ಬಾಂಗ್ಲಾಗೆ ಐತಿಹಾಸಿಕ ಸರಣಿ ಗೆಲುವು: ಮತ್ತೊಂದು ಹೀನಾಯ ಸೋಲು ಅನುಭವಿಸಿದ ಆಸಿಸ್

ಬಾಂಗ್ಲಾದೇಶದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಮತ್ತೊಂದು ಭಾರೀ ಸೋಲು ಕಂಡಿದೆ. 123 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ ಕೇವಲ 62 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದೆ. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯನ್ನು ಆಸಿಸ್ ಪಡೆ 1-4 ಅಂತರದಿಂದ ಕಳೆದುಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಹೀನಾಯವಾಗಿ ಬಾಂಗ್ಲಾದೇಶದ ವಿರುದ್ಧ ಸರಣಿ ಸೋಲು ಅನುಭವಿಸಿದೆ.

ಶೇರ್‌ ಎ ಬಾಂಗ್ಲಾ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಬಾಂಗ್ಲಾ ಬೌಲಿಂಗ್ ಮರ್ಮವನ್ನು ಅರ್ಥ ಮಾಡಿಕೊಳ್ಳುವಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವಿಫಲವಾದರು. ಅಂತಿಮ ಟಿ20 ಪಂದ್ಯದಲ್ಲಿಯೂ ಇದೇ ಮುಂದುವರಿಯಿತು. ಕನಿಷ್ಠ ಗುರಿ ಕಣ್ಣ ಮುಂದಿದ್ದರೂ ಅದನ್ನು ತಲುಪಲು ಸಾಧ್ಯವಾಗದೆ ಆಸ್ಟ್ರೇಲಿಯಾ ಪಡೆ ಆಘಾತಕಾರಿ ಸೋಲು ಅನುಭವಿಸಿದೆ.

'ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಅಲ್ಲ!'; ಕೇಂದ್ರ ಸರ್ಕಾರಕ್ಕೆ ಹೆಚ್ಚಾಯ್ತು ಒತ್ತಡ!'ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ ಅಲ್ಲ!'; ಕೇಂದ್ರ ಸರ್ಕಾರಕ್ಕೆ ಹೆಚ್ಚಾಯ್ತು ಒತ್ತಡ!

ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಕೂಡ ಲೋ ಸ್ಕೋರಿಂಗ್ ಪಂದ್ಯವಾಗಿತ್ತು. ಟಾಸ್ ಗೆದ್ದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್‌ಗಳನ್ನು ಮಾತ್ರವೇ ಗಳಿಸಿತ್ತು. ಇದನ್ನು ಬೆನ್ನಟ್ಟಲು ಆರಂಭಿಸಿದ ಆಸ್ಟ್ರೇಲಿಯಾ ಎಂದಿನಂತೆಯೇ ಫೆವಿಲಿಯನ್ ಪೆರೇಡ್ ನಡೆಸಲು ಆರಂಭಿಸಿದೆ. ಆಸ್ಟ್ರೇಲಿಯಾ ತಂಡದ ಕೇವಲ ಇಬ್ಬರು ಆಟಗಾರರು ಮಾತ್ರವೇ ಈ ಪಂದ್ಯದಲ್ಲಿ ಎರಡಂಕಿ ತಲುಪಲು ಸಾಧ್ಯವಾಗಿತ್ತು. ನಾಯಕ ಮ್ಯಾಥ್ಯೂ ವೇಡ್ 22 ರನ್‌ಗಳಿಸಿದರೆ ಬೆನ್‌ ಮೆಕ್‌ಡೆರ್ಮಾಟ್ 17 ರನ್‌ಗಳಿಸಿದ್ದು ಬಿಟ್ಟರೆ ಉಳಿದೆಲ್ಲಾ ಆಟಗಾರರು ಒಂದಂಕಿಗೆ ಆಟವನ್ನು ಅಂತ್ಯಗೊಳಿಸಿದರು.

ಬಾಂಗ್ಲಾದೇಶದ ಪರವಾಗಿ ಶಕೀಬ್ ಅಲ್ ಹಸನ್ ಈ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳಿಗೆ ಕಾಡಿದರು. ಈ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ ಶಕೀಬ್ ಅಲ್ ಹಸನ್. ಉಳಿದಂತೆ ಮೊಹಮ್ಮದ್ ಸೈಫುದ್ದೀನ್ ಮೂರು ಹಾಗೂ ನಸುಮ್ ಅಹ್ಮದ್ 2 ವಿಕೆಟ್ ಕಬಳಿಸಿದ್ದಾರೆ. ಕೇವಲ 13.4 ಓವರ್‌ಗಳನ್ನು ಎದುರಿಸಿದ ಆಸ್ಟ್ರೇಲಿಯಾ ಪಡೆ 62 ರನ್‌ಗಳಿಗೆ ಆಲೌಟ್ ಆಗಿತ್ತು.

ಇನ್ನು ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್‌ಗಳಿಸಲು ಶಕ್ತವಾಗಿತ್ತು. ಬಾಂಗ್ಲಾದೇಶದ ಪರವಾಗಿ ಆರಂಭಿಕ ಜೊತೆಯಾಟವನ್ನು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತದ ಕೊಡುಗೆಯನ್ನು ನೀಡುವಲ್ಲಿ ವಿಫಲವಾಗಿದ್ದರು. ಆದರೆ ಬೌಲಿಂಗ್ ವಿಭಾಗದ ಪ್ರದರ್ಶನ ದಿಂದ ಈ ಪಂದ್ಯವನ್ನು ಕೂಡ ಬಾಂಗ್ಲಾದೇಶ ಗೆದ್ದುಕೊಂಡಿದೆ.

ಐದು ಟಿ20 ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶ ಮೊದಲ ಮೂರು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿತ್ತು. ಅದಾದ ಬಳಿಕ ನಾಲ್ಕನೇ ಟಿ20 ಪಂದ್ಯವನ್ನು ಕೇವಲ 3 ವಿಕೆಟ್‌ಗಳ ಅಂತರದಿಂದ ಗಲ್ಲುವಲ್ಲಿ ಸಫಲವಾಗಿತ್ತು. ಈ ಮೂಲಕ ಸರಣಿ ಸೋಲಿನ ಅಂತರವನ್ನು ಸ್ವಲ್ಪಮಟ್ಟಿಗೆ ಕುಗ್ಗಿಸಿತ್ತು. ಆದರೆ ಈಗ ಅಂತಿಮ ಪಂದ್ಯವನ್ನು ಕೂಡ ಆಸ್ಟ್ರೇಲಿಯಾ ಬಾಂಗ್ಲಾದೇಶದ ವಿರುದ್ಧ ಸೋಲು ಕಾಣುವ ಮೂಲಕ 1-4 ಅಂತರದಿಂದ ಹೀನಾಯವಾಗಿ ಸರಣಿ ಸೋತಿದೆ.

ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಭಾರತ ರವಾನಿಸಿದ 5 ಕಠಿಣ ಸಂದೇಶಗಳಿವು!ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ಗೆ ಭಾರತ ರವಾನಿಸಿದ 5 ಕಠಿಣ ಸಂದೇಶಗಳಿವು!

IPL ಮುಂದುವರೆದರೆ ಯಾವ ದೇಶದ ಆಟಗಾರರು ಪಾಲ್ಗೊಳ್ಳಲಿದ್ದಾರೆ | Oneindia Kannada

ಬಾಂಗ್ಲಾದೇಶದ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 62 ನರ್‌ಗಳಿಗೆ ಆಲೌಟ್ ಆಗಿದ್ದು ಆಸ್ಟ್ರೇಲಿಯಾ ತಂಡದ ಅತ್ಯಂತ ಹೀನಾಯ ಪ್ರದರ್ಶನವಾಗಿದೆ. ಟಿ20 ಕ್ರಿಕೆಟ್‌ನ ಇರಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಇದೇ ಮೊದಲ ಬಾರಿಗೆ ಇಷ್ಟು ಕಡಿಮೆ ರನ್‌ಗೆ ಆಲೌಟ್ ಆಗಿದೆ. ಇನ್ನು ಈ ವರ್ಷ ಆಸ್ಟ್ರೇಲಿಯಾ ಆಡಿದ ಮೂರು ಟಿ20 ಸರಣಿಯಲ್ಲಿಯೂ ಆಸಿಸ್ ಅತ್ಯಂತ ಆಘಾತಕಾರಿ ರೀತಿಯಲ್ಲಿ ಸೋಲು ಕಂಡಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧವೂ ಆಸ್ಟ್ರೇಲಿಯಾ 1-4 ಅಂತರದಿಂದ ಸರಣಿ ಸೋತಿತ್ತು. ಅದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಆಸಿಸ್ ಪಡೆ 2-3 ಅಂತರದ ಸೋಲು ಕಂಡಿದೆ. ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಟಿ20 ವಿಶ್ವಕಪ್‌ನ ಸನಿಹದಲ್ಲಿ ಆಸ್ಟ್ರೇಲಿಯಾ ತಂಡದ ಈ ಪ್ರದರ್ಶನ ಅಚ್ಚರಿ ಮೂಡಿಸಿದೆ

For Quick Alerts
ALLOW NOTIFICATIONS
For Daily Alerts
Story first published: Monday, August 9, 2021, 21:01 [IST]
Other articles published on Aug 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X