ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂವರು ಬ್ರಾಡ್ಮನ್‌ಗಳು ಜೊತೆಯಾಗಿ ಸಿಕ್ಕ ತಮಾಷೆಯ ಕ್ಷಣ ನೆನೆದ ಗವಾಸ್ಕರ್: ವಿಡಿಯೋ

Sunil Gavaskar Recalls Funny Incident When Bombay Bradman, Karachi Bradman And Real Bradman Got Together

ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ದಂತಕತೆ ಝಹೀರ್ ಅಬ್ಬಾಸ್‌ಗೆ 2020ರಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಹಾಲ್‌ ಆಫ್ ಫೇಮ್ ಗೌರವ ಲಭಿಸಿದಾಗ ಸುನಿಲ್ ಗವಾಸ್ಕರ್ ಒಂದು ತಮಾಷೆಯ ಕ್ಷಣವನ್ನು ನೆನಪಿಸಿಕೊಂಡಿದ್ದರು. ಅಬ್ಬಾಸ್ ಕೂಡ ಇದ್ದ ಆ ವರ್ಚುಯಲ್ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗವಾಸ್ಕರ್ 1971ರಲ್ಲಿ ನಡೆದಿದ್ದ ತಮಾಷೆಯ ಸಂಗತಿ ಹೇಳಿಕೊಂಡಿದ್ದರು.

ಐಪಿಎಲ್ 2021 ಪುನರಾರಂಭ, ಫೈನಲ್‌ನ ಪಕ್ಕಾ ದಿನಾಂಕ ಪ್ರಕಟ!ಐಪಿಎಲ್ 2021 ಪುನರಾರಂಭ, ಫೈನಲ್‌ನ ಪಕ್ಕಾ ದಿನಾಂಕ ಪ್ರಕಟ!

1971ರಲ್ಲಿ ರೆಸ್ಟ್ ಆಫ್‌ ದ ವರ್ಲ್ಡ್ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದಾಗ ಒಂದು ತಮಾಷೆಯ ಸಂಗತಿ ನಡೆದಿತ್ತಂತೆ. ಅಡಿಲೇಡ್ ವಿಮಾನ ನಿಲ್ದಾಣದಲ್ಲಿ ಸರ್ ಡೊನಾಲ್ಡ್ ಬ್ರಾಡ್‌ಮನ್, ಸುನಿಲ್ ಗವಾಸ್ಕರ್ ಮತ್ತು ಝಹೀರ್ ಅಬ್ಬಾಸ್ ಜೊತೆಯಲ್ಲಿ ನಿಂತಿದ್ದಾಗ ವೆಸ್ಟ್‌ ಇಂಡೀಸ್‌ನ ಯಾರೋ ಒಬ್ಬ ಕ್ರಿಕೆಟರ್ ಬ್ರಾಡ್ಮನ್, ಗವಾಸ್ಕರ್, ಅಬ್ಬಾಸ್ ನೋಡಿ ಜೊತೆಯಲ್ಲಿ 3 ಬ್ರಾಡ್ಮನ್‌ಗಳಿದ್ದಾರೆ ಎಂದಿದ್ದರಂತೆ.

ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!ಸರ್ಕಾರಿ ಹುದ್ದೆ ಹೊಂದಿರುವ ಭಾರತೀಯ 7 ಖ್ಯಾತ ಕ್ರಿಕೆಟಿಗರಿವರು!

'ರೆಸ್ಟ್ ಆಫ್‌ ದ ವರ್ಲ್ಡ್ ತಂಡ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದಾಗಿನ 1971ರ ಕ್ಷಣವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಆಸ್ಟ್ರೇಲಿಯಾಕ್ಕೆ ನಾವು ತಲುಪಿದಾಗ ರೆಸ್ಟ್‌ ಆಫ್‌ ದ ವರ್ಲ್ಡ್ ತಂಡವನ್ನು ಸ್ವಾಗತಿಸಲು ಸ್ವತಃ ಡಾನ್ ಬ್ರಾಡ್ಮನ್ ಅವರೇ ಅಡಿಲೇಡ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಬಂದವರು ನಮ್ಮ ಜೊತೆಗೆ ಮಾತನಾಡುತ್ತಿದ್ದರು. ಆಗ ಅದನ್ನು ನೋಡಿದ ವೆಸ್ಟ್‌ ಇಂಡೀಸ್‌ ರೋಹನ್ ಕನ್ಹಯ್ಯ ಅಥವಾ ಗ್ಯಾರಿ ಸೋಬರ್ಸ್, 'ಹೇಯ್ ಹೇಯ್, ಅಲ್ಲಿ ನೋಡಿ. ಅಲ್ಲಿ ಬಾಂಬೆ ಬ್ರಾಡ್ಮನ್, ಕರಾಚಿ ಬ್ರಾಡ್ಮನ್ ಮತ್ತು ನಿಜವಾದ ಬ್ರಾಡ್ಮನ್ ಜೊತೆಯಾಗಿದ್ದಾರೆ' ಎಂದಿದ್ದರು,' ಎಂದು ಗವಾಸ್ಕರ್ ಹೇಳಿದ್ದಾರೆ.

ಗವಾಸ್ಕರ್ ಹೇಳಿದ್ದು ಕೇಳಿದ ವರ್ಚುಯಲ್ ಕಾರ್ಯಕ್ರಮದಲ್ಲಿದ್ದ ಅಬ್ಬಾಸ್ ಸೇರಿ ಎಲ್ಲರೂ ನಕ್ಕರು. ಐಸಿಸಿ ಈ ವಿಡಿಯೋವನ್ನು 2020ರ ಆಗಸ್ಟ್ 26ರಂದು ಯೂಟ್ಯೂಬ್‌ ನಲ್ಲಿ ಅಪ್‌ಲೋಡ್ ಮಾಡಿತ್ತು.

Story first published: Tuesday, June 8, 2021, 15:02 [IST]
Other articles published on Jun 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X