ಟೀಮ್ ಇಂಡಿಯಾದ ಸ್ಟಾರ್ ಆಟಗಾರನನ್ನು ತಂಡದಿಂದ ಕೈಬಿಡಲು ಮುಂದಾದ ಡೆಲ್ಲಿ ಕ್ಯಾಪಿಟಲ್ಸ್

ಇತ್ತ ಟಿ20 ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡಗಳು ಮುಖಾಮುಖಿಯಾಗುವ ಮೂಲಕ ಕ್ರಿಕೆಟ್ ಅಭಿಮಾನಿಗಳು ರೋಮಾಂಚನಕಾರಿ ಮುಖಾಮುಖಿಗಳನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಅತ್ತ ಐಪಿಎಲ್ ಫ್ರಾಂಚೈಸಿಗಳು ಬೇರೆಯದ್ದೇ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ. ಮುಂದಿನ ಐಪಿಎಲ್ ಆವೃತ್ತಿಗೆ ಮುನ್ನ ಮಿನಿ ಹರಾಜು ಪ್ರಕ್ರಿಯೆ ನಡೆಯಲಿರುವ ಕಾರಣ ಯಾವ ಆಟಗಾರರನ್ನು ಉಳಿಸಿಕೊಂಡು ಯಾವ ಆಟಗಾರರನ್ನು ಹರಾಜಿಗೆ ಬಿಡುಗಡೆಗೊಳಿಸಬೇಕು ಎಂಬ ಲೆಕ್ಕಾಚಾರ ನಡೆಸುತ್ತಿದೆ. ಈ ಸಂದರ್ಭದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಆಟಗಾರನನ್ನು ಹೊರಗಿಡುವ ಬಗ್ಗೆ ಯೋಚನೆ ನಡೆಸಿದೆ ಎಂದು ವರದಿಯಾಗಿರುವುದು ಕುತೂಹಲ ಮೂಡಿಸಿದೆ.

ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಟಿಲ್ಸ್ ತಂಡ ಮುಂದಿನ ಆವೃತ್ತಿಗೆ ಮುನ್ನ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆಗಳು ಇದೆ. ಈ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಧಿಕೃತವಾಗಿ ಮಾಹಿತಿ ನೀಡಬೇಕಾಗಿದ್ದು ಈ ನಿರ್ಧಾರದ ಬಗ್ಗೆ ಕುತೂಹಲ ಮೂಡಿಸಿದೆ.

 T20 World Cup: ಐಪಿಎಲ್‌ನಲ್ಲಿ ಆಡಿದ್ದು ಸಹಾಯಕವಾಯಿತು ಎಂದ ಆಸ್ಟ್ರೇಲಿಯಾ ಆಲ್‌ರೌಂಡರ್ T20 World Cup: ಐಪಿಎಲ್‌ನಲ್ಲಿ ಆಡಿದ್ದು ಸಹಾಯಕವಾಯಿತು ಎಂದ ಆಸ್ಟ್ರೇಲಿಯಾ ಆಲ್‌ರೌಂಡರ್

ಮೀಸಲು ಆಟಗಾರನಾಗಿ ಆಸ್ಟ್ರೇಲಿಯಾದಲ್ಲಿರುವ ಶಾರ್ದೂಲ್

ಮೀಸಲು ಆಟಗಾರನಾಗಿ ಆಸ್ಟ್ರೇಲಿಯಾದಲ್ಲಿರುವ ಶಾರ್ದೂಲ್

ಶಾರ್ದೂಲ್ ಠಾಕೂರ್ ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ಮೀಸಲು ಆಟಗಾರನಾಗಿ ಹೆಸರಿಸಲ್ಪಟ್ಟಿದ್ದಾರೆ. ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಪೈಪೋಟಿಯಿರುವ ಕಾರಣ ಶಾರ್ದೂಲ್ ಠಾಕೂರ್‌ಗೆ ಪ್ರಾಥಮಿಕ ತಂಡದಲ್ಲಿ ಅವಕಾಶ ಸಿಕ್ಕಿಲ್ಲ. ಆದರೆ ಮೀಸಲು ಆಟಗಾರನಾಗಿ ಅವಕಾಶ ಪಡೆದುಕೊಂಡಿದ್ದಾರೆ ಮುಂಬೈ ಮೂಲದ ಈ ಆಟಗಾರ.

ಕಳೆದ ಆವೃತ್ತಿಯಲ್ಲಿ ಎಡವಿದ ಠಾಕೂರ್

ಕಳೆದ ಆವೃತ್ತಿಯಲ್ಲಿ ಎಡವಿದ ಠಾಕೂರ್

ಶಾರ್ದೂಲ್ ಠಾಕೂರ್ ಕಳೆದ ಐಪಿಎಲ್ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜಿನಲ್ಲಿ 10.75 ಕೋಟಿ ಮೊತ್ತ ಪಡೆಯುವ ಮೂಲಕ ದೊಡ್ಡ ಮೊತ್ತವನ್ನು ಗಳಿಸಿಕೊಂಡಿದ್ದರು ಕೂಡ ಆ ಬೃಹತ್ ಮೊತ್ತಕ್ಕೆ ಪೂರಕವಾದ ಪ್ರದರ್ಶನ ನೀಡಲು ವಿಫಲವಾದರು. ಆಡಿದ 14 ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ 140 ರನ್‌ಗಳನ್ನು ಗಳಿಸಿದ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ 15 ವಿಕೆಟ್ ಸಂಪಾದಿಸಿದ್ದರೂ ಅವರ ಎಕಾನಮಿ ರೇಟ್ 10ರ ಸನಿಹದಲ್ಲಿತ್ತು ಎಂಬುದು ಗಮನಾರ್ಹ.

ಮತ್ತಿಬ್ಬರು ಪ್ರತಿಭಾನ್ವಿತರನ್ನು ಕೈಬಿಡಲು ಡಿಸಿ ನಿರ್ಧಾರ?

ಮತ್ತಿಬ್ಬರು ಪ್ರತಿಭಾನ್ವಿತರನ್ನು ಕೈಬಿಡಲು ಡಿಸಿ ನಿರ್ಧಾರ?

ಇನ್ನು ಕ್ರಿಕ್‌ಬಜ್ ವರದಿಯ ಪ್ರಕಾರ ಶಾರ್ದೂಲ್ ಠಾಕೂರ್ ಮಾತ್ರವಲ್ಲದೆ ಮತ್ತಿಬ್ಬರು ಪ್ರತಿಭಾನ್ವಿತ ಆಟಗಾರರನ್ನು ಕೂಡ ಮುಂದಿನ ಆವೃತ್ತಿಯ ಹರಾಜಿಗೂ ಮುನ್ನ ತಂಡದಿಂದ ಕೈಬಿಡಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ಯೋಜಿಸಿದೆ ಎನ್ನಲಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಕೆಎಸ್ ಭರತ್ ಮತ್ತು ಬ್ಯಾಟರ್ ಮಂದೀಪ್ ಸಿಂಗ್ ಡಿಸಿ ತಂಡದಿಂದ ಹೊರಬೀಳುವ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಡಿಸೆಂಬರ್ 16ರಂದು ಹರಾಜು

ಡಿಸೆಂಬರ್ 16ರಂದು ಹರಾಜು

ಇನ್ನು ಬಿಸಿಸಿಐ ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಗೆ ಮಿನಿ ಹರಾಜಿಗಾಗಿ ತಂಡದಿಂದ ಕೈಬಿಡುವ ಆಟಗಾರರ ಪಟ್ಟಿಯನ್ನು ನವೆಂಬರ್ 15ಕ್ಕೆ ಮುನ್ನ ಬಿಡುಗಡೆಗೊಳಿಸಬೇಕು ಎಂದು ಸೂಚನೆ ನೀಡಿದೆ. ಡಿಸೆಂಬರ್ 16ರಂದು ಈ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದ್ದು ಬೆಂಗಳೂರು ಅಥವಾ ಟರ್ಕಿಯ ಇಸ್ತಾಂಬೂಲ್‌ನಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಇನ್ನು ಆಟಗಾರರನ್ನು ಟ್ರೇಡ್ ಮಾಡುವ ಪ್ರಕ್ರಿಯೆ 2022ರ ಐಪಿಎಲ್ ಆವೃತ್ತಿ ಅಂತ್ಯವಾಗುತ್ತಿದ್ದಂತೆಯೇ ಜಾರಿಗೆ ಬಂದಿದ್ದರೂ ಮೇಲ್ನೋಟಕ್ಕೆ ಅದಕ್ಕೆ ಪೂರಕವಾದ ಯಾವ ಬೆಳವಣಿಗೆಗಳು ಕೂಡ ಈವರೆಗೆ ನಡೆದಿಲ್ಲ.

For Quick Alerts
ALLOW NOTIFICATIONS
For Daily Alerts
Story first published: Thursday, October 27, 2022, 10:19 [IST]
Other articles published on Oct 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X