ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್‌ಗೆ ಜಯ; ಟೀಮ್ ಇಂಡಿಯಾ ಸೆಮಿಫೈನಲ್ ಹಾದಿ ಕಷ್ಟಕಷ್ಟ!

T20 World Cup 2021: New Zealands win against Scotland led India to tough zone

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಪಂದ್ಯವೊಂದರಲ್ಲಿ ಇಂದು ( ನವೆಂಬರ್‌ 3 ) ನ್ಯೂಜಿಲೆಂಡ್ ತಂಡ ಸ್ಕಾಟ್ಲೆಂಡ್ ವಿರುದ್ಧ 16 ರನ್‌ಗಳ ಜಯವನ್ನು ದಾಖಲಿಸಿದೆ. ಈ ಗೆಲುವಿನ ಮೂಲಕ ನ್ಯೂಜಿಲೆಂಡ್ ಟೂರ್ನಿಯಲ್ಲಿನ ತನ್ನ ಎರಡನೇ ಗೆಲುವನ್ನು ಪಡೆದುಕೊಂಡಿದೆ. ಈ ಮೂಲಕ ಟೂರ್ನಿಯಲ್ಲಿ ಇದುವರೆಗೂ 3 ಪಂದ್ಯಗಳನ್ನಾಡಿರುವ ನ್ಯೂಜಿಲೆಂಡ್ 2 ಪಂದ್ಯಗಳಲ್ಲಿ ಗೆದ್ದಂತಾಗಿದ್ದು, ಮತ್ತೊಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ.

ಭಾರತ vs ಅಫ್ಘಾನಿಸ್ತಾನ ಪಂದ್ಯಗಳಲ್ಲಿ ಬಲಿಷ್ಠರಾರು?; ಭಾರತ ಸೆಮಿಫೈನಲ್ ಪ್ರವೇಶಿಸಲು ಹೀಗೆ ಮಾಡಬೇಕು!ಭಾರತ vs ಅಫ್ಘಾನಿಸ್ತಾನ ಪಂದ್ಯಗಳಲ್ಲಿ ಬಲಿಷ್ಠರಾರು?; ಭಾರತ ಸೆಮಿಫೈನಲ್ ಪ್ರವೇಶಿಸಲು ಹೀಗೆ ಮಾಡಬೇಕು!

ಹೀಗೆ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಜಯ ಗಳಿಸುವುದರ ಮೂಲಕ ಟೂರ್ನಿಯಲ್ಲಿ ಒಟ್ಟಾರೆ 4 ಅಂಕಗಳನ್ನು ಪಡೆದುಕೊಂಡಿದ್ದು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಹೌದು, ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಗೆದ್ದರೂ ಕೂಡ ಅಂಕಪಟ್ಟಿಯಲ್ಲಿ ಯಾವುದೇ ರೀತಿಯ ಏರಿಕೆಯನ್ನು ಕಂಡಿಲ್ಲ. ಇದಕ್ಕೆ ಕಾರಣ ಅಫ್ಘಾನಿಸ್ತಾನ ನ್ಯೂಜಿಲೆಂಡ್ ತಂಡಕ್ಕಿಂತ ಬೃಹತ್ ನೆಟ್ ರನ್ ರೇಟ್ ಪಡೆದುಕೊಂಡಿರುವುದು. ಟೂರ್ನಿಯಲ್ಲಿ ಇದುವರೆಗೂ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳೆರಡೂ 3 ಪಂದ್ಯಗಳನ್ನಾಡಿದ್ದು ಸಮನಾಗಿ 2 ಪಂದ್ಯಗಳಲ್ಲಿ ಗೆಲುವು ಮತ್ತು 1 ಪಂದ್ಯದಲ್ಲಿ ಸೋಲನ್ನು ಅನುಭವಿಸಿವೆ. ಈ ಮೂಲಕ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳೆರಡೂ 4 ಅಂಕಗಳನ್ನು ಪಡೆದುಕೊಂಡಿದ್ದರೂ ಸಹ ಅಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. ಈ ಮೂಲಕ ನೆಟ್ ರನ್ ರೇಟ್ ತಂಡವೊಂದಕ್ಕೆ ಎಷ್ಟು ಮುಖ್ಯವಾಗಲಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಪಾಕಿಸ್ತಾನದ ಬಾಬರ್ ಅಜಮ್ ನಂ.1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಪಾಕಿಸ್ತಾನದ ಬಾಬರ್ ಅಜಮ್ ನಂ.1; ಕೊಹ್ಲಿಗೆ ಎಷ್ಟನೇ ಸ್ಥಾನ ಗೊತ್ತಾ?

ಇನ್ನು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಸ್ಕಾಟ್ಲೆಂಡ್ ನಡುವಿನ ಈ ಪಂದ್ಯದಲ್ಲಿ ಟಾಸ್ ಸೋತ ನ್ಯೂಜಿಲೆಂಡ್‌ಲ ಮೊದಲು ಬ್ಯಾಟಿಂಗ್ ಮಾಡಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮಾರ್ಟಿನ್ ಗಪ್ಟಿಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ 93, ಡೆರಿಲ್ ಮಿಚೆಲ್ 13, ಕೇನ್ ವಿಲಿಯಮ್ಸನ್ 0, ಡಿವಾನ್ ಕಾನ್ವೆ 1, ಗ್ಲೆನ್ ಫಿಲಿಪ್ಸ್ 33, ಜೇಮ್ಸ್ ನೀಶಾಮ್ ಅಜೇಯ 10 ಮತ್ತು ಮಿಚೆಲ್ ಸ್ಯಾಂಟ್ನರ್ ಅಜೇಯ 2 ರನ್ ಗಳಿಸಿದರು.

ಹೀಗೆ ನ್ಯೂಜಿಲೆಂಡ್ ತಂಡ ನೀಡಿದ 173 ರನ್‌ಗಳ ಗುರಿಯನ್ನು ಬೆನ್ನತ್ತಿದ ಸ್ಕಾಟ್ಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಕೊನೆ ಹಂತದಲ್ಲಿ ಸ್ಕಾಟ್ಲೆಂಡ್ ತಂಡದ ಮಿಚೆಲ್ ಲೀಸ್ಕ್ 20 ಎಸೆತಗಳಲ್ಲಿ 42 ರನ್ ಬಾರಿಸುವುದರ ಮೂಲಕ ಗಮನ ಸೆಳೆದರಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ತಂಡದ ಬೇರೆ ಯಾವ ಆಟಗಾರರೂ ಕೂಡ ಲೀಸ್ಕ್ ಜೊತೆ ಕೈ ಜೋಡಿಸಲಿಲ್ಲ. ಈ ಮೂಲಕ ನ್ಯೂಜಿಲೆಂಡ್ ಸ್ಕಾಟ್ಲೆಂಡ್ ವಿರುದ್ಧ 16 ರನ್‌ಗಳ ರೋಚಕ ಜಯವನ್ನು ಸಾಧಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಹೀಗೆ ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಗೆದ್ದಿರುವುದು ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವುದರ ಮೇಲೆ ತುಂಬಾ ದೊಡ್ಡ ಪ್ರಮಾಣದ ಪ್ರಭಾವವನ್ನು ಬೀರಿದೆ ಎಂದೇ ಹೇಳಬಹುದು.

'ಟೀಮ್ ಇಂಡಿಯಾ ಒಳಗೆ 2 ಗುಂಪುಗಳಿವೆ'; ತಂಡದ ಸೋಲಿನ ನಂತರ ಸಂಶಯ ಹೊರಹಾಕಿದ ಮಾಜಿ ಕ್ರಿಕೆಟಿಗ'ಟೀಮ್ ಇಂಡಿಯಾ ಒಳಗೆ 2 ಗುಂಪುಗಳಿವೆ'; ತಂಡದ ಸೋಲಿನ ನಂತರ ಸಂಶಯ ಹೊರಹಾಕಿದ ಮಾಜಿ ಕ್ರಿಕೆಟಿಗ

ಈ ಪಂದ್ಯದ ನಂತರ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸಲು ಏನು ಮಾಡಬೇಕು ಮತ್ತು ಇತರ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶದ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಲಿದೆ ಎನ್ನುವ ಅಂಶಗಳ ಕುರಿತ ಮಾಹಿತಿ ಈ ಕೆಳಕಂಡಂತಿದೆ..

ಟೀಮ್ ಇಂಡಿಯಾ ಮುಂದಿನ ಎಲ್ಲಾ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕು

ಟೀಮ್ ಇಂಡಿಯಾ ಮುಂದಿನ ಎಲ್ಲಾ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆಲ್ಲಬೇಕು

ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳ ವಿರುದ್ಧ ಸೆಣಸಾಟ ನಡೆಸಲಿದೆ. ಈ ಎಲ್ಲಾ 3 ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಪಡೆ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗೆ ಮುಂದಿನ ಎಲ್ಲ ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದರೆ 6 ಅಂಕಗಳನ್ನು ಪಡೆದುಕೊಳ್ಳಲಿದ್ದು ಇತರ ತಂಡಗಳು ಕೂಡ 6 ಅಂಕಗಳನ್ನು ಪಡೆದುಕೊಂಡು ಉತ್ತಮ ನೆಟ್ ರನ್ ರೇಟ್ ಪಡೆದರೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆಗಳಿವೆ. ಒಂದುವೇಳೆ ಟೀಮ್ ಇಂಡಿಯಾ ತನ್ನ ಮುಂದಿನ 3 ಪಂದ್ಯಗಳ ಪೈಕಿ ಯಾವುದಾದರೊಂದು ಪಂದ್ಯದಲ್ಲಿ ಸೋತರೂ ಅಧಿಕೃತವಾಗಿ ಸೆಮಿಫೈನಲ್ ರೇಸ್‌ನಿಂದ ಹೊರಬೀಳಲಿದೆ. ಸದ್ಯ ನ್ಯೂಜಿಲೆಂಡ್ ಸ್ಕಾಟ್ಲೆಂಡ್ ವಿರುದ್ಧ ಗೆದ್ದಿರುವುದರಿಂದ ಮತ್ತು ಅಫ್ಘಾನಿಸ್ತಾನ ಉತ್ತಮ ನೆಟ್ ರನ್ ರೇಟ್ ಹೊಂದಿರುವುದರಿಂದ ಟೀಮ್ ಇಂಡಿಯಾ ತನ್ನ ಮುಂದಿನ ಪಂದ್ಯಗಳಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.

ನ್ಯೂಜಿಲೆಂಡ್ ಯಾವುದಾದರೂ ಪಂದ್ಯವೊಂದರಲ್ಲಿ ಸೋಲಲೇಬೇಕು

ನ್ಯೂಜಿಲೆಂಡ್ ಯಾವುದಾದರೂ ಪಂದ್ಯವೊಂದರಲ್ಲಿ ಸೋಲಲೇಬೇಕು

ಟೂರ್ನಿಯಲ್ಲಿ ಈಗಾಗಲೇ 3 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು ಮತ್ತೊಂದರಲ್ಲಿ ಸೋತಿರುವ ನ್ಯೂಜಿಲೆಂಡ್, ಇನ್ನೂ 2 ಪಂದ್ಯಗಳನ್ನಾಡಲಿದೆ. ಹೌದು, ನ್ಯೂಜಿಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ನಮೀಬಿಯಾ ತಂಡಗಳ ವಿರುದ್ಧ ಸೆಣಸಾಡಲಿದ್ದು ಈ ಪಂದ್ಯಗಳಲ್ಲಿ ಯಾವುದಾದರೊಂದು ಪಂದ್ಯದಲ್ಲಿ ನ್ಯೂಜಿಲೆಂಡ್ ಸೋತರೆ ಮಾತ್ರ ಭಾರತ ತಂಡದ ಸೆಮಿಫೈನಲ್ ಕನಸು ಜೀವಂತವಾಗಿರಲಿದೆ. ಒಂದುವೇಳೆ ನ್ಯೂಜಿಲೆಂಡ್ ಮುಂದಿನ ಎರಡೂ ಪಂದ್ಯಗಳನ್ನೂ ಗೆದ್ದು ಬಿಟ್ಟರೆ ಭಾರತ ಸೆಮಿಫೈನಲ್ ಹಂತ ಪ್ರವೇಶಿಸುವಲ್ಲಿ ಖಚಿತವಾಗಿ ವಿಫಲವಾಗಲಿದೆ.

ಟೀಮ್ ಇಂಡಿಯಾ ಮೇಲಿರುವ ಒತ್ತಡದ ಬಗ್ಗೆ ಬಾಯ್ಬಿಟ್ಟ ರೋಹಿತ್ ಶರ್ಮಾ | Oneindia Kannada
ನ್ಯೂಜಿಲೆಂಡ್‌ vs ಅಫ್ಘಾನಿಸ್ತಾನ ಪಂದ್ಯ ಮಹತ್ವದ್ದಾಗಲಿದೆ

ನ್ಯೂಜಿಲೆಂಡ್‌ vs ಅಫ್ಘಾನಿಸ್ತಾನ ಪಂದ್ಯ ಮಹತ್ವದ್ದಾಗಲಿದೆ

ಇಂದು ( ನವೆಂಬರ್‌ 3 ) ಅಫ್ಘಾನಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಏನಾದರೂ ಅಫ್ಘಾನಿಸ್ತಾನ ಗೆಲುವು ಸಾಧಿಸಿದರೆ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಲಿದೆ. ಒಂದುವೇಳೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ, ನವೆಂಬರ್ 7ರಂದು ನಡೆಯಲಿರುವ ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪಂದ್ಯ ಮಹತ್ವದ್ದಾಗಲಿದೆ. ಹೇಗಿದ್ದರೂ ನ್ಯೂಜಿಲೆಂಡ್ ನಮೀಬಿಯಾ ವಿರುದ್ಧ ಗೆಲುವು ಸಾಧಿಸಲಿದ್ದು, ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಡ್ಡಾಯವಾಗಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಈ ಮಹತ್ವದ ಪಂದ್ಯದಲ್ಲಿ ನ್ಯೂಜಿಲೆಂಡ್ ಅಫ್ಘಾನಿಸ್ತಾನ ವಿರುದ್ಧ ಸೋತರೆ ಆಗ ಮಾತ್ರ ಭಾರತ, ಆಫ್ಘಾನಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಸಮನಾದ ಅಂಕಗಳನ್ನು ಪಡೆದುಕೊಳ್ಳಲಿದ್ದು, ಅತಿ ಹೆಚ್ಚು ನೆಟ್ ರನ್ ರೇಟ್ ಹೊಂದಿರುವ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿದೆ.

Story first published: Wednesday, November 3, 2021, 19:51 [IST]
Other articles published on Nov 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X