ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್: ಹಿಮಾಚಲ ಪ್ರದೇಶಕ್ಕೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಮುಂಬೈ

Syed Mushtaq Ali Trophy Final: Mumbai won against Himachal Pradesh by 3 wickets and Become champion

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ಪಂದ್ಯ ಮುಕ್ತಾಯವಾಗಿದ್ದು ಅಜಿಂಕ್ಯಾ ರಹಾನೆ ನೇತೃತ್ವ ಮುಂಬೈ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಹಿಉಆಚಲ ಪ್ರವೇಶದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ತೀವ್ರ ಪೈಪೋಟಿಯನ್ನು ಎದುರಿಸಿತಾದರೂ ಅಂತಿಮವಾಗಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಚೊಚ್ಚಲ ಬಾರಿಗೆ ಮುಂಬೈ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಮುತ್ತಿಕ್ಕಿದೆ.

ಹಿಮಾಚಲ ಪ್ರದೇಶ ಹಾಗೂ ಮುಂಬೈ ಎರಡು ತಮಡಗಳು ಕೂಡ ಇದೇ ಮೊದಲ ಬಾರಿಗೆ ದೇಶೀಯ ಕ್ರಿಕೆಟ್‌ನ ಚುಟುಕು ಮಾದರಿಯ ಟೂರ್ನಿಯಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆದಿತ್ತು. ಹೀಗಾಗಿ ಎರಡು ತಂಡಗಳು ಕೂಡ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ಕನಸು ಕಂಡಿದ್ದವು. ಆದರೆ ಅಜಿಂಕ್ಯಾ ರಹಾನೆ ನೇತೃತ್ವದ ಮುಂಬೈ ತಂಡಕ್ಕೆ ಮೇಲುಗೈ ದೊರೆತಿದ್ದು ಅದ್ಭುತ ಗೆಲುವು ತನ್ನದಾಗಿಸಿಕೊಂಡಿದೆ.

ಇತರೆ ಆಟಗಾರರೂ ವಿಫಲರಾಗಿದ್ದಾರೆ, ಆದರೆ ದಿನೇಶ್ ಕಾರ್ತಿಕ್ ವಿರುದ್ಧ ಮಾತ್ರ ಟೀಕೆ ಯಾಕೆ ಎಂದ ಮಾಜಿ ಕ್ರಿಕೆಟಿಗಇತರೆ ಆಟಗಾರರೂ ವಿಫಲರಾಗಿದ್ದಾರೆ, ಆದರೆ ದಿನೇಶ್ ಕಾರ್ತಿಕ್ ವಿರುದ್ಧ ಮಾತ್ರ ಟೀಕೆ ಯಾಕೆ ಎಂದ ಮಾಜಿ ಕ್ರಿಕೆಟಿಗ

ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಹೀಗಾಗಿ ಹಿಮಾಚಕ ಪ್ರದೇಶ ಆರಂಭದಲ್ಲಿ ಬ್ಯಾಟಿಂಗ್ ನಡೆಸಿತು. ಈ ಸಂದರ್ಭದಲ್ಲಿ ಮುಂಬೈ ನಾಯಕ ಅಜಿಂಕ್ಯಾ ರಹಾನೆ ನಿರ್ಧಾರವನ್ನು ಸಮರ್ಥನೆ ಮಾಡುವ ರೀತಿಯಲ್ಲಿ ಮುಂಬೈ ಬೌಲರ್‌ಗಳು ದಾಳಿ ನಡೆಸಿ ಮೇಲುಗೈ ಸಾಧಿಸಿದರು. ತಂಡದ ಬಹುತೇಕ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನೆಲೆಯೂರಲು ವಿಫಲವಾದರು. ಹೀಗಾಗಿ ನಿಗದಿತ 20 ಓವರ್‌ಗಳಲ್ಲಿ ಹಿಮಾಚಲ ಪ್ರದೇಶ 8 ವಿಕೆಟ್ ಕಳೆದುಕೊಂಡು 143 ರನ್‌ಗಳನ್ನು ಗಳಿಸಿ ಸಾಧಾರಣ ಗುರಿ ನೀಡಿತು.

ಇನ್ನು ಈ ಮೊತ್ತವನ್ನು ಬೆನ್ನಟ್ಟಿದ ಮುಂಬೈ ತಂಡ ಕೂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಸ್ಟಾರ್ ಆಟಗಾರರನ್ನು ಹೊಂದಿದ್ದರೂ ಮುಂಬೈ ತಂಡ ಒಂದು ಹಂತದಲ್ಲಿ ಸಾಕಷ್ಟು ಪರದಾಟ ಅನುಭವಿಸಿತ್ತು. ಪೃಥ್ವಿ ಶಾ, ನಾಯಕ ಅಜಿಂಕ್ಯಾ ರಹಾನೆ, ಶಿವಂ ದುಬೆ ಮೊದಲಾದ ಆಟಗಾರರು ಈ ಪಂದ್ಯದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದರು. ಆದರೆ ಶ್ರೇಯಸ್ ಐಯ್ಯರ್ ಹಾಗೂ ಸರ್ಫರಾಜ್ ಖಾನ್ ತಂಡಕ್ಕೆ ನೆರವಾದರು. ಯಶಸ್ವಿ ಜೈಸ್ವಾಲ್ ಕೂಡ ಒಂದು ಹಂತದಲ್ಲಿ ತಂಡಕ್ಕೆ ಆಸರೆಯಾದರು.

ಜೈಸ್ವಾಲ್ ಹಾಗೂ ಶ್ರೇಯಸ್ ಐಯ್ಯರ್ ವಿಕೆಟ್ ಕಳೆದುಕೊಂಡರಾದರೂ ಸರ್ಫರಾಜ್ ಖಾನ್ ಅಂತಿನ ಹಂತದವರೆಗೂ ಹೋರಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅಂತಿಮ ಓವರ್‌ನಲ್ಲಿ ಮುಂಬೈ ತಂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗುವ ಮೂಲಕ ಮೊದಲ ಬಾರಿಗೆ ಮುಂಬೈ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಎತ್ತಿ ಹಿಡಿಯುವಂತೆ ಮಾಡಿದರು.

IPL 2023: ಆಟಗಾರರ ಹರಾಜಿಗೂ ಮುನ್ನ RCB ಕೈ ಬಿಡಲಿರುವ 3 ಆಟಗಾರರು!IPL 2023: ಆಟಗಾರರ ಹರಾಜಿಗೂ ಮುನ್ನ RCB ಕೈ ಬಿಡಲಿರುವ 3 ಆಟಗಾರರು!

ಹಿಮಾಚಲ್ ಪ್ರದೇಶ ಆಡುವ ಬಳಗ: ಪ್ರಶಾಂತ್ ಚೋಪ್ರಾ, ಅಂಕುಶ್ ಬೇನ್ಸ್ (ವಿಕೆಟ್ ಕೀಪರ್), ಸುಮೀತ್ ವರ್ಮಾ, ಆಕಾಶ್ ವಸಿಷ್ಟ್, ನಿಖಿಲ್ ಗಂಗ್ಟಾ, ಏಕಾಂತ್ ಸೇನ್, ರಿಷಿ ಧವನ್ (ನಾಯಕ), ಸಿದ್ಧಾರ್ಥ್ ಶರ್ಮಾ, ಮಯಾಂಕ್ ದಾಗರ್, ಕನ್ವರ್ ಅಭಿನಯ್ ಸಿಂಗ್, ವೈಭವ್ ಅರೋರಾ, ನಿತಿನ್ ಶರ್ಮಾ
ಬೆಂಚ್: ಅಭಿಮನ್ಯು ರಾಣಾ, ಪಂಕಜ್ ಜೈಸ್ವಾಲ್, ಗುರ್ವಿಂದರ್ ಸಿಂಗ್, ರಾಘವ್ ಧವನ್, ಅಂಕುಶ್ ಬೇಡಿ, ವಿನಯ್ ಗಲೇಟಿಯಾ,
ಆಯುಷ್ ಜಮ್ವಾಲ್, ಶುಭಂ ಅರೋರಾ, ಅಮಿತ್ ಕುಮಾರ್

ಮುಂಬೈ ಆಡುವ ಬಳಗ: ಪೃಥ್ವಿ ಶಾ, ಅಜಿಂಕ್ಯ ರಹಾನೆ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ಶಿವಂ ದುಬೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅಮನ್ ಹಕೀಮ್ ಖಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ
ಬೆಂಚ್: ಪರೀಕ್ಷಿತ್ ವಲ್ಸಂಗಕರ್, ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ಪೃಥ್ವಿಪಾಲ್ ಸೋಲಂಕಿ, ಸಾಯಿರಾಜ್ ಪಾಟೀಲ್, ಸೂರ್ಯಾಂಶ್ ಶೆಡ್ಗೆ, ಹಾರ್ದಿಕ್ ತಮೋರ್

Story first published: Saturday, November 5, 2022, 21:22 [IST]
Other articles published on Nov 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X