ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್, ವಾರ್ನರ್ ಸೇರಿ ಆಸೀಸ್ ಆಟಗಾರರಿಗೆ ಕ್ವಾರಂಟೈನ್‌ನಿಂದ ಮುಕ್ತಿ

Steve Smith, David Warner among Australia players released from quarantine in Sydney

ಸಿಡ್ನಿ: ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್ ಸೇರಿದಂತೆ ಆಸ್ಟ್ರೇಲಿಯಾದ ಆಟಗಾರರು, ಅಧಿಕಾರಿಗಳ ಕಡ್ಡಾಯ ಕ್ವಾರಂಟೈನ್ ಕೊನೆಗೊಂಡಿದೆ. ಚಾರ್ಟರ್ಡ್ ಫ್ಲೈಟ್‌ನಲ್ಲಿ ಮಾಲ್ಡೀವ್ಸ್‌ನಿಂದ ವಾಪಸ್ಸಾದ ಬಳಿಕ ಈ ಆಟಗಾರರು, ಅಧಿಕಾರಿಗಳು ಸಿಡ್ನಿಯಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಿದ್ದರು.

ಐಪಿಎಲ್ ಇನ್ನುಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಡಲ್ಲ!ಐಪಿಎಲ್ ಇನ್ನುಳಿದ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಆಡಲ್ಲ!

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾ ಆಟಗಾರರು, ಅಧಿಕಾರಿಗಳು ಕೋವಿಡ್ ಕಾರಣದಿಂದ ಐಪಿಎಲ್ ಮುಂದೂಡಲ್ಪಟ್ಟಾಗ ಮಾಲ್ಡೀವ್ಸ್‌ಗೆ ತೆರಳಿದ್ದರು. ಯಾಕೆಂದರೆ ಆ ವೇಳೆ ಭಾರತದಿಂದ ಬರುವ ಪ್ರಯಾಣಿಕರಿಗೆ ಆಸ್ಟ್ರೇಲಿಯಾ ನಿಷೇಧ ಹೇರಿತ್ತು. ನಿಷೇಧ ತೆಗೆದ ಬಳಿಕ ಆಸೀಸ್ ಕ್ರಿಕೆಟಿಗರು ತವರು ನೆಲಕ್ಕೆ ಬಂದು ಕ್ವಾರಂಟೈನ್ ಆರಂಭಿಸಿದ್ದರು.

ವಾರ್ನರ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ. ತನ್ನ ಕುಟುಂಬವನ್ನು ತಾನು ಮತ್ತೆ ಸೇರಿಕೊಂಡಿರುವುದಾಗಿ ವಾರ್ನರ್ ಈ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. 'ಮನೆಯಲ್ಲಿರಲು ಖುಷಿಯಾಗುತ್ತಿದೆ' ಎಂದು ಅದರಲ್ಲಿ ಬರೆಯಲಾಗಿದೆ. ಮತ್ತೊಂದು ಇನ್‌ಸ್ಟಾ ಪೋಸ್ಟ್‌ನಲ್ಲಿ ವಾರ್ನರ್ ತನ್ನ ಪತ್ನಿ ಮತ್ತು ಪುತ್ರಿಯರ ಫೋಟೋ ಹಂಚಿಕೊಂಡಿದ್ದಾರೆ.

ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!ಯಾರಾಗ್ತಾರೆ ಧೋನಿ ಬಳಿಕ ಚೆನ್ನೈ ತಂಡದ ನಾಯಕ? ಈ 5 ಆಟಗಾರರ ಮೇಲೆ ಸಿಎಸ್‌ಕೆ ಕಣ್ಣು!

'ಕ್ವಾರಂಟೈನ್ ಬಳಿಕ ಶುದ್ಧಗಾಳಿ ಸೇವಿಸಲು ಸೊಗಸಾಗಿದೆ' ಎಂದು ಆಸೀಸ್ ವೇಗಿ ಜೇಸನ್ ಬೆಹ್ರೆಂಡೋರ್ಫ್ ಪ್ರತಿಕ್ರಿಯಿಸಿದ್ದಾರೆ. ಮೇ 4ರಂದು ಐಪಿಎಲ್ ಅಮಾನತುಗೊಂಡಿತ್ತು. ಆಗ 29 ಪಂದ್ಯಗಳು ನಡೆದಿದ್ದವು. ಇನ್ನೂ 31 ಪಂದ್ಯಗಳು ಬಾಕಿಯುಳಿದಿದ್ದು, ಆ ಪಂದ್ಯಗಳನ್ನು ಯುಎಇಯಲ್ಲಿ ನಡೆಸುವುದಾಗಿ ಬಿಸಿಸಿಐ ಹೇಳಿದೆ. ಸೆಪ್ಟೆಂಬರ್‌-ಅಕ್ಟೋಬರ್‌ನಲ್ಲಿ ಈ ಪಂದ್ಯಗಳು ನಡೆಯಲಿವೆ.

Story first published: Monday, May 31, 2021, 15:25 [IST]
Other articles published on May 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X