ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಮಿತ್-ವಾರ್ನರ್‌ಗೆ 1 ವರ್ಷ ನಿಷೇಧ ಕಡಿಮೆಯಾಯ್ತು ಎಂದ ವಿಶ್ವಶ್ರೇಷ್ಠ ಬೌಲರ್!

Steve Smith, David Warner got away with murder: Curtly Ambrose

ಸಿಡ್ನಿ, ಏಪ್ರಿಲ್ 11: ಚೆಂಡು ವಿರೂಪದಲ್ಲಿ ಪಾಲ್ಗೊಳ್ಳುವ ಮೂಲಕ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಕ್ರಿಕೆಟ್‌ನಲ್ಲಿ 'ಕೊಲೆ'ಯಂತ ಅಪರಾಧ ಮಾಡಿದ್ದಾರೆ. ಅವರಿಗೆ ಒಂದು ವರ್ಷದ ನಿಷೇಧ ಶಿಕ್ಷೆ ಕಡಿಮೆಯಾಯ್ತು. ಇನ್ನೊಂದು ವರ್ಷ ನಿಷೇಧ ಹೇರಬೇಕಿತ್ತು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ, ಮಾಜಿ ವೇಗಿ ಕರ್ಟ್ಲಿ ಆ್ಯಂಬ್ರೋಸ್ ಹೇಳಿದ್ದಾರೆ.

ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ದಕ್ಷಿಣ ಆಫ್ರಿಕಾದಲ್ಲಿ ಕಳೆದ ವರ್ಷ ನಡೆದಿದ್ದ ಟೆಸ್ಟ್ ವೇಳೆ ಬಾಲ್ ಟ್ಯಾಂಪರಿಂಗ್ ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಮಿತ್ ಮತ್ತು ಮಾಜಿ ಉಪನಾಯಕ ವಾರ್ನರ್‌ಗೆ ವಿಧಿಸಲಾಗಿದ್ದ ವರ್ಷದ ನಿಷೇಧ ಈ ವರ್ಷ ಮಾರ್ಚ್ 29ಕ್ಕೆ ಕೊನೆಗೊಂಡಿದೆ. ಇಬ್ಬರೂ ಈಗ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುತ್ತಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಆತಿಥೇಯರ ವಿರುದ್ಧದ ಟೆಸ್ಟ್ ವೇಳೆ ಚೆಂಡು ವಿಪರೂಪಗೊಳಿಸಿ ಸಿಕ್ಕಿಬಿದ್ದು, ಆಸ್ಟ್ರೇಲಿಯಾದ ಸ್ಮಿತ್, ವಾರ್ನರ್ ಮತ್ತು ಕೆಮರಾನ್ ಬ್ಯಾನ್‌ಕ್ರಾಫ್ಟ್‌ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಈಗ ಮೂವರ ಮೇಲಿನ ಶಿಕ್ಷೆಯೂ ಅಂತ್ಯ ಕಂಡಿದೆ. ಸ್ಮಿತ್-ವಾರ್ನರ್ ಆಸ್ಟ್ರೇಲಿಯಾ ವಿಶ್ವಕಪ್‌ ತಂಡವನ್ನು ಸೇರಿಕೊಳ್ಳುವತ್ತ ಕಣ್ಣಿಟ್ಟಿದ್ದಾರೆ.

ಒಬ್ಬರನ್ನೊಬ್ಬರು ಗುರಾಯಿಸಿದ ಹಾರ್ದಿಕ್-ಹಾರ್ಡಸ್: ವೈರಲ್ ವಿಡಿಯೋಒಬ್ಬರನ್ನೊಬ್ಬರು ಗುರಾಯಿಸಿದ ಹಾರ್ದಿಕ್-ಹಾರ್ಡಸ್: ವೈರಲ್ ವಿಡಿಯೋ

ಆದರೆ ಕರ್ಟ್ಲಿಗೆ ಇಬ್ಬರ ಮೇಲೆ ಒಂದುವರ್ಷದ ಶಿಕ್ಷೆ ವಿಧಿಸಿದ್ದು ಸಮಾಧಾನ ತಂದಿಲ್ಲ. 'ಇವರಿಬ್ಬರು ಮಾಡಿದಂತೆ ಯಾರೇ ನಿಯಮ ಮೀರಿ ನಡಕೊಂಡರೂ ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು' ಎಂದು ಫಾಕ್ಸ್ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ ಆ್ಯಂಬ್ರೋಬ್ ಹೇಳಿಕೊಂಡಿದ್ದಾರೆ. ಈಗ 55ರ ಹರೆಯದ ಕರ್ಟ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 400ಕ್ಕೂ ಹೆಚ್ಚು ವಿಕೆಟ್‌ ಪಡೆದ ವಿಶ್ವದ 15 ಬೌಲರ್‌ಗಳೊಳಗೆ ಗುರುತಿಸಿಕೊಂಡಿದ್ದಾರೆ.

Story first published: Thursday, April 11, 2019, 17:13 [IST]
Other articles published on Apr 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X