ಐಪಿಎಲ್ 2021 : ಮ್ಯಾಕ್ಸ್‌ವೆಲ್ ಯಶಸ್ಸಿನ ಹಿಂದಿನ ಕಾರಣ ಬಿಚ್ಚಿಟ್ಟ ಸುನಿಲ್ ಗವಾಸ್ಕರ್

ಕಳೆದ ಬಾರಿ ಒಂದು ಸಿಕ್ಸ್ ಬಾರಿಸದ ಮ್ಯಾಕ್ಸ್ ವೆಲ್ ಈ IPL ನಲ್ಲಿ ಕ್ಲಿಕ್ ಆಗೋದಕ್ಕೆ ಕಾರಣ ಇದೆ

ಪ್ರಸ್ತುತ ಐಪಿಎಲ್ ಟೂರ್ನಿಯ ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಕೆಲ ಆವೃತ್ತಿಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 14.25 ಕೋಟಿಗೆ ಖರೀದಿ ಮಾಡಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಷ್ಟು ದೊಡ್ಡ ಮೊತ್ತಕ್ಕೆ ಮ್ಯಾಕ್ಸ್‌ವೆಲ್ ಅವರನ್ನು ಖರೀದಿಸಿದ್ದಕ್ಕೆ ತಕ್ಕಂತೆ ಮ್ಯಾಕ್ಸ್‌ವೆಲ್ ಪ್ರದರ್ಶನ ನೀಡುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇತ್ತು.

ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಎಬಿ ಡಿ ವಿಲಿಯರ್ಸ್!

ತಮ್ಮ ಮೇಲೆ ಎಲ್ಲರಿಗೂ ಇದ್ದ ಸಂಶಯಕ್ಕೆ ಟೂರ್ನಿ ಆರಂಭವಾದ ಬಳಿಕ ಮ್ಯಾಕ್ಸ್‌ವೆಲ್ ತಮ್ಮ ಬ್ಯಾಟ್‌ ಮೂಲಕ ಉತ್ತರ ನೀಡಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಉತ್ತಮ ಪ್ರದರ್ಶನವನ್ನು ನೀಡಿದ ಮ್ಯಾಕ್ಸ್‌ವೆಲ್ ಕೆಟ್ಟ ಫಾರ್ಮ್‌ನಿಂದ ಹೊರಬಂದರು. ಟೂರ್ನಿಯಲ್ಲಿ ಇದುವರೆಗೂ 7 ಪಂದ್ಯಗಳನ್ನಾಡಿರುವ ಮ್ಯಾಕ್ಸ್‌ವೆಲ್ 223 ರನ್ ಬಾರಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ನಾನು ಕಾಲಿಸ್ ಮತ್ತು ವಾಟ್ಸನ್ ರೀತಿಯ ಆಟಗಾರ : ವಿಜಯ್ ಶಂಕರ್

2020ರ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಬಾರಿಸದೆ ವಿಫಲರಾಗಿದ್ದ ಮ್ಯಾಕ್ಸ್‌ವೆಲ್ ಪ್ರಸ್ತುತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಗಳಿಸಿದ ಹಿಂದಿನ ಕಾರಣವನ್ನು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ. ಮ್ಯಾಕ್ಸ್‌ವೆಲ್ ಪ್ರಸ್ತುತ ಟೂರ್ನಿಯಲ್ಲಿ ನೀಡಿದ ಉತ್ತಮ ಪ್ರದರ್ಶನದ ಕುರಿತು ಮಾತನಾಡಿದ ಅವರು 'ಮ್ಯಾಕ್ಸ್‌ವೆಲ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಆಶ್ಚರ್ಯಕರ ಆಟವನ್ನಾಡಿದರು. ಕಳೆದ ಆವೃತ್ತಿಗಳಲ್ಲಿ ಮಂಕಾಗಿದ್ದ ಮ್ಯಾಕ್ಸ್‌ವೆಲ್ ತಮ್ಮ ನಿಜ ಪ್ರತಿಭೆಯನ್ನು ಈ ಆವೃತ್ತಿಯಲ್ಲಿ ಪ್ರದರ್ಶಿಸಿದರು. ಮ್ಯಾಕ್ಸ್‌ವೆಲ್ ಈ ಬಾರಿ ಐಪಿಎಲ್‌ನ ಫ್ರಾಂಚೈಸಿ ತಂಡವೊಂದಕ್ಕೆ ಆಡುವ ರೀತಿ ಆಡಲಿಲ್ಲ ಬದಲಾಗಿ ತನ್ನ ದೇಶ ಆಸ್ಟ್ರೇಲಿಯಾ ತಂಡಕ್ಕೆ ಆಡುವ ರೀತಿಯಲ್ಲಿಯೇ ಆಡಿದರು, ಹೀಗಾಗಿಯೇ ಇಷ್ಟು ಉತ್ತಮವಾಗಿ ಮ್ಯಾಕ್ಸ್‌ವೆಲ್ ಪ್ರದರ್ಶನವನ್ನು ನೀಡಿದರು' ಎಂದು ಮ್ಯಾಕ್ಸ್‌ವೆಲ್ ನೀಡಿದ ಉತ್ತಮ ಪ್ರದರ್ಶನದ ಹಿಂದಿನ ಕಾರಣವನ್ನು ತಿಳಿಸಿದರು.

For Quick Alerts
ALLOW NOTIFICATIONS
For Daily Alerts
Story first published: Tuesday, May 18, 2021, 21:05 [IST]
Other articles published on May 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X