ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup 2022: ಸೆಮಿಫೈನಲ್‌ನಲ್ಲಿ ಈ ಇಬ್ಬರ ಆಯ್ಕೆಯ ಬಗ್ಗೆ ಸುಳಿವು ನೀಡಿದ ರೋಹಿತ್

T20 World Cup 2022: Rohit Sharma Hints On Rishabh Pant And Dinesh Karthik Selection In Semi-final Match

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೆಣಸಾಲಿದ್ದು, ಇಲ್ಲಿ ಗೆದ್ದ ತಂಡ ಪ್ರಶಸ್ತಿ ಹಣಾಹಣಿಗೆ ಮುನ್ನಡೆಯಲಿದೆ.

ಈ ಬಾರಿ ವಿಶ್ವಕಪ್ ಗೆದ್ದೇ ಗೆಲ್ಲುತ್ತೇವೆ ಎಂದು ಛಲ ತೊಟ್ಟಿರುವ ಭಾರತ ತಂಡ, ಸೂಪರ್ 12ರಲ್ಲಿ 5 ಪಂದ್ಯಗಳಿಂದ 8 ಅಂಕಗಳೊಂದಿಗೆ ಗ್ರೂಪ್ 2ರಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ವಿರುದ್ಧದ ಪ್ರಮುಖ ಪಂದ್ಯಕ್ಕಾಗಿ ರೋಹಿತ್ ಶರ್ಮಾ ನಾಯಕತ್ವದ ತಂಡ ಯಾವ ಸಂಯೋಜನೆಯೊಂದಿಗೆ ಹೋಗುತ್ತಾರೆ ಎಂಬುದರ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ.

IND vs ENG: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ; ಸ್ಟಾರ್ ವೇಗಿಗೆ ಗಾಯIND vs ENG: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ಗೆ ಮತ್ತೊಂದು ಆಘಾತ; ಸ್ಟಾರ್ ವೇಗಿಗೆ ಗಾಯ

ಸೆಮಿಫೈನಲ್ ಪಂದ್ಯದ ಮೊದಲು ನಾಯಕ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ತಂಡದ ಸಿದ್ಧತೆಗಳ ಬಗ್ಗೆ ಮತ್ತು ತಂಡವು ಯಾವ ರೀತಿಯ ಸಂಯೋಜನೆಯೊಂದಿಗೆ ಹೋಗಬಹುದು ಎಂಬುದರ ಕುರಿತು ಮಾತನಾಡಿದರು.

ಜಿಂಬಾಬ್ವೆ ವಿರುದ್ಧದ ಭಾರತದ ಕೊನೆಯ ಸೂಪರ್ 12 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಬದಲಿಗೆ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರಿಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡಲಾಯಿತು ಆದರೆ, ರಿಷಭ್ ಪಂತ್ ಕೇವಲ 3 ರನ್ ಗಳಿಸಿ ನಿರಾಸೆ ಮೂಡಿಸಿದರು.

ಬದಲಾವಣೆ ಮಾಡಲು ಬಯಸಿದರೆ ಕೆಲವು ಆಯ್ಕೆಗಳನ್ನು ಹೊಂದಿದ್ದೇವೆ

ಬದಲಾವಣೆ ಮಾಡಲು ಬಯಸಿದರೆ ಕೆಲವು ಆಯ್ಕೆಗಳನ್ನು ಹೊಂದಿದ್ದೇವೆ

"ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ನಡುವೆ ಹೇಳುವುದಾದರೆ, ನಾನು ಕೊನೆಯ ಪಂದ್ಯದ ವೇಳೆಯೂ ಹೊಂದಿದ್ದೆ, ಪರ್ತ್‌ನಲ್ಲಿ ನಾವು ಆಡಿದ ಎರಡು ಅನಧಿಕೃತ ಅಭ್ಯಾಸ ಪಂದ್ಯಗಳನ್ನು ಹೊರತುಪಡಿಸಿ ಈ ಪ್ರವಾಸದಲ್ಲಿ ಆಡಲು ಸಾಧ್ಯವಾಗದ ಏಕೈಕ ವ್ಯಕ್ತಿ ರಿಷಭ್ ಪಂತ್. ಅಂದಿನಿಂದ ಅವರು ಅವರು ಯಾವುದೇ ಹಿಟ್ ನೀಡಿಲ್ಲ, ಅವರು ಆಟದ ಸಮಯವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ನಾವು ಅವರಿಗೆ ಸಮಯವನ್ನು ನೀಡಲು ಬಯಸಿದ್ದೇವೆ ಮತ್ತು ನಾವು ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಬದಲಾವಣೆ ಮಾಡಲು ಬಯಸಿದರೆ ಕೆಲವು ಆಯ್ಕೆಗಳನ್ನು ಹೊಂದಿದ್ದೇವೆ," ಎಂದು ರೋಹಿತ್ ಶರ್ಮಾ ಹೇಳಿದರು.

ಸೆಮಿಫೈನಲ್ ಪಂದ್ಯ ಆಗಿರಲಿ ಅಥವಾ ಯಾವುದೇ ಪಂದ್ಯ ಆಡಿದರೂ ಅದಕ್ಕೆ ಎಲ್ಲರೂ ರೆಡಿ ಆಗಬೇಕು ಅಂತ ಹೇಳಿದ್ದೇವೆ. ಜಿಂಬಾಬ್ವೆ ಪಂದ್ಯದ ಮೊದಲು ಸೆಮಿಫೈನಲ್‌ನಲ್ಲಿ ನಾವು ಯಾವ ತಂಡವನ್ನು ಆಡುತ್ತೇವೆ ಎಂದು ನಮಗೆ ತಿಳಿದಿರಲಿಲ್ಲ, ಹಾಗಾಗಿ ಅಲ್ಲಿ ಸ್ವಲ್ಪ ಯುದ್ಧತಂತ್ರವಾಗಿತ್ತು. ಸ್ಪಿನ್ನರ್‌ಗಳನ್ನು ಎದುರಿಸಲು ಎಡಗೈ ಬ್ಯಾಟ್ಸ್‌ಮನ್‌ಗೆ ಅವಕಾಶವನ್ನು ನೀಡಲು ನಾವು ಬಯಸಿದ್ದೇವೆ. ಆದರೆ ಮತ್ತೆ ನಾಳೆ ಏನಾಗಲಿದೆ ಎಂದು ನಾನು ನಿಮಗೆ ಹೇಳಲಾರೆ. ಆದರೆ ಆ ವಿಕೆಟ್ ಕೀಪರ್‌ಗಳಿಬ್ಬರೂ ತಂಡದ ಆಯ್ಕೆಯಲ್ಲಿರುತ್ತಾರೆ," ಎಂದು ರೋಹಿತ್ ಶರ್ಮಾ ವಿವರಿಸಿದರು.

ಸೂರ್ಯಕುಮಾರ್ ತನ್ನದೇ ಶೈಲಿಯಲ್ಲಿ ಆಡಲು ಇಷ್ಟಪಡುತ್ತಾನೆ

ಸೂರ್ಯಕುಮಾರ್ ತನ್ನದೇ ಶೈಲಿಯಲ್ಲಿ ಆಡಲು ಇಷ್ಟಪಡುತ್ತಾನೆ

2022ರ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೂರ್ಯಕುಮಾರ್ ಯಾದವ್ ಅವರು ಬಿರುಸಿನ ಸ್ಟ್ರೈಕ್ ರೇಟ್‌ನಲ್ಲಿ ಮೂರು ಅರ್ಧಶತಕಗಳನ್ನು ದಾಖಲಿಸಿದ ಕಾರಣ ಅವರು ಭಾರತದ ಮಹತ್ವದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

"ಅದು ಬಹುಶಃ ಸೂರ್ಯಕುಮಾರ್ ಯಾದವ್ ಸ್ವಭಾವ ಮತ್ತು ಅವನು ನಿರ್ಭೀತಿಯಿಂದ ಆಡುತ್ತಾನೆ. ಪಂದ್ಯದ ಪರಿಸ್ಥಿತಿಗನುಗುಣವಾಗಿ ತಂಡದ ಒತ್ತಡವನ್ನು ಬ್ಯಾಟಿಂಗ್ ಮೂಲಕ ನಿಭಾಯಿಸುತ್ತಾನೆ. ಇದು ತಂಡಕ್ಕೆ ವರದಾನವಾಗಿದೆ. ಸೂರ್ಯಕುಮಾರ್ ತನ್ನದೇ ಶೈಲಿಯಲ್ಲಿ ಆಡಲು ಇಷ್ಟಪಡುತ್ತಾನೆ. ಅದು 10 ರನ್‌ಗೆ 2 ವಿಕೆಟ್ ಬಿದ್ದಿರಬಹುದು ಅಥವಾ 100ಕ್ಕೆ 2 ಆಗಿರಬಹುದು".

ಸೂರ್ಯಕುಮಾರ್ ಆಟದಲ್ಲಿ ಪ್ರಬುದ್ಧರಾಗಿದ್ದಾರೆ

ಸೂರ್ಯಕುಮಾರ್ ಆಟದಲ್ಲಿ ಪ್ರಬುದ್ಧರಾಗಿದ್ದಾರೆ

"ಆದರೆ ಕಳೆದ ವಿಶ್ವಕಪ್‌ನಿಂದ ಅವರು ಏನು ಮಾಡಿದ್ದಾರೆಂದು ನೋಡಿದರೆ, ಅವರು ಆಟದಲ್ಲಿ ಪ್ರಬುದ್ಧರಾಗಿದ್ದಾರೆ. ಒತ್ತಡದ ಸನ್ನಿವೇಶದಲ್ಲಿ ತಂಡವನ್ನು ಹೇಗೆ ಮೇಲೆತ್ತಬೇಕು ಎಂಬ ಪ್ರಬುದ್ಧತೆಯನ್ನು ತೋರಿಸಿದ್ದಾರೆ. ಆತ ಬಹಳಷ್ಟು ಹುಡುಗರ ಒತ್ತಡವನ್ನು ತೆಗೆದುಕೊಂಡಿದ್ದಾನೆ ಮತ್ತು ಅವನ ಜೊತೆ ಬ್ಯಾಟ್ ಮಾಡಿದಾಗ ಅದು ಗೊತ್ತಾಗುತ್ತದೆ. ನಾವು ಅವರ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ," ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಿಳಿಸಿದರು.

ಮಂಗಳವಾರ ನೆಟ್ಸ್ ಅಭ್ಯಾಸದ ವೇಳೆ ರೋಹಿತ್ ಶರ್ಮಾ ಅವರ ಮುಂಗೈಗೆ ಪೆಟ್ಟು ಬಿದ್ದಿತ್ತು. ಅದರ ಬಗ್ಗೆ ಮಾತನಾಡುತ್ತಾ, "ನನಗೆ ನಿನ್ನೆ ಬಾಲ್ ತಾಗಿದೆ, ಆದರೆ ಇದೀಗ ಚೇತರಿಕೆಯಾಗಿದೆ ಎಂದು ತೋರುತ್ತದೆ, ಸಣ್ಣದಾದ ಏಟು ಕಂಡುಬಂದಿದೆ, ಆದರೆ ಈಗ ಅದು ಸಂಪೂರ್ಣವಾಗಿ ಗುಣಮುಖವಾಗಿದೆ," ಎಂದರು.

ಭಾರತವು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು

ಭಾರತವು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತ್ತು

ಭಾರತ ಕೊನೆಯ ಬಾರಿಗೆ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿತು ಮತ್ತು ಭಾರತ ತಂಡವು ಕೊನೆಯದಾಗಿ ಐಸಿಸಿ ಟೂರ್ನಿಯನ್ನು ಅನ್ನು ಗೆದ್ದು ಒಂಬತ್ತು ವರ್ಷಗಳಾಗಿವೆ. ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತವು 2013ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು ಮತ್ತು ಅಂದಿನಿಂದ ಐಸಿಸಿ ಪ್ರಶಸ್ತಿಯು ಪ್ರತಿ ಬಾರಿಯೂ ಟೀಂ ಇಂಡಿಯಾಗೆ ಗಗನಕುಸುಮವಾಗಿದೆ. ಆದರೆ ಈ ಬಾರಿ ಸೆಮಿಫೈನಲ್ ಹಂತ ತಲುಪಿದ್ದು, ಮತ್ತೊಂದು ವಿಶ್ವಕಪ್ ಗೆಲ್ಲುವ ಸನಿಹದಲ್ಲಿದೆ.

Story first published: Wednesday, November 9, 2022, 11:05 [IST]
Other articles published on Nov 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X