ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಗೆ ಗವಾಸ್ಕರ್ ತರಾಟೆಗೆ ತೆಗೆದುಕೊಂಡಿದ್ಯಾಕೆ?

ಈ ಬಾರಿಯ ಐಪಿಎಲ್ ನಲ್ಲಿ ಈವರೆಗೆ ಆಡಿರುವ 12 ಪಂದ್ಯಗಳಲ್ಲಿ 9 ಪಂದ್ಯ ಸೋತಿರುವ ಆರ್ ಸಿಬಿಯನ್ನು ಗವಾಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು, ಮೇ 6: ಬ್ಯಾಟಿಂಗ್ ವೈಫಲ್ಯದಿಂದಾಗಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕಿಡಿಕಾರಿದ್ದಾರೆ. ಅಲ್ಲದೆ, ತಂಡದ ನಾಯಕ ವಿರಾಟ್ ಕೊಹ್ಲಿಗೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಿ ಎಂದೂ ಗದರಿದ್ದಾರೆ.

ಶನಿವಾರ (ಮೇ 5) ರಾತ್ರಿ ಚಿನ್ನಸ್ವಾಮಿ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ತಂಡ, ಪಂಜಾಬ್ ವಿರುದ್ಧ 19 ರನ್ ಗಳ ಸೋಲು ಕಂಡಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡವನ್ನು 138 ರನ್ ಗಳಿಗೆ (20 ಓವರ್ ಗಳಲ್ಲಿ) ನಿಯಂತ್ರಿಸಿದರೂ, ಆನಂತರ, ತಾನು ಮಾತ್ರ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ, 119 ರನ್ ಗಳಿಗೆ ಆಲೌಟ್ ಆಯಿತು.

Sunil Gavaskar criticises Virat Kohli, RCB batsmen

ಈ ಪಂದ್ಯದಲ್ಲಿ ತಂಡದ ಘಟಾನುಘಟಿ ಆಟಗಾರರಾದ ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮೊದಲಾದವರು ಹೆಚ್ಚು ಆಡದೇ ಇದ್ದಿದ್ದು ಪಂದ್ಯದಲ್ಲಿ ತಂಡದ ಸೋಲಿಗೆ ಕಾರಣವಾಯಿತು.

ಈ ಪಂದ್ಯವನ್ನಷ್ಟೇ ಅಲ್ಲದೆ, ಈ ಬಾರಿಯ ಐಪಿಎಲ್ ನಲ್ಲಿ ಈವರೆಗೆ ಆಡಿರುವ 12 ಪಂದ್ಯಗಳಲ್ಲಿ 9 ಪಂದ್ಯ ಸೋತಿರುವ ಆರ್ ಸಿಬಿಯನ್ನು ಗವಾಸ್ಕರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅದರ ಮುಖ್ಯಾಂಶ ಇಲ್ಲಿವೆ.

ತೀರಾ ಕಳಪೆ ಆಟವದು: ಗವಾಸ್ಕರ್

ತೀರಾ ಕಳಪೆ ಆಟವದು: ಗವಾಸ್ಕರ್

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆಗಿದ್ದು ತೀರಾ ಕಳಪೆ ಆಟದ ಪರಿಣಾಮವಾಗಿತ್ತು. ಒಬ್ಬ ವಿಶ್ವದರ್ಜೆಯ ಬ್ಯಾಟ್ಸ್ ಮನ್ ಆಡುವ ಆಟ ಅದಲ್ಲ. ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲಿ. ಆಗ ಅವರಿಗೆ ಅವರೆಂಥ ತಪ್ಪು ಮಾಡಿದ್ದಾರೆಂದು ಅವರಿಗೆ ತಿಳಿಯುತ್ತದೆ'' ಎಂದರು.

ಪ್ರತಿ ದಿನ ಸಕ್ಸಸ್ ಸಿಗಲ್ಲ!

ಪ್ರತಿ ದಿನ ಸಕ್ಸಸ್ ಸಿಗಲ್ಲ!

''ಇದೇ ಐಪಿಎಲ್ ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ ನಲ್ಲಿ ಆಡಿದ ಪಂದ್ಯವೊಂದರಲ್ಲಿ ಅಂಥದ್ದೇ ಹೊಡೆತವೊಂದನ್ನು ಬಾರಿಸಿ ಅವರು ಯಶಸ್ಸು ಕಂಡಿದ್ದರು. ಆದರೆ, ಅದೇ ಯಶಸ್ಸು ಪುನರಾವರ್ತನೆಯಾಗಲಾರದು'' ಎಂದರು.

ಜಾಣ್ಮೆಯ ಆಟ ರೂಢಿಸಿಕೊಳ್ಳಬೇಕು

ಜಾಣ್ಮೆಯ ಆಟ ರೂಢಿಸಿಕೊಳ್ಳಬೇಕು

ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ''ಚುಟುಕು ಮಾದರಿಯ ಪಂದ್ಯಗಳಲ್ಲಿ ಇನಿಂಗ್ಸ್ ಶುರುವಾದಾಗಿನಿಂದಲೇ ಬಿರುಸಾಗಿ ಬ್ಯಾಟ್ ಬೀಸಬೇಕಿರುತ್ತದೆ. ಆದರೆ, ಅದನ್ನು ಬ್ಯಾಟ್ಸ್ ಮನ್ ಗಳು ತಮ್ಮ ಸಹಜ ಆಟದಲ್ಲೇ ರೂಢಿಸಿಕೊಳ್ಳಬೇಕು'' ಎಂದು ಕಿವಿಮಾತು ಹೇಳಿದರು.

ಸಾಧ್ಯವಿಲ್ಲವಾದರೆ ವೈಫಲ್ಯ ಗ್ಯಾರಂಟಿ

ಸಾಧ್ಯವಿಲ್ಲವಾದರೆ ವೈಫಲ್ಯ ಗ್ಯಾರಂಟಿ

''ಆಕ್ರಮಣಕಾರಿ ಆಟವು ಬ್ಯಾಟ್ಸ್ ಮನ್ ಗಳಿಂದ ಸಾಧ್ಯವಾಗದಿದ್ದರೆ ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುವುದಿಲ್ಲ. ಇಲ್ಲಿ, ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಇಲ್ಲೇ ಎಡವುದತ್ತಿದ್ದಾರೆ'' ಎಂದರು.

ಎಲ್ಲರೂ ಉತ್ತಮರೇ, ಆದರೆ ಆಡುತ್ತಿಲ್ಲ ಅಷ್ಟೇ!

ಎಲ್ಲರೂ ಉತ್ತಮರೇ, ಆದರೆ ಆಡುತ್ತಿಲ್ಲ ಅಷ್ಟೇ!

''ಹಾಗೆಂದ ಮಾತ್ರಕ್ಕೇ ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಕ್ರಿಕೆಟ್ ಮರೆತಿದ್ದಾರೆಂದು ಅರ್ಥವಲ್ಲ. ಸರಿಯಾಗಿ, ತಮ್ಮ ಸಾಮರ್ಥ್ಯಕ್ಕೆ ತಕ್ಕುದಾದ ಆಟ ಆಡುತ್ತಿಲ್ಲ ಅಷ್ಟೇ'' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X