ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2019: ಆರ್‌ಸಿಬಿ ಪಂದ್ಯದ ಬಳಿಕ ಸ್ಟೀವನ್‌ ಸ್ಮಿತ್‌ ಮನೆಗೆ

Steve Smith to leave IPL 2019 after RCB game

ಜೈಪುರ, ಏಪ್ರಿಲ್‌ 26: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಏ.30ರಂದು ನಡೆಯಲಿರುವ ಪಂದ್ಯದ ಬಳಿಕ ರಾಜಸ್ಥಾನ್‌ ರಾಯಲ್ಸ್‌ ತಂಡ ನೂತನ ನಾಯಕ ಸ್ಟೀವನ್‌ ಸ್ಮಿತ್‌ ವಿಶ್ವಕಪ್‌ ಪೂರ್ವ ಸಿದ್ಧತೆ ಸಲುವಾಗಿ ಆಸ್ಟ್ರೇಲಿಯಾ ತಂಡ ಸೇರಿಕೊಳ್ಳಲು ತಾಯ್ನಾಡಿಗೆ ಹಿಂದಿರುಗಲಿದ್ದಾರೆ.

 ಐಪಿಎಲ್: ಪರಾಗ್-ಆರ್ಚರ್ ಸಾಹಸ, ಕೆಕೆಆರ್ ವಿರುದ್ಧ ಆರ್‌ಆರ್‌ಗೆ ರೋಚಕ ಜಯ ಐಪಿಎಲ್: ಪರಾಗ್-ಆರ್ಚರ್ ಸಾಹಸ, ಕೆಕೆಆರ್ ವಿರುದ್ಧ ಆರ್‌ಆರ್‌ಗೆ ರೋಚಕ ಜಯ

ಕೋಲ್ಕೊತಾ ನೈಟ್‌ ರೈಡರ್ಸ್‌ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ 3 ವಿಕೆಟ್‌ಗಳ ಜಯ ದಾಖಲಿಸಿತ್ತು. ಈ ಪಂದ್ಯದ ಬಳಿಕ ಮಾತನಾಡಿದ ಸ್ಮಿತ್‌, ಆರ್‌ಸಿಬಿ ಪಂದ್ಯದ ಬಳಿಕ ತಾವು ಆಸ್ಟ್ರೇಲಿಯಾಗೆ ಹಿಂದಿರುಗುತ್ತಿರುವ ವಿಚಾರ ಬಹಿರಂಗ ಪಡಿಸಿದ್ದಾರೆ.

 ಟಿ20 ಕ್ರಿಕೆಟ್‌: ಬಿಗ್‌ ಬ್ಯಾಷ್‌ ಲೀಗ್‌ಗೆ ಶೇನ್‌ ವ್ಯಾಟ್ಸನ್‌ ಗುಡ್‌ ಬೈ ಟಿ20 ಕ್ರಿಕೆಟ್‌: ಬಿಗ್‌ ಬ್ಯಾಷ್‌ ಲೀಗ್‌ಗೆ ಶೇನ್‌ ವ್ಯಾಟ್ಸನ್‌ ಗುಡ್‌ ಬೈ

ಇನ್ನು ಲೀಗ್‌ ಹಂತದ ಅಂತಿಮ ಮೂರು ಪಂದ್ಯಗಳಿಗೆ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಬೆನ್‌ ಸ್ಟೋಕ್ಸ್‌ ಮತ್ತು ಜೋಫ್ರಾ ಆರ್ಚರ್‌ ಅವರ ಸೇವೆಯೂ ಇಲ್ಲದಂತಾಗಿದೆ.

ಇಂಗ್ಲೆಂಡ್‌ ತಂಡ ವಿಶ್ವಕಪ್‌ ಪೂರ್ವ ಸಿದ್ಧತೆಗಾಗಿ ಐರ್ಲೆಂಡ್‌ ಮತ್ತು ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯನ್ನಾಡಲಿದೆ. ಹೀಗಾಗಿ ಇಂಗ್ಲೆಂಡ್‌ ಆಟಗಾರರು ಐಪಿಎಲ್‌ ಅಭಿಯಾನವನ್ನು ಮೊಟಕು ಗೋಳಿಸಿ ತವರಿಗೆ ಮರಳಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿದೆ.

 ಐಪಿಎಲ್ 2019: ಗೆಲುವಿನ ಹಾದಿಗೆ ಮರಳಿದ ಆರ್ ಸಿಬಿಗೆ ಆಘಾತ ಐಪಿಎಲ್ 2019: ಗೆಲುವಿನ ಹಾದಿಗೆ ಮರಳಿದ ಆರ್ ಸಿಬಿಗೆ ಆಘಾತ

"ಕೆಲ ಆಟಗಾರರ ಸೇವೆ ಇಲ್ಲವಾಗಿದೆ. ಜೋಫ್ರಾ ಮತ್ತು ಸ್ಟೋಕ್ಸ್‌ ಇಂದು ರಾತ್ರಿಯಾ ಹಿಂದಿರುಗುತ್ತಿದ್ದಾರೆ. ತಂಡದಲ್ಲಿ ಅವರಿಬ್ಬರ ಸ್ಥಾನ ತುಂಬಬೇಕಿದೆ. ಆರ್‌ಸಿಬಿ ವಿರುದ್ಧದ ಪಂದ್ಯದ ನಂತರ ನಾನೂ ತವರಿಗೆ ಹಿಂದಿರುಗಲಿದ್ದೇನೆ. ಹೀಗಾಗಿ ಉಳಿದ ಪಂದ್ಯದಲ್ಲಿ ತಂಡಕ್ಕೆ ಜಯ ತಂದುಕೊಡುವ ಪ್ರಯತ್ನ ನಡೆಸುತ್ತೇನೆ,'' ಎಂದು ಸ್ಮಿತ್‌ ಹೇಳಿದ್ದಾರೆ.

 ಐಪಿಎಲ್‌ 2019: ಚೆಂಡನ್ನು ಜೇಬಲಿಟ್ಟು, ಎಲ್ಲಿಟ್ಟಿದ್ದೇನೆಂದು ಮರೆತ ಅಂಪೈರ್‌! ಐಪಿಎಲ್‌ 2019: ಚೆಂಡನ್ನು ಜೇಬಲಿಟ್ಟು, ಎಲ್ಲಿಟ್ಟಿದ್ದೇನೆಂದು ಮರೆತ ಅಂಪೈರ್‌!

ಸತತ ಸೋಲುಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ ತನ್ನ ನಾಯಕ ಅಜಿಂಕ್ಯ ರಹಾನೆಗೆ ಕೊಕ್‌ ನೀಡಿ ಸ್ಮಿತ್‌ ಅವರನ್ನು ತಂಡದ ನೂತನ ನಾಯಕನನ್ನಾಗಿ ನೇಮಕ ಮಾಡಿತ್ತು.

ಅಂಕಪಟ್ಟಿಯಲ್ಲಿ 8 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಪೈಪೋಟಿ ನಡೆಸಲಿದೆ.

Story first published: Friday, April 26, 2019, 14:16 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X