ಟಿ20 ವಿಶ್ವಕಪ್: ಟ್ರೋಫಿ ಗೆಲ್ಲುವ ತಂಡಕ್ಕೆ, ಫೈನಲ್ ಮತ್ತು ಸೆಮಿಫೈನಲ್‌ ಸೋತವರಿಗೂ ಸಿಗಲಿದೆ ಭಾರೀ ಹಣ!

2016ರ ನಂತರ ಯಾವುದೇ ವರ್ಷಗಳಲ್ಲಿಯೂ ನಡೆಯದಿದ್ದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಇದೀಗ ಮರಳಿ ಬಂದಿದ್ದು ಅಕ್ಟೋಬರ್ 17ರಿಂದ ಚಾಲನೆ ಪಡೆದುಕೊಂಡಿದೆ. ಅಕ್ಟೋಬರ್ 17ರಿಂದ ಅಕ್ಟೋಬರ್ 22ರವರೆಗೂ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ನಡೆದಿದ್ದು ಅರ್ಹತಾ ಸುತ್ತಿನಲ್ಲಿ ಸ್ಕಾಟ್ಲೆಂಡ್, ಬಾಂಗ್ಲಾದೇಶ, ಒಮನ್, ಪಪುವಾ ನ್ಯೂ ಗಿನಿಯಾ, ಶ್ರೀಲಂಕಾ, ನಮೀಬಿಯಾ, ಐರ್ಲೆಂಡ್ ಮತ್ತು ನೆದರ್ಲೆಂಡ್ಸ್ ತಂಡಗಳು ತಲಾ 3 ಪಂದ್ಯಗಳಲ್ಲಿ ಸೆಣಸಾಟ ನಡೆಸಿದ್ದು, ಈ 8 ತಂಡಗಳ ಪೈಕಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳಾದ ಸ್ಕಾಟ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನಮೀಬಿಯಾ ತಂಡಗಳು ಸೂಪರ್ 12 ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿವೆ.

ಟಿ20 ವಿಶ್ವಕಪ್: ಒಂದು ದಿನ ಮುಂಚೆಯೇ ಭಾರತ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!ಟಿ20 ವಿಶ್ವಕಪ್: ಒಂದು ದಿನ ಮುಂಚೆಯೇ ಭಾರತ ವಿರುದ್ಧದ ಪಂದ್ಯಕ್ಕೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!

ಹೀಗೆ ಅಕ್ಟೋಬರ್ 22ಕ್ಕೆ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯಗಳು ಮುಕ್ತಾಯಗೊಂಡ ನಂತರ ಅಕ್ಟೋಬರ್ 23ರಿಂದ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಿವೆ. ಸದ್ಯ ಆರಂಭವಾಗಿರುವ ಸೂಪರ್ 12 ಹಂತದ ಅಂತಿಮ ಪಂದ್ಯ ನವೆಂಬರ್ 8ರಂದು ನಡೆಯಲಿದ್ದು, 2 ಸೆಮಿಫೈನಲ್ ಪಂದ್ಯಗಳು ನವೆಂಬರ್‌ 10 ಮತ್ತು ನವೆಂಬರ್‌ 11ರಂದು ನಡೆಯಲಿವೆ. ಹಾಗೂ ಟೂರ್ನಿಯ ಪ್ರಮುಖ ಘಟ್ಟವಾದ ಫೈನಲ್ ಪಂದ್ಯವು ನವೆಂಬರ್‌ 14ರಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಪ್ರತಿಷ್ಠಿತ ಟೂರ್ನಿಗೆ ಅಧಿಕೃತ ತೆರೆಬೀಳಲಿದೆ.

ನಮೀಬಿಯಾ ಸೂಪರ್12ಗೆ, ರದ್ದಾಗಿದ್ದ ಭಾರತ vs ಇಂಗ್ಲೆಂಡ್ ಟೆಸ್ಟ್ ದಿನಾಂಕ ಪ್ರಕಟ; ಅ.22ರ ಪ್ರಮುಖ ಸುದ್ದಿಗಳುನಮೀಬಿಯಾ ಸೂಪರ್12ಗೆ, ರದ್ದಾಗಿದ್ದ ಭಾರತ vs ಇಂಗ್ಲೆಂಡ್ ಟೆಸ್ಟ್ ದಿನಾಂಕ ಪ್ರಕಟ; ಅ.22ರ ಪ್ರಮುಖ ಸುದ್ದಿಗಳು

ಹೀಗೆ ಟೂರ್ನಿಯಲ್ಲಿ ಅರ್ಹತಾ ಸುತ್ತು, ಸೂಪರ್ 12 ಸುತ್ತು, ಸೆಮಿಫೈನಲ್ ಹಂತ ಮತ್ತು ಫೈನಲ್ ಪಂದ್ಯ ಹೀಗೆ ಹಲವಾರು ಘಟ್ಟಗಳಿದ್ದು, ಈ ವಿವಿಧ ಘಟ್ಟಗಳಿಂದ ಸೋತು ಹೊರ ಬೀಳುವ ತಂಡಗಳಿಗೆ ಎಷ್ಟು ಮೊತ್ತದ ಬಹುಮಾನ ಸಿಗಲಿದೆ ಮತ್ತು ಫೈನಲ್ ಪಂದ್ಯದಲ್ಲಿ ಗೆದ್ದು ಚಾಂಪಿಯನ್ಸ್ ಆಗಿ ಹೊರ ಹೊಮ್ಮುವ ತಂಡಕ್ಕೆ ಎಷ್ಟು ಮೊತ್ತದ ಬಹುಮಾನ ಧನ ಲಭಿಸಲಿದೆ, ಸದ್ಯ ಯಾವ ತಂಡಗಳು ಸೂಪರ್ ೧೨ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ ಹಾಗೂ ಟಿ ಟ್ವೆಂಟಿ ಇತಿಹಾಸದಲ್ಲಿ ಯಾವ ತಂಡಗಳು ಟ್ರೋಫಿ ಗೆದ್ದಿವೆ ಎಂಬುದರ ಮಾಹಿತಿ ಮುಂದೆ ಓದಿ..

ಬಹುಮಾನ ಹಣದ ಹಂಚಿಕೆ ಹೀಗಿದೆ

ಬಹುಮಾನ ಹಣದ ಹಂಚಿಕೆ ಹೀಗಿದೆ

ವಿಜೇತ ತಂಡ: 1,600,000 ಡಾಲರ್

ರನ್ನರ್‌ಅಪ್ ತಂಡ: 800,000 ಡಾಲರ್

ಸೆಮಿಫೈನಲ್‌ನಲ್ಲಿ ಸೋಲುವ ತಂಡಗಳು: 400,000 ಡಾಲರ್

ಸೂಪರ್ 12 ಗೆಲುವು: 40,000 ಡಾಲರ್ ( ಒಂದು ಪಂದ್ಯಕ್ಕೆ )

ಸೂಪರ್ 12 ಸುತ್ತಿನಲ್ಲಿ ಹೊರಬೀಳುವ ತಂಡಕ್ಕೆ: 70,000 ಡಾಲರ್

ಅರ್ಹತಾ ಸುತ್ತಿನಲ್ಲಿ ಗೆಲುವು: 40,000 ಡಾಲರ್ ( ಒಂದು ಪಂದ್ಯಕ್ಕೆ )

ಅರ್ಹತಾ ಸುತ್ತಿನಲ್ಲಿ ಹೊರಬೀಳುವ ತಂಡಕ್ಕೆ: 40,000 ಡಾಲರ್

ಟಿ20 ವಿಶ್ವಕಪ್ 2021 ಸೂಪರ್ 12 ಗುಂಪುಗಳು:

ಟಿ20 ವಿಶ್ವಕಪ್ 2021 ಸೂಪರ್ 12 ಗುಂಪುಗಳು:

ಅರ್ಹತಾ ಸುತ್ತಿನಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳಾದ ಸ್ಕಾಟ್ಲೆಂಡ್, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನಮೀಬಿಯಾ ತಂಡಗಳು ಸೂಪರ್ 12 ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದು ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳು ಗ್ರೂಪ್ 2ಗೆ ಸೇರ್ಪಡೆಗೊಂಡಿದ್ದರೆ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಗ್ರೂಪ್‌ 1ಗೆ ಸೇರ್ಪಡೆಯಾಗಿವೆ. ಹೀಗೆ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ತಂಡಗಳು ಸೂಪರ್ 12 ಸುತ್ತಿಗೆ ಪ್ರವೇಶವನ್ನು ಪಡೆದುಕೊಂಡ ನಂತರ ಲೀಗ್ ಪಂದ್ಯಗಳ ಗುಂಪುಗಳಲ್ಲಿ ಕೆಲವು ಬದಲಾವಣೆಗಳಾಗಿವೆ.

ಗುಂಪು 1 -

ವೆಸ್ಟ್ ಇಂಡೀಸ್

ಇಂಗ್ಲೆಂಡ್

ಆಸ್ಟ್ರೇಲಿಯಾ

ದಕ್ಷಿಣ ಆಫ್ರಿಕಾ

ಶ್ರೀಲಂಕಾ

ಬಾಂಗ್ಲಾದೇಶ

ಗುಂಪು 2 -

ಭಾರತ

ನ್ಯೂಜಿಲ್ಯಾಂಡ್

ಪಾಕಿಸ್ತಾನ

ಅಫ್ಘಾನಿಸ್ತಾನ

ನಮೀಬಿಯಾ

ಸ್ಕಾಟ್ಲೆಂಡ್

ಟಿ20 ವಿಶ್ವಕಪ್ ಹಿಂದಿನ ವಿಜೇತರು

ಟಿ20 ವಿಶ್ವಕಪ್ ಹಿಂದಿನ ವಿಜೇತರು

ವೆಸ್ಟ್ ಇಂಡೀಸ್ 2016 ಮತ್ತು 2012

ಶ್ರೀಲಂಕಾ 2014

ಇಂಗ್ಲೆಂಡ್ 2010

ಪಾಕಿಸ್ತಾನ 2009

ಭಾರತ 2007

For Quick Alerts
ALLOW NOTIFICATIONS
For Daily Alerts
Story first published: Saturday, October 23, 2021, 21:33 [IST]
Other articles published on Oct 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X