ಭಾರತ vs ಪಾಕ್: "ಪಾಕಿಸ್ತಾನ ಗೆಲ್ಲಬೇಕೆಂದರೆ ಈ ಒಬ್ಬ ಆಟಗಾರನನ್ನು ತಂಡದಿಂದ ಹೊರಗಿಡಲೇಬೇಕು!"

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ನಿನ್ನೆಯಿಂದ ( ಅಕ್ಟೋಬರ್ 23 ) ಆರಂಭವಾಗಿದ್ದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮಹತ್ವದ ಪಂದ್ಯ ಇಂದು ( ಅಕ್ಟೋಬರ್ 24 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿಪ್ರತಿಸಲ ಭಾರತ ಗೆಲ್ಲುತ್ತದೆ ಎಂದೇನಿಲ್ಲ; ಭಾರತ vs ಪಾಕ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು ಹೆಸರಿಸಿದ ಗಂಗೂಲಿ

ಅನೇಕ ವರ್ಷಗಳ ನಂತರ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಪಂದ್ಯವೊಂದರಲ್ಲಿ ಸೆಣಸಾಡುತ್ತಿದ್ದು ಪಾಕಿಸ್ತಾನ ತಂಡ ಈ ಬಾರಿ ಭಾರತದ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಇದುವರೆಗೂ ಭಾರತದ ವಿರುದ್ಧ ಯಾವುದೇ ವಿಶ್ವಕಪ್ ಪಂದ್ಯವನ್ನು ಗೆದ್ದಿಲ್ಲ ಎಂಬ ತನ್ನ ಕಳಂಕವನ್ನು ತೆಗೆದು ಹಾಕುವ ಪ್ರಯತ್ನದಲ್ಲಿದೆ. ಮತ್ತೊಂದೆಡೆ ಭಾರತ ಈ ಬಾರಿಯ ಪಂದ್ಯದಲ್ಲಿಯೂ ಕೂಡ ಪಾಕಿಸ್ತಾನವನ್ನು ಸೋಲಿಸಿ ತನ್ನ ವಿಶೇಷ ದಾಖಲೆಯನ್ನು ಮುಂದುವರೆಸುವ ಗುರಿಯನ್ನು ಹೊಂದಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯ ಸಾಕಷ್ಟು ದೊಡ್ಡ ಮಟ್ಟದ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.

ಟಿ20 ವಿಶ್ವಕಪ್: ಟ್ರೋಫಿ ಗೆಲ್ಲುವ ತಂಡಕ್ಕೆ, ಫೈನಲ್ ಮತ್ತು ಸೆಮಿಫೈನಲ್‌ ಸೋತವರಿಗೂ ಸಿಗಲಿದೆ ಭಾರೀ ಹಣ!ಟಿ20 ವಿಶ್ವಕಪ್: ಟ್ರೋಫಿ ಗೆಲ್ಲುವ ತಂಡಕ್ಕೆ, ಫೈನಲ್ ಮತ್ತು ಸೆಮಿಫೈನಲ್‌ ಸೋತವರಿಗೂ ಸಿಗಲಿದೆ ಭಾರೀ ಹಣ!

ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ಎಲ್ಲಿಲ್ಲದ ನಿರೀಕ್ಷೆ ಮತ್ತು ಕುತೂಹಲಗಳು ಹುಟ್ಟಿಕೊಳ್ಳುತ್ತವೆ. ಈ ಎರಡೂ ತಂಡಗಳ ನಡುವಿನ ಸಾಮಾನ್ಯ ಸರಣಿಯ ಪಂದ್ಯವೆಂದರೆ ಸಾಕು ಸಾಕಷ್ಟು ಚರ್ಚೆಗಳು ಆ ಕುರಿತಾಗಿ ನಡೆಯುತ್ತವೆ. ಭಾರತ ಮತ್ತು ಪಾಕ್ ನಡುವೆ ನಡೆಯುವ ಸಾಮಾನ್ಯ ಪಂದ್ಯಗಳಿಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯಬೇಕಾದರೆ ವಿಶ್ವಕಪ್ ಟೂರ್ನಿಯಲ್ಲಿ ಈ ತಂಡಗಳು ಸೆಣಸಾಟ ನಡೆಸಲಿವೆ ಎಂದರೆ ಆ ಚರ್ಚೆ ಇನ್ನೂ ದೊಡ್ಡ ಮಟ್ಟದಲ್ಲಿ ಇರಲಿದೆ. ಈಗಾಗಲೇ ಈ ಮಹತ್ವದ ಪಂದ್ಯದ ಕುರಿತಾಗಿ ಸಾಕಷ್ಟು ಮಾಜಿ ಕ್ರಿಕೆಟಿಗರು ಅಭಿಪ್ರಾಯ ಮತ್ತು ಸಲಹೆಗಳನ್ನು ವ್ಯಕ್ತಪಡಿಸಿದ್ದು ಇದೀಗ ನ್ಯೂಜಿಲೆಂಡ್ ತಂಡದ ಮಾಜಿ ಕ್ರಿಕೆಟಿಗ ಸಿಮೋನ್ ಡೌಲ್ ಪಾಕಿಸ್ತಾನ ತಂಡಕ್ಕೆ ಮಹತ್ವದ ಸಲಹೆಯೊಂದನ್ನು ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ಈ ಆಟಗಾರನ ಅಗತ್ಯತೆ ಪಾಕಿಸ್ತಾನ ತಂಡಕ್ಕಿಲ್ಲ

ಈ ಆಟಗಾರನ ಅಗತ್ಯತೆ ಪಾಕಿಸ್ತಾನ ತಂಡಕ್ಕಿಲ್ಲ

"ಪಾಕಿಸ್ತಾನ ತಂಡದ ಆಟಗಾರ ಶೋಯೆಬ್ ಮಲಿಕ್ ಇತ್ತೀಚಿನ ದಿನಗಳಲ್ಲಿ ತೀರಾ ಕೆಟ್ಟ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಶೋಯಬ್ ಮಲೀಕ್ ಅವರ ಬ್ಯಾಟಿಂಗ್‌ನ್ನು ನೋಡಿದ್ದೆ. ನಿಜವಾಗಿಯೂ ಆತನ ಬ್ಯಾಟಿಂಗ್ ನೋಡಿ ಕಣ್ಣುಗಳು ಹೋಗಿಬಿಟ್ಟವು, ಆತ ರನ್ ಗಳಿಸಲು ಪರದಾಡುತ್ತಿದ್ದ. ಹೀಗೆ ರನ್ ಗಳಿಸಲು ಪರದಾಡುತ್ತಿರುವ ಶೋಯಬ್ ಮಲಿಕ್ ಅವರನ್ನು ತಂಡದಿಂದ ಹೊರಗಿಡುವುದು ಉತ್ತಮ" ಎಂದು ಸಿಮೋನ್ ಡೌಲ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

"ಈ ಇಬ್ಬರೂ ಆಟಗಾರರು ಒಂದೇ ತಂಡದಲ್ಲಿರುವುದು ಬೇಡ"

"ಶೋಯಬ್ ಮಲಿಕ್ ಮತ್ತು ಮೊಹಮ್ಮದ್ ಹಫೀಜ್ ಇಬ್ಬರಿಗೂ ಸಹ ತಂಡದಲ್ಲಿ ಸ್ಥಾನ ನೀಡುವ ಅಗತ್ಯತೆ ಇಲ್ಲ ಎಂದು ಭಾವಿಸುತ್ತೇನೆ. ಯುವ ಆಟಗಾರರೇ ತುಂಬಿರುವ ತಂಡದಲ್ಲಿ 40 ವರ್ಷದ ಈ ಇಬ್ಬರು ಆಟಗಾರರಿಗೂ ಸ್ಥಾನ ನೀಡಬೇಕಾದ ಅಗತ್ಯತೆ ಇಲ್ಲ. ಈ ಇಬ್ಬರಲ್ಲಿ ಶೋಯೆಬ್ ಮಲಿಕ್ ತೀರಾ ಕಳಪೆ ಫಾರ್ಮ್‌ ಹೊಂದಿದ್ದು, ಮೊಹಮ್ಮದ್ ಹಫೀಜ್ ಬೌಲಿಂಗ್ ಮಾಡಲಿದ್ದಾರೆ ಎನ್ನುವ ಕಾರಣಕ್ಕೆ ಆತನಿಗೆ ತಂಡದಲ್ಲಿ ಸ್ಥಾನ ನೀಡಬಹುದು" ಎಂದು ಸಿಮೋನ್ ಡೌಲ್ ಅಭಿಪ್ರಾಯಪಟ್ಟಿದ್ದಾರೆ.

ಛೇ!!ಟೀಮ್ ಇಂಡಿಯಾ ಸೋತಿದ್ದಕ್ಕೆ ಪಾಕಿಸ್ತಾನ ಇಷ್ಟು ಕೆಳಮಟ್ಟಕ್ಕೆ ಇಳಿಬಾರ್ದಿತ್ತು | Oneindia Kannada
ಪ್ರಕಟವಾಗಿರುವ ಪಾಕಿಸ್ತಾನ ತಂಡದಲ್ಲಿ ಇಬ್ಬರೂ ಸ್ಥಾನ ಪಡೆದುಕೊಂಡಿದ್ದಾರೆ

ಪ್ರಕಟವಾಗಿರುವ ಪಾಕಿಸ್ತಾನ ತಂಡದಲ್ಲಿ ಇಬ್ಬರೂ ಸ್ಥಾನ ಪಡೆದುಕೊಂಡಿದ್ದಾರೆ

ಶೋಯಬ್ ಮಲಿಕ್ ಮತ್ತು ಮೊಹಮ್ಮದ್ ಹಫೀಜ್ ಕುರಿತು ಸಿಮೋನ್ ಡೌಲ್ ಈ ರೀತಿಯ ಹೇಳಿಕೆಯನ್ನು ನೀಡಿದ್ದು ನಿನ್ನೆ ಪ್ರಕಟವಾದ ಪಾಕಿಸ್ತಾನದ 12 ಆಟಗಾರರ ತಂಡದಲ್ಲಿ ಈ ಇಬ್ಬರೂ ಸಹ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯಕ್ಕೆ 11 ಆಟಗಾರರು ಕಣಕ್ಕಿಳಿಯಲೇಬೇಕಾಗಿರುವುದರಿಂದ ಯಾರಾದರೂ ಒಬ್ಬರನ್ನು ಮಾತ್ರ ತಂಡದಿಂದ ಹೊರ ಹಾಕಬಹುದು. ಸಿಮೋನ್ ಡೌಲ್ ಹೇಳಿದಂತೆ ಬೌಲಿಂಗ್ ಮಾಡುವ ಕಾರಣಕ್ಕೆ ಮೊಹಮ್ಮದ್ ಹಫೀಜ್ ಅವರಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆಗಳು ಹೆಚ್ಚಿವೆ.

ಭಾರತ ವಿರುದ್ಧದ ಪಂದ್ಯಕ್ಕೆ ಪ್ರಕಟವಾಗಿರುವ 12 ಆಟಗಾರರ ಪಾಕ್ ತಂಡ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಅಲಿ, ಹೈದರ್ ಅಲಿ, ಇಮಾದ್ ವಾಸಿಂ, ಶಾದಬ್ ಖಾನ್, ಹಸನ್ ಅಲಿ, ಶಾಹೀನ್ ಶಾ ಅಫ್ರಿದಿ, ಹಾರಿಸ್ ರೌಫ್

For Quick Alerts
ALLOW NOTIFICATIONS
For Daily Alerts
Story first published: Sunday, October 24, 2021, 18:35 [IST]
Other articles published on Oct 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X