ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

"ಹಳೆಯ ಬಲಿಷ್ಠ ಆಸ್ಟ್ರೇಲಿಯಾದ ರಣತಂತ್ರವನ್ನು ಭಾರತ ಅನುಸರಿಸುತ್ತಿದೆ"

Steve Harmison said Indias Day 5 performances are similar to great Australian teams of the early 2000s

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಇಂಗ್ಲೆಂಡ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಮುನ್ನಡೆಯನ್ನು ಸಾಧಿಸಿದೆ. ಓವಲ್ ಅಂಗಳದಲ್ಲಿ 50 ವರ್ಷಗಳ ನಂತರ ಟೀಮ್ ಇಂಡಿಯಾ ಸಾಧಿಸಿದ ಗೆಲುವಿನ ಬಗ್ಗೆ ಸಾಕಷ್ಟು ಮಾಜಿ ಕ್ರಿಕೆಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಟೀಮ್ ಇಂಡಿಯಾ ತೋರಿದ ಹೋರಾಟಕ್ಕೆ ಅದ್ಭುತ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಇಂಗ್ಲೆಂಡ್ ತಂಡದ ಮಾಜಿ ವೇಗದ ಬೌಲರ್ ಸ್ಟೀವ್ ಹಾರ್ಮಿಸನ್ ಟೀಮ್ ಇಂಡಿಯಾದ ಪ್ರದರ್ಶನವನ್ನು ಹಿಂದಿನ ಬಲಿಷ್ಠ ಆಸ್ಟ್ರೇಲಿಯಾ ತಂಡದ ಪ್ರದರ್ಶನಕ್ಕೆ ಹೋಲಿಸಿದ್ದಾರೆ.

ಓವಲ್ ಅಂಗಳದಲ್ಲಿ ಟೀಮ್ ಇಂಡಿಯಾ ಐದನೇ ದಿನದಲ್ಲಿ ನೀಡಿದ ಪ್ರದರ್ಶನ ಈ ಹಿಂದೆ ರಿಕಿ ಪಾಂಟಿಂಗ್ ಹಾಗೂ ಸ್ಟೀವ್ ವಾ ನೇತೃತ್ವದ ಆಸ್ಟ್ರೇಲಿಯಾ ತಂಡ ಪ್ರಮುಖ ಘಟ್ಟಗಳಲ್ಲಿ ನೀಡುತ್ತಿದ್ದ ಪ್ರದರ್ಶನವನ್ನು ನೆನಪಿಸುವಂತಿತ್ತು ಎಂದು ಸ್ಟೀವ್ ಹಾರ್ಮಿಸನ್ ಹೇಳಿದ್ದಾರೆ. ಟೆಸ್ಟ್ ಸರಣಿಯಲ್ಲಿ ಭಾರತ ಮತ್ತೊಮ್ಮೆ ಐದನೇ ದಿನ ಅದ್ಭುತ ಪ್ರದರ್ಶನ ನೀಡುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದ್ದು ನಾಲ್ಕನೇ ಟೆಸ್ಟ್ ಪಂದ್ಯವನ್ನು 157 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ.

ರೋಹಿತ್ ಶರ್ಮಾಗೆ ಗಾಯ, 5ನೇ ಟೆಸ್ಟ್‌ನಲ್ಲಿ ಆಡೋ ಬಗ್ಗೆ ಸುಳಿವಿತ್ತ ಹಿಟ್‌ಮ್ಯಾನ್ರೋಹಿತ್ ಶರ್ಮಾಗೆ ಗಾಯ, 5ನೇ ಟೆಸ್ಟ್‌ನಲ್ಲಿ ಆಡೋ ಬಗ್ಗೆ ಸುಳಿವಿತ್ತ ಹಿಟ್‌ಮ್ಯಾನ್

ಇದಕ್ಕೂ ಮುನ್ನ ಭಾರತ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸರಣಿಯಲ್ಲಿ ಮೊದಲ ಬಾರಿಗೆ ಮುನ್ನಡೆ ಸಾಧಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಮೊಹಮ್ಮದ್ ಶಮಿ ಹಾಘೂ ಜಸ್ಪ್ರೀತ್ ಬೂಮ್ರಾ 9ನೇ ವಿಕೆಟ್‌ಗೆ ದಾಖಲೆಯ 89 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ತಂಡಕ್ಕೆ ನೆರವಾಗಿದ್ದರು. ಈ ಮೂಲಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹೊಂದಿದ್ದ ಬಿಗಿ ಪಟ್ಟನ್ನು ಸಡಿಲಿಸಿ ಅಂತಿಮ ದಿನ ಭಾರತ ತಂಡದ ಮೇಲುಗೈಗೆ ಕಾರಣವಾದರು. ಇನ್ನು ಐದನೇ ದಿನದಾಟದ ಒತ್ತಡವನ್ನ ಭಾರತೀಯ ಆಟಗಾರರು ನಿಭಾಯಿಸಲು ಐಪಿಎಲ್ ನೆರವಾಗಿದೆ ಎಂಬುದನ್ನು ಕೂಡ ಹಾರ್ಮಿಸನ್ ಅಭಿಪ್ರಾಯಪಟ್ಟಿದ್ದಾರೆ.

"ಪಂದ್ಯದ ಐದನೇ ದಿನದಾಟದಲ್ಲಿ ಒತ್ತಡದ ಸಂದರ್ಭದಲ್ಲಿ ಟೀಮ್ ಇಂಡಿಯಾ ಪರಿಸ್ಥಿತಿಯನ್ನು ತನ್ನ ಪರವಾಗಿಸಲು ಯಶಸ್ವಿಯಾಗುತ್ತಿದೆ. ಅವರು ಮುನ್ನುಗ್ಗುತ್ತಲೇ ಇರುತ್ತಾರೆ ಹಾಗೂ ಎದುರಾಳಿಗಳುಗೆ ಸವಾಲನ್ನು ಹಾಕುತ್ತಾ ಇರುತ್ತಾರೆ. ಕೆಲ ಬಾರಿ ಐದನೇ ದಿನ ನೀವು ಹೆಚ್ಚು ದಣಿದಿರುತ್ತೀರಿ. ಇಂತಾ ಸಂದರ್ಭದಲ್ಲಿ ಭಾರತೀಯ ಆಟಗಾರರು ಐಪಿಎಲ್‌ನಲ್ಲಿ ಒತ್ತಡದ ಸಂದರ್ಭದಲ್ಲಿ ಆಡಿದಂತೆ ಸತತವಾಗಿ ಒತ್ತಡದಲ್ಲಿ ಆಡಿದ ಅನುಭವ ಹೊಂದಿದಾಗ ಮಾತ್ರ ಇಂತಾ ಸಾಮರ್ಥ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಆಗ ನೀವು ಎದುರಾಳಿಯನ್ನು ಹಿನ್ನೆಟ್ಟಿಸಬಹುದು" ಎಂದು ಸ್ಟೀವ್ ಹಾರ್ಮಿಸನ್ ಇಎಸ್‌ಪಿಎಸ್ ಕ್ರಿಕ್‌ ಇನ್ಫೋಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಅಂದಿನ ಶ್ರೇಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ನಾನು ಹಾಗೂ ವಿವಿಎಸ್ ಲಕ್ಷ್ಮಣ್ ಆಡಿದ ಅನುಭವ ಹೊಂದಿದ್ದೇವೆ. ಅವರು ಅಂತಿಮ ದಿನ ನಿಮ್ಮನ್ನು ಕುಸಿಯುವಂತೆ ಮಾಡುತ್ತಿದ್ದರು. ಅಂತಾ ಸಂದರ್ಭದಲ್ಲಿಯೇ ಅವರ ಕೌಶಲ್ಯ ಸಂಪೂರ್ಣವಾಗಿ ಹೊರಬರುತ್ತಿತ್ತು ಈ ಮೂಲಕ ಅವರು ಗೆಲ್ಲುತ್ತಿದ್ದರು. ನನ್ನ ಪ್ರಕಾರ ಈಗಿನ ಭಾರತ ತಂಡವೂ ಕೂಡ ಹಾಗೆಯೇ ಮಾಡುತ್ತಿದೆ. ಅವರು ತಂಡವನ್ನು ಕುಸಿಯುವಂತೆ ಮಾಡುತ್ತಾರೆ. ಬಳಿಕ ಅವರಿಗೆ ಒತ್ತಡದ ಸಂದರ್ಭದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಮಾಡಿದ ಅನುಭವವಿದೆ. ಹೀಗಾಗಿ ಅಂತಿಮ ಹಂತದಲ್ಲಿ ಅವರ ಕೌಶಲ್ಯ ಸಂಪೂರ್ಣವಾಗಿ ಹೊರಬರುತ್ತದೆ" ಎಂದಿದ್ದಾರೆ ಸ್ಟೀವ್ ಹಾರ್ಮಿಸನ್.

ಓವಲ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ದಾಖಲೆ ನಿರ್ಮಿಸಿದ ಎರಡೂ ತಂಡಗಳ ನಾಲ್ವರು ಆಟಗಾರರುಓವಲ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ದಾಖಲೆ ನಿರ್ಮಿಸಿದ ಎರಡೂ ತಂಡಗಳ ನಾಲ್ವರು ಆಟಗಾರರು

ರೋಹಿತ್ ಶರ್ಮಾ ಮ್ಯಾನ್ ಆಫ್ ದಿ ಮ್ಯಾಚ್ ನಿರಾಕರಿಸಲು ಕಾರಣ ಈ ಆಟಗಾರ | Oneindia Kannada

ಓವಲ್‌ನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ನಾಲ್ಕು ಪಂದ್ಯಗಳು ಮುಕ್ತಾಯವಾದ ಹಂತದಲ್ಲಿ ಭಾರತ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ ಇನ್ನು ಸರಣಿಯನ್ನು ಸೋಲಲು ಸಾಧ್ಯವಿಲ್ಲ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದರೆ ಸರಣಿ ಡ್ರಾ ಗೊಳ್ಳುವ ಸಾಧ್ಯತೆ ಮಾತ್ರ ಇರುತ್ತದೆ. ಹೀಗಾಗಿ ಟೀಮ್ ಇಂಡಿಯಾ ಅಂತಿಮ ಪಂದ್ಯವನ್ನು ಕೂಡ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದೆ. ಸರಣಿಯ ಕೊನೆಯ ಪಂದ್ಯ ಓಲ್ಡ್ ಟ್ರಾಫಾರ್ಡ್‌ನಲ್ಲಿ ಸೆಪ್ಟೆಂಬರ್ 10ರಿಂದ ಆರಂಭವಾಗಲಿದೆ.

Story first published: Tuesday, September 7, 2021, 16:34 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X