ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ZIM: ಭಾರತ vs ಜಿಂಬಾಬ್ವೆ ಸೂಪರ್ 12 ಪಂದ್ಯದ ಸಮಯ, ಎಲ್ಲಿ ವೀಕ್ಷಿಸಬೇಕು?

T20 World Cup 2022: India vs Zimbabwe Super 12 Match Time, Where to Watch?

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (MCG) ರೋಹಿತ್ ಶರ್ಮಾ ನಾಯಕತ್ವದ ತಂಡವು ಪಾಕಿಸ್ತಾನದ ವಿರುದ್ಧ ನಾಲ್ಕು ವಿಕೆಟ್‌ಗಳ ರೋಚಕ ಜಯದೊಂದಿಗೆ ಐಸಿಸಿ ಪುರುಷರ ಟಿ20 ವಿಶ್ವಕಪ್ 2022 ಅಭಿಯಾನವನ್ನು ಪ್ರಾರಂಭಿಸಿತು.

ಇದೀಗ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಲು ಸಾಂಪ್ರದಾಯಿಕ ಸ್ಥಳಕ್ಕೆ ಮರಳಲಿದೆ. ಭಾನುವಾರ (ನವೆಂಬರ್ 6) ಉತ್ಸಾಹಭರಿತ ಜಿಂಬಾಬ್ವೆ ವಿರುದ್ಧ ಸೂಪರ್ 12ರ ಅಂತಿಮ ಗುಂಪು 2 ಪಂದ್ಯದಲ್ಲಿ ಗೆದ್ದರೆ ಹಲವು ಲೆಕ್ಕಾಚಾರಗಳು ಅವರು ಸೆಮಿಫೈನಲ್ ಸ್ಥಾನವನ್ನು ಬಲಪಡಿಸಲಿವೆ.

ಭಾರತ ತಂಡವು 2016ರಲ್ಲಿ ಜಿಂಬಾಬ್ವೆ ವಿರುದ್ಧ ಕೊನೆಯ ಮುಖಾಮುಖಿಯಲ್ಲಿ 5-2 ಅಂತರವನ್ನು ಹೊಂದಿದ್ದರೂ, ಈ ಎರಡು ತಂಡಗಳು ಟಿ20 ವಿಶ್ವಕಪ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿ.

ಭಾರತ ತಂಡ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧದ ಹೋರಾಡಿ ಗೆದ್ದಿದ್ದರೂ, ಜಿಂಬಾಬ್ವೆಯನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂಬುದು ಅವರಿಗೆ ಸಂಪೂರ್ಣವಾಗಿ ತಿಳಿದಿದೆ. ಜಿಂಬಾಬ್ವೆ ತಂಡ ಪರ್ತ್‌ನಲ್ಲಿ ಪಾಕಿಸ್ತಾನದ ವಿರುದ್ಧ ಒಂದು ರನ್‌ಗಳ ಅಂತರದ ಗೆಲುವು ಸಾಧಿಸಿದ್ದು, ಎಲ್ಲರನ್ನು ಬೆರಗುಗೊಳಿಸಿತ್ತು.

ರೋಹಿತ್ ಶರ್ಮಾ ನೆದರ್ಲ್ಯಾಂಡ್ಸ್ ವಿರುದ್ಧ ಅರ್ಧಶತಕ ಗಳಿಸಿದರು ಮತ್ತು ಬಾಂಗ್ಲಾದೇಶದ ವಿರುದ್ಧ ಕೆಎಲ್ ರಾಹುಲ್ ಅರ್ಧಶತಕದ ಸ್ಕೋರ್‌ಗಳನ್ನು ಗಳಿಸಿದ್ದನ್ನು ಬಿಟ್ಟರೆ, ಈವರೆಗೆ ಇವರಿಬ್ಬರಿಂದ ದೊಡ್ಡ ಮೊತ್ತ ಸಿಡಿದಿಲ್ಲ. ನಾಕೌಟ್ ಪ್ರವೇಶಿಸುವ ಮೊದಲು ಈ ಆರಂಭಿಕರು ತಂಡಕ್ಕೆ ಉತ್ತಮ ಜೊತೆಯಾಟವನ್ನು ನೀಡಲು ಭಾರತ ಬಯಸುತ್ತದೆ.

ವಿರಾಟ್ ಕೊಹ್ಲಿ ಬ್ಯಾಟ್‌ನೊಂದಿಗೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದೇ ವೇಳೆ ಸೂರ್ಯಕುಮಾರ್ ಯಾದವ್ ಕೂಡ ಭಾರತದ ಸಂಕಷ್ಟ ಪರಿಸ್ಥಿತಿಯಲ್ಲೆಲ್ಲಾ ತಂಡಕ್ಕೆ ಆಸರೆಯಾಗಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದ ಪವರ್-ಹಿಟ್ಟಿಂಗ್‌ನೊಂದಿಗೆ ಗಮನಾರ್ಹ ಕೊಡುಗೆ ನೀಡಲು ಭಾರತ ಎದುರು ನೋಡುತ್ತಿದೆ.

Story first published: Sunday, November 6, 2022, 8:13 [IST]
Other articles published on Nov 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X