ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈಗೆ ಶರಣಾದ ಕರ್ನಾಟಕ: ಗೆಲುವಿನ ಓಟಕ್ಕೆ ತಡೆಯಾದ ಮುಂಬೈ

Suryakumar Yadav shines as Mumbai beat Karnataka

ಸಯ್ಯದ್ ಮುಶ್ತಾಕ್ ಅಲಿ ಟಿ-20ಯಲ್ಲಿ ಸರಣಿಯಲ್ಲಿ ಕರ್ನಾಟಕದ ಗೆಲುವಿನ ಅಭಿಯಾನಕ್ಕೆ ಬ್ರೇಕ್ ಬಿದ್ದಿದೆ. ಸತತ ಗೆಲುವಿನೊಂದಿಗೆ ಮುನ್ನುಗ್ಗುತ್ತಿದ್ದ ಮನೀಶ್ ಪಾಂಡೆ ಬಳಗಕ್ಕೆ ಇದು ಕೊಂಚ ಹಿನ್ನೆಡೆಯುಂಟು ಮಾಡಿದೆ. ಮುಂಬೈ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ ಅವರ ಸ್ಪೋಟಕ ಆಟ ಮುಂಬೈ ಗೆಲುವಿನ ನಗೆ ಕಾಣಲು ಪ್ರಮುಖ ಕಾರಣವಾಯಿತು.

11ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಿಡಿಸಿದ ಸೂರ್ಯಕುಮಾರ್ ಯಾದವ್ ಅವರ ನೆರವಿನಿಂದ ಮುಂಬೈ ತಂಡ ಕರ್ನಾಟಕ ನೀಡಿದ್ದ 172ರನ್‌ಗಳ ಗುರಿಯನ್ನು 19 ಓವರ್‌ಗಳಲ್ಲಿಯೇ ಮೂರು ವಿಕೆಟ್ ಕಳೆದುಕೊಂಡು ಜಯಶಾಲಿಯಾಯಿತು.

ಸೈಯದ್ ಮುಷ್ತಾಕ್ ಅಲಿ: ಮಿಜೋರಾಂಗೆ 137 ರನ್‌ ಸೋಲುಣಿಸಿದ ಕರ್ನಾಟಕಸೈಯದ್ ಮುಷ್ತಾಕ್ ಅಲಿ: ಮಿಜೋರಾಂಗೆ 137 ರನ್‌ ಸೋಲುಣಿಸಿದ ಕರ್ನಾಟಕ

ಸೂರ್ಯ ಕುಮಾರ್ ಯಾದವ್ ಬ್ಯಾಟಿಂಗ್‌ಗೆ ಇಳಿದಾಗ ಮುಂಬೈ ತಂಡ 10.5 ಓವರ್‌ಗಳಲ್ಲಿ 3ವಿಕೆಟ್ ಕಳೆದುಕೊಂಡು 90 ರನ್ನ ಗಳಿಸಿತ್ತು. ಈ ಸಂದರ್ಭದಲ್ಲಿ ಆಲ್‌ರೌಂಡರ್ ಶಿವಂ ದುಬೆ ಅವರೊಂದಿಗೆ ಸೇರಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ನಾಯಕನಿಗೆ ಸಾಥ್ ನೀಡಿದ ಶಿವಂ ದುಬೆ 18 ಎಸೆತಗಳಲ್ಲಿ 22 ರನ್ ಸಿಡಿಸಿದ್ರು. ಇದರಲ್ಲಿ ಒಂದು ಸಿಕ್ಸರ್ ಸೇರಿತ್ತು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೂಪರ್ ಲೀಗ್ ವೇಳಾಪಟ್ಟಿಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೂಪರ್ ಲೀಗ್ ವೇಳಾಪಟ್ಟಿ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕರ್ನಾಟಕ ಎರಡನೇ ಎಸತದಲ್ಲಿಯೇ ಪ್ರಮುಖ ಆಟಗಾರ ಕೆ ಎಲ್ ರಾಹುಲ್ ವಿಕೆಟ್ ಕಳೆದುಕೊಂಡು ಆಘಾತವನ್ನು ಅನುಭವಿಸಿತು. ನಾಯಕ ಮನೀಶ್ ಪಾಂಡೆ ಕೂಡ ಕೇವಲ ನಾಲ್ಕೇ ರನ್‌ಗೆ ವಿಕೆಟ್‌ ಒಪ್ಪಿಸಿದರು. ದೇವ್‌ದತ್‌ ಪಡಿಕ್ಕಲ್ 57(34 ಎಸೆತ) ಮತ್ತು ರೋಹನ್ ಕದಮ್ 71(47)ತಂಡ ಉತ್ತಮ ರನ್ ಕಲೆಹಾಕಲು ಕಾರಣರಾದರು.

Story first published: Monday, November 25, 2019, 17:09 [IST]
Other articles published on Nov 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X