ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾರ್ಡರ್-ಗವಾಸ್ಕರ್ ಸರಣಿ ಆ್ಯಶಸ್ ಸರಣಿಗೆ ಸರಿಸಮ-ಸ್ಟೀವ್ ವಾ

Steve Waugh Says Border-Gavaskar Trophy is equivalent to Ashes

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯಷ್ಟೇ ಮುಖ್ಯವಾದದ್ದು ಎಂದು ಹೇಳಿಕೆಯನ್ನು ನೀಡಿದ್ದಾರೆ. ಶುಕ್ರವಾರ ಮಾತನಾಡಿದ ಅವರು ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಪ್ರಾಮುಖ್ಯತೆಯ ಬಗ್ಗೆ ಹೇಳಿದ್ದಾರೆ.

ಕ್ರಿಕೆಟ್ ಆಡುವ ಎರಡು ರಾಷ್ಟ್ರಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ವಿಶ್ವ ಕ್ರಿಕೆಟ್‌ನಲ್ಲಿ ಎರಡು ರಾಷ್ಟ್ರಗಳ ಅತ್ಯಂತ ಪ್ರತಿಷ್ಠಿತ ಸರಣಿ ಎಂದು ಬಿಂಬಿತವಾಗಿದೆ. ಅಷ್ಟೇ ಮಹತ್ವವನ್ನು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯೂ ಪಡೆದುಕೊಂಡಿದೆ ಎಂದು ಆಸಿಸ್ ತಂಡದ ಮಾಜಿ ನಾಯಕ ಹೇಳಿದ್ದಾರೆ.

ಬೌಲರ್‌ಗಳಿಗೆ ಹತಾಶೆ ಮೂಡಿಸುವ ಆಟಗಾರ ರೋಹಿತ್ ಎಂದ ಆಸಿಸ್ ವೇಗಿಬೌಲರ್‌ಗಳಿಗೆ ಹತಾಶೆ ಮೂಡಿಸುವ ಆಟಗಾರ ರೋಹಿತ್ ಎಂದ ಆಸಿಸ್ ವೇಗಿ

ಎರಡು ತಂಡಗಳ ನಡುವಿನ ಹಣಾಹಣಿಯ ಅಂಕಿಅಂಶಗಳೇ ಈ ವಿಚಾರಕ್ಕೆ ಪುಷ್ಟಿ ನೀಡುತ್ತದೆ 1986ರ ಸರಣಿ ಸಮಬಲವಾಗಿತ್ತು. ನಾನು ಆಡಿದ ಅತ್ಯಂತ ಶ್ರೇಷ್ಠ ಸರಣಿ ಅದು. 2001ರ ಕೊಲ್ಕತ್ತಾ ಸೋಲು ಯಾವತ್ತೂ ನೆನಪಿನಲ್ಲಿ ಉಳಿಯುವಂತದ್ದು ಎಂದು ಸ್ಟೀವ್ ವಾ ಭಾರತ ಆಸಿಸ್ ನಡುವನ ಕದನವನ್ನು ಸ್ಮರಿಸಿಕೊಂಡರು.

ಇನ್ನು ಇದೇ ಸಂದರ್ಭದಲ್ಲಿ ಸ್ಟೀವ್ ವಾ ಭಾರತ ಬಗ್ಗೆ ತಮ್ಮ ಪ್ರೀತಿಯನ್ನು ವ್ತಕ್ತಪಡಿಸಿದರು. ಭಾರತವೆಂದರೆ ಕುತೂಹಲಕಾರಿ, ನಾನು ಅಲ್ಲಿ ಪ್ರಯಾಣಿಸುವಾಗಿ ಹೊರಗೆ ನೋಡುವುದನ್ನು ನಿಲ್ಲಿಸುವುದಿಲ್ಲ. ಅಲ್ಲಿನ ಸ್ಥಳಗಳ ಬಗ್ಗೆ ನಾನು ಸಾಮಷ್ಟು ಕುತೂಹಲಕಾರಿಯಾಗಿದ್ದೇನೆ. ಕ್ರಿಕೆಟ್‌ನ ಜೊತೆಗೆ ಭಾರತದ ನಂಟು ಶ್ರೇಷ್ಠವಾದದ್ದು ಎಂದು ಸ್ಟೀವ್ ವಾ ಆನ್‌ಲೈನ್ ಸಂವಾದವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಇನ್ನು ಇದೇ ಸಂದರ್ಭದಲ್ಲಿ ಸ್ಟೀವ್ ವಾ ಭಾರತದಲ್ಲಿ ಕ್ರಿಕೆಟ್ ಹೇಗೆ ಒಂದು ಧರ್ಮವಾಗಿದೆ ಎಂಬ ದೃಷ್ಟಿಕೋನದಲ್ಲಿ ಪುಸ್ತಕವೊಂದನ್ನು ಹೊರತರುವ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿಕೊಂಡರು. ಭಾರತ ಹಾಗೂ ಆಸ್ಟ್ರೇಲಿಯಾವನ್ನು ಈ ಪುಸ್ತಕದ ಮೂಲಕ ಜೊತೆಯಾಗಿಸಬಹುದು ಎಂದು ಎಂದು ಸ್ಟೀವ್ ವಾ ಹೇಳಿದ್ದಾರೆ.

Story first published: Friday, July 10, 2020, 16:15 [IST]
Other articles published on Jul 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X