ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಿದ್ದಾರೆ ಸುರೇಶ್ ರೈನಾ

Suresh Raina to build sanitation, drinking water facilities at 34 schools

ನವದೆಹಲಿ: ಭಾರತ ಮಾಜಿ ಆಟಗಾರ ಸುರೇಶ್ ರೈನಾ ತನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಿದ್ದಾರೆ. ಉತ್ತರಪ್ರದೇಶದ ಜಮ್ಮು ಮತ್ತು ಎನ್‌ಸಿಆರ್‌ನಲ್ಲಿರುವ ಸುಮಾರು 34 ಶಾಲೆಗಳಿಗೆ ರೈನಾ ಸ್ಯಾನಿಟೈಝರ್ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಿದ್ದಾರೆ.

ಪಬ್‌ಜಿ ಸಹಿತ ಆನ್‌ಲೈನ್ ಗೇಮ್‌ಗಳಿಗೆ ಭಾರತದಲ್ಲಿ ಮತ್ತಷ್ಟು ಕಂಟಕಪಬ್‌ಜಿ ಸಹಿತ ಆನ್‌ಲೈನ್ ಗೇಮ್‌ಗಳಿಗೆ ಭಾರತದಲ್ಲಿ ಮತ್ತಷ್ಟು ಕಂಟಕ

ಆಗಸ್ಟ್ 15ರಂದು ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಿದ್ದಾಗ ತಾನೂ ನಿವೃತ್ತಿ ಘೋಷಿಸಿದ್ದ ಆಲ್ ರೌಂಡರ್ ರೈನಾ ಬರುವ ನವೆಂಬರ್ 27ಕ್ಕೆ 34ನೇ ಹರೆಯಕ್ಕೆ ಕಾಲಿರಿಸಲಿದ್ದಾರೆ. ಹೀಗಾಗಿ ಶಾಲೆಗಳಿಗೆ ನೆರವೀಯಲು ರೈನಾ ನಿರ್ಧರಿಸಿದ್ದಾರೆ.

ತನ್ನ ಪುತ್ರಿಯ ಹೆಸರಿನಲ್ಲಿರುವ ಗ್ರೇಸಿಯಾ ರೈನಾ ಫೌಂಡೇಶನ್ (ಜಿಆರ್‌ಎಫ್‌) ನಾನ್ ಗವರ್ನ್‌ಮೆಂಟಲ್ ಆರ್ಗನೈಸೇಶನ್ (ಚಾರಿಟಿ ಸಂಸ್ಥೆ) ಮೂಲಕ ರೈನಾ ಈಗಾಗಲೇ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ಕೈ ಜೋಡಿಸುತ್ತಿದ್ದಾರೆ. ಈ ಸಂಸ್ಥೆಯ ಮೂಲಕ ಈ ಬಾರಿ ಕೊರೊನಾ ಸಂಕಷ್ಟ ಎದುರಿಸುತ್ತಿರುವ ಶಾಲೆಗಳಿಗೆ ಸಹಾಯ ಮಾಡಲಿದ್ದಾರೆ.

ವೈಯಕ್ತಿಕ ಗುರಿ ಇಟ್ಟುಕೊಂಡಿಲ್ಲ, ಆದರೆ ನಿಜಕ್ಕೂ ಉತ್ಸುಕನಾಗಿದ್ದೇನೆ: ಗಿಲ್ವೈಯಕ್ತಿಕ ಗುರಿ ಇಟ್ಟುಕೊಂಡಿಲ್ಲ, ಆದರೆ ನಿಜಕ್ಕೂ ಉತ್ಸುಕನಾಗಿದ್ದೇನೆ: ಗಿಲ್

ಚಾರಿಟಿ ಸಂಸ್ಥೆಯ ಸಹ ಸಂಸ್ಥಾಪಕಿಯಾಗಿರುವ ರೈನಾ ಹೆಂಡತಿ ಪ್ರಿಯಾಂಕಾ ಕೂಡ ಸಹಾಯ ಬೇಕಿದ್ದವರಿಗೆ ನೆರವು ನೀಡುತ್ತಿದ್ದಾರೆ. ರೈನಾ-ಪ್ರಿಯಾಂಕಾ ಜೋಡಿ ಇತ್ತೀಚೆಗೆ 500 ಬಡ ಅಮ್ಮಂದಿರಿಗೆ ರೇಷನ್ ಕಿಟ್‌ ನೀಡಿತ್ತು. 'ಇಂಥ ಸಹಾಯ ನನ್ನ 34ನೇ ಹುಟ್ಟು ಹಬ್ಬಕ್ಕೆ ಬೆಲೆಕಟ್ಟಲಾರದ ಖುಷಿ ತರಲಿದೆ,' ಎಂದು ರೈನಾ ಹೇಳಿದ್ದಾರೆ.

Story first published: Monday, November 23, 2020, 19:58 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X