ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2022: ನೇರ ಪ್ರವೇಶ ಪಡೆದ ಅಫ್ಘಾನ್: ಅರ್ಹತಾ ಸುತ್ತಿನಲ್ಲಿ ಆಡಲಿದ್ದಾರೆ ಮಾಜಿ ಚಾಂಪಿಯನ್ನರು!

T20 World cup 2022: Afghan and Bangla earn direct entry; Windies and Sri Lanka will compete qualifying rounds

2021ರ ಟಿ20 ವಿಶ್ವಕಪ್‌ನ ಸೂಪರ್ 12 ಹಂತ ಅಂತಿಮ ಘಟ್ಟಕ್ಕೆ ತಲುಪಿದೆ. ಸೆಮಿ ಫೈನಲ್‌ಗೆ ಪ್ರವೇಶ ಪಡೆಯಲಿರುವ ನಾಲ್ಕು ತಂಡಗಳ ಪೈಕಿ 3 ತಂಡಗಳು ಈಗಾಗಲೇ ಅಧಿಕೃತವಾಗಿ ಅರ್ಹತೆ ಸಂಪಾದಿಸಿದೆ. ಉಳಿದ ಒಂದು ಸ್ಥಾನಕ್ಕೆ ಈಗ ಗ್ರೂಪ್ 2ರಲ್ಲಿ ಪೈಪೋಟಿ ನಡೆಯುತ್ತಿದ್ದು ಭಾರತ ಸೇರಿದಂತೆ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಈ ಸ್ಥಾನಕ್ಕಾಗಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ. ಈ ಸಂದರ್ಭದಲ್ಲಿ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ನೇರವಾಗಿ ಅರ್ಹತೆ ಸಂಪಾದಿಸಿರುವ ಹಾಗೂ ಅರ್ಹತಾ ಸುತ್ತಿನಲ್ಲಿ ಆಡಬೇಕಿರುವ ತಂಡಗಳ ಪಟ್ಟಿ ಈಗ ಸ್ಪಷ್ಟವಾಗಿದೆ.

ಈ ಬಾರಿಯ ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಸಂಪಾದಿಸಿದ್ದ ಅಫ್ಘಾನಿಸ್ತಾನ ಹಾಗೂ ಅರ್ಹತಾ ಸುತ್ತಿನಲ್ಲಿ ಆಡಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದ ಬಾಂಗ್ಲಾದೇಶ ತಂಡಗಳು ಮುಂದಿನ ಟಿ20 ವಿಶ್ವಕಪ್‌ನಲ್ಲಿ ಸೇರವಾಗಿ ಪ್ರಧಾನ ಸುತ್ತಿನಲ್ಲಿ ಭಾಗಿಯಾಗಲು ಅರ್ಹತೆ ಸಂಪಾದಿಸಿವೆ. ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ಈ ವಿಶ್ವಕಪ್ ನಡೆಯಲಿದ್ದು ಎರಡು ಪ್ರಮುಖ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಬೇಕಾದ ಅನಿವಾರ್ಯುತೆಗೆ ಸಿಲುಕಿದೆ.

ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿ ನೀಡಿದ ಸ್ಕಾಟ್ಲೆಂಡ್ ಆಟಗಾರರಿಗೆ ರಾಹುಲ್, ರೋಹಿತ್ ಟಿಪ್ಸ್ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿ ನೀಡಿದ ಸ್ಕಾಟ್ಲೆಂಡ್ ಆಟಗಾರರಿಗೆ ರಾಹುಲ್, ರೋಹಿತ್ ಟಿಪ್ಸ್

ಎರಡು ಬಾರಿಯ ಚಾಂಪಿಯನ್ ತಂಡವಾಗಿರುವ ವೆಸ್ಟ್ ಇಂಡೀಸ್ ಮುಂದಿನ ಟಿ20 ವಿಶ್ವಕಪ್‌ನಲ್ಲಿ ನೇರವಾಗಿ ಪ್ರಧಾನ ಸುತ್ತಿಗೆ ಪ್ರವೇಶ ಪಡೆಯಲು ವಿಫಲವಾಗಿದೆ. ಇದರ ಜೊತೆಗೆ ಮಾಜಿ ಚಾಂಪಿಯನ್ ತಂಡವಾಗಿರುವ ಶ್ರೀಲಂಕಾ ತಂಡ ಮುಂದಿನ ಟಿ20 ವಿಶ್ವಕಪ್‌ನಲ್ಲಿಯೂ ಈ ಬಾರಿಯಂತೆ ನೇರವಾಗಿ ಪ್ರಧಾನ ಸುತ್ತಿಗೇರಲು ವಿಫಲವಾಗಿದೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಈ ಎರಡು ಪ್ರಮುಖ ತಂಡಗಳು ಕೂಡ ಅರ್ಹತಾ ಸುತ್ತಿನಲ್ಲಿ ಆಡಿದ ನಂತರವೇ ಪ್ರಧಾನ ಸುತ್ತಿಗೆ ಅರ್ಹತೆಯನ್ನು ಪಡೆಯಬೇಕಿದೆ.

ಉಳಿದಂತೆ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೇರಿದ ಎರಡು ತಂಡಗಳು ಹಾಗೂ ಶ್ರೇಯಾಂಕಪಟ್ಟಿಯಲ್ಲಿ ಅಗ್ರ 6 ತಂಡಗಳು ಮುಂದಿನ ಟಿ20 ವಿಶ್ವಕಪ್‌ನ ಪ್ರಧಾನ ಸುತ್ತಿಗೆ ನೇರವಾಗಿ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲಿದೆ. ಶನಿವಾರದ ಟಿ20 ವಿಶ್ವಕಪ್‌ನ ಪಂದ್ಯಗಳ ನಂತರ ಇಂಗ್ಲೆಂಡ್, ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಂದಿನ ಸುತ್ತಿಗೆ ಈಗಾಗಲೇ ನೇರವಾಗಿ ಪ್ರವೇಶ ಪಡೆದುಕೊಂಡಿದೆ.

ಶನುವಾರ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲುಯಾ ವಿರುದ್ಧ ಸೋಲು ಕಾಣುವ ಮೂಲಕ ಐಸಿಸಿ ಶ್ರೇಯಾಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ. ಈ ಮೂಲಕ ಶ್ರೀಲಂಕಾ ತಂಡದ ನಂತರದ ಸ್ಥಾನದಲ್ಲಿದೆ. ಈ ಮಧ್ಯೆ ಬಾಂಗ್ಲಾದೇಶ 8ನೇ ಸ್ಥಾನವನ್ನು ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.

SMAT 2021-22: ಮನೀಶ್ ಅರ್ಧಶತಕ; ಹ್ಯಾಟ್ರಿಕ್ ಗೆಲುವು ಕಂಡು ಅಬ್ಬರಿಸುತ್ತಿದೆ ಕರ್ನಾಟಕSMAT 2021-22: ಮನೀಶ್ ಅರ್ಧಶತಕ; ಹ್ಯಾಟ್ರಿಕ್ ಗೆಲುವು ಕಂಡು ಅಬ್ಬರಿಸುತ್ತಿದೆ ಕರ್ನಾಟಕ

ಬಾಂಗ್ಲಾದೇಶ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಲ್ಲಿ ತನ್ನ ಎಲ್ಲಾ ಪಂದ್ಯಗಳಲ್ಲಿ ಕೂಡ ಸೋಲು ಕಂಡಿದೆ. ಆದರೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳ ವಿರುದ್ಧ ತವರಿನಲ್ಲಿ ನಡೆದ ದ್ವಿಪಕ್ಷೀಯ ಸರಣಿಗಳಲ್ಲಿ ಬಾಂಗ್ಲಾದೇಶ ಗೆದ್ದು ಬೀಗಿತ್ತು. ಇದರಿಂದಾಗಿ ಬಾಂಗ್ಲಾದೇಶ ಪ್ರಧಾನ ಸುತ್ತಿನಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿತ್ತು. ತಂಡದಲ್ಲಿ ಸಾಕಷ್ಟು ಸ್ಪೋಟಕ ಆಟಗಾರರು ಕೂಡ ಇದ್ದರು. ಜೊತೆಗೆ ಹಾಲಿ ಚಾಂಪಿಯನ್ ಹಣೆಪಟ್ಟಿಯೊಂದಿಗೆ ವೆಸ್ಟ್ ಇಂಡೀಸ್ ಈ ವಿಶ್ವಕಪ್‌ಗೆ ಕಾಲಿಟ್ಟಿತ್ತು. ಆದರೆ ಅದಕ್ಕೆ ತಕ್ಕನಾದ ಪ್ರದರ್ಶನ ನೀಡುವಲ್ಲಿ ವೆಸ್ಟ್ ಇಂಡೀಸ್ ವಿಫಲವಾಗಿದೆ. ತಂಡದ ಪ್ರಮುಖ ಆಟಗಾರರು ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ತಂಡ ಆಘಾತಕಾರಿ ರೀತಿಯಲ್ಲಿ ಟೂರ್ನಿಯಿಂದ ಹೊರಬಿದ್ದಿದೆ.

ಟ್ರೋಫಿ ಗೆಲ್ಲದೆ ನಿರಾಸೆಯಿಂದ ವಿರಾಟ್ ಯುಗ ಮುಕ್ತಾಯ | Oneindia Kannada

Story first published: Monday, November 8, 2021, 9:42 [IST]
Other articles published on Nov 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X