲಿ ಸಣ್ಣ ನಿರಾಳತೆ

CSK ತಂಡದಲ್ಲಿ ಕೋವಿಡ್ ಪಾಸಿಟಿವ್ ಆಗಿರುವವರು ಯಾರು ? | Oneindia Kannada

ಮುಂಬರುವ ಬಾಂಗ್ಲಾದೇಶ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕೆಲ ಅನುಭವಿ ಆಟಗಾರರನ್ನು ಕೈಬಿಎಉವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಘೋಷಿಸಿತ್ತು. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಅನುಭವಿ ಆಟಗಾರರಾದ ದಿಮುತ್ ಕರುಣ ರತ್ನೆ, ಏಂಜಲೋ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಸುರಂಗಾ ಲಕ್ಮಲ್ ಹಾಗೂ ತಿಸರ ಪೆರೆರ ಅವರನ್ನು ಮುಂದಿನ ಸರಣಿಗಳನ್ನು ಕೈಬಿಡುವ ಸಾಧ್ಯತೆಯಿದೆ ಎಂದಿದ್ದರು.

Story first published: Monday, May 3, 2021, 15:44 [IST]
Other articles published on May 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X