ಟಿ20 ವಿಶ್ವಕಪ್ 2022: ಇದೇ ನೋಡಿ ಸೆಮಿಫೈನಲ್ ಹಂತಕ್ಕೇರುವ ನಾಲ್ಕು ಸಂಭಾವ್ಯ ತಂಡಗಳು!

ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಆಸ್ಟ್ರೇಲಿಯಾದ ಏಳು ವಿಭಿನ್ನ ತಾಣಗಳಲ್ಲಿ ಈ ವಿಶ್ವಕಪ್ ಟೂರ್ನಿ ಆಯೋಜನೆಯಾಗಲಿದೆ. ಒಂದೇ ವರ್ಷದ ಅಂತರದಲ್ಲಿ ನಡೆಯುತ್ತಿರುವ ಎರಡನೇ ಟಿ20 ವಿಶ್ವಕಪ್ ಇದಾಗಿದ್ದು ಯುಎಇನಲ್ಲಿ ಕಳೆದ ವರ್ಷ ನಡೆದಿದ್ದ ಚುಟಕು ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.

ಈ ಟೂರ್ನಿಯಲ್ಲಿ ಮೊದಲಿಗೆ ಅರ್ಹತಾ ಸುತ್ತು ನಡೆಯಲಿದ್ದು ಇದರಲ್ಲಿ 8 ತಂಡಗಳು ಭಾಗವಹಿಸಿ 4 ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆಯನ್ನು ಪಡೆದುಕೊಳ್ಳಲಿದೆ. ಸೂಪರ್ 12 ಹಂತದಲ್ಲಿ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಅಫ್ಘಾನಿಸ್ತಾನ ತಂಡಗಳು ಮೊದಲ ಗ್ರೂಪ್‌ನಲ್ಲಿದ್ದರೆ ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳು ಎರಡನೇ ಗುಂಪಿನಲ್ಲಿದೆ. ಇನ್ನು ಈ ಎರಡು ಗುಂಪುಗಳಿಗೂ ತಲಾ ಎರಡು ತಂಡಗಳು ಅರ್ಹತಾ ಸುದ್ದಿನಲ್ಲಿ ಗೆದ್ದು ಸೇರಿಕೊಳ್ಳಲಿದೆ.

ವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹವಿದೇಶಿ ಕ್ರಿಕೆಟ್ ಲೀಗ್‌ಗಳಲ್ಲಿ ಆಡಲು ಭಾರತೀಯ ಆಟಗಾರರಿಗೆ ಅನುಮತಿ ನೀಡಿ; ಮಾಜಿ ಕ್ರಿಕೆಟಿಗ ಆಗ್ರಹ

ಸೂಪರ್ 12 ಹಂತದಲ್ಲಿ ಎರಡು ಗುಂಪುಗಳ ತಲಾ ಎರಡು ತಂಡಗಳು ಸೆಮಿಫೈನಲ್ ಹಂತಕ್ಕೇರಲಿದೆ. ಅಲ್ಲಿ ಗೆದ್ದ ತಂಡಗಳು ನವೆಂಬರ್ 13ರಂದು ಎಂಸಿಜಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ. ಹಾಗಾದರೆ ಈ ಟೂರ್ನಿಯಲ್ಲಿ ಸೆಮಿಫೈನಲ್ ಹಂತಕ್ಕೇರಲಿರುವ ನಾಲ್ಕು ಸಂಭಾವ್ಯ ತಂಡಗಳು ಯಾವುದು? ಮುಂದೆ ಓದಿ..

ಆಸ್ಟ್ರೇಲಿಯಾ(ಗ್ರೂಫ್ 1)

ಆಸ್ಟ್ರೇಲಿಯಾ(ಗ್ರೂಫ್ 1)

ಹಾಲಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೇರುವ ಸಾಧ್ಯವಿರುವ ಅಗ್ರ ತಂಡಗಳಲ್ಲಿ ಒಂದಾಗಿದೆ. ತವರಿನಲ್ಲಿಯೇ ಈ ವಿಶ್ವಕಪ್ ನಡೆಯುತ್ತಿರುವ ಕಾರಣ ಆಸ್ಟ್ರೇಲಿಯಾ ತಂಡಕ್ಕೆ ಚುಟಕು ವಿಶ್ವಕಪ್ ಟೂರ್ನಿ ಆಯೋಜಿಸಲು ಉತ್ತಮ ಅವಕಾಶವಿದೆ. ಕಳೆದ ವರ್ಷದ ವಿಶ್ವಕಪ್‌ನ ಸಂದರ್ಭದಲ್ಲಿ ಎಲ್ಲಾ ಆಟಗಾರರು ಕೂಡ ಅದ್ಭುತ ಫಾರ್ಮ್‌ಗೆ ಮರಳಿದ್ದರು. ಈ ಮೂಲಕ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಯಶಸ್ವಿಯಾಗಿತ್ತು. ಈಗಲು ಕೂಡ ಆಸ್ಟ್ರೇಲಿಯಾ ಬಲಿಷ್ಠ ತಂಡವಾಗಿದ್ದು ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗ ಸಂಯೋಜಿತವಾಗಿ ಕಂಡುಬರುತ್ತಿದೆ.

ಇಂಗ್ಲೆಂಡ್ (ಗ್ರೂಫ್ 1)

ಇಂಗ್ಲೆಂಡ್ (ಗ್ರೂಫ್ 1)

ಇಂಗ್ಲೆಂಡ್ ತಂಡ ತವರಿನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಚುಟುಕು ಸರಣಿಯಲ್ಲಿ ಸೋಲು ಅನುಭವಿಸಿದ ಬಳಿಕ ಕಳೆಗುಂದಿಂತೆ ಕಂಡು ಬರುತ್ತಿದೆ. ಮಾರ್ಗನ್‌ರಿಂದ ಜೊಸ್ ಬಟ್ಲರ್ ನಾಯಕತ್ವ ವಹಿಸಿಕೊಂಡಿದ್ದು ಈ ಬದಲಾವಣೆ ಸಂದರ್ಭದಲ್ಲಿ ಇಂಥಾ ಹಿನ್ನಡೆಗಳು ಸಾಮಾನ್ಯ. ಹಾಗಿದ್ದರೂ ಇಂಗ್ಲೆಂಡ್ ತಂಡ ಕಳೆದ ಬಾರಿಯಂತೆ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತಕ್ಕೇರುವ ನೆಚ್ಚಿನ ತಂಡವಾಗಿದೆ. ಇತ್ತೀಚಿನ ಸರಣಿ ಸೋಲುಗಳಲ್ಲಿ ಕೆಲ ಪ್ರಮುಖ ಆಟಗಾರರು ಗಾಯಕ್ಕೆ ತುತ್ತಾಗಿರುವುದು ಕಾರಣವೂ ಆಗಿತ್ತು. ಆದರೆ ಒಮ್ಮೆ ಇಂಗ್ಲೆಂಡ್‌ನ ಆಟಗಾರರಾದ ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್ ಸಂಪೂರ್ಣವಾಗಿ ಫಿಟ್ ಆಗಿ ಜೇಸನ್ ರಾಯ್, ಬೆನ್ ಸ್ಟೋಕ್ಸ್ ರೀತಿಯ ಆಟಗಾರರು ನೈಜ ಫಾರ್ಮ್‌ಗೆ ಮರಳಿದರೆ ಈ ತಂಡ ಅತ್ಯಂತ ಬಲಿಷ್ಠ ಎನಿಸಲಿದೆ.

ಭಾರತ (ಗ್ರೂಫ್ 2)

ಭಾರತ (ಗ್ರೂಫ್ 2)

ಕಳೆದ ವಿಶ್ವಕೊ್‌ನ ಗ್ರೂಒ್ ಹಂತದಿಂದಲೇ ಭಾರತ ಹೊರಬಿದ್ದ ಬಳಿಕ ತಂಡದ ನಾಯಕತ್ವ ಹಾಗೂ ಕೋಚ್ ಬದಲಾದರು. ಈ ಬದಲಾವಣೆಯೊಂದಿಗೆ ಟೀಮ್ ಇಂಡಿಯಾ ಸತತವಾಗಿ ಯಶಸ್ಸು ಸಾಧಿಸುತ್ತಾ ಸಾಗಿದೆ. ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮ್ಯಾನೇಜ್‌ಮೆಂಟ್ ಕೆಳಗೆ ಭಾರತ ಅದ್ಭುತವಾಗಿ ಪ್ರದರ್ಶನ ನೀಡುತ್ತಿದೆ. ಹಂಗಾಮಿ ನಾಯಕರಾಗಿ ಪಂತ್ ಹಾಗೂ ಪಾಂಡ್ಯ ಕೂಡ ಸಿಕ್ಕ ಅವಕಾಶದಲ್ಲಿ ಮಿಂಚಿದ್ದಾರೆ. ಕಳೆದ ವಿಶ್ವಕಪ್‌ನ ಬಳಿಕ ಭಾರತ ತಂಡ 6 ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಗೆಲುವು ಸಾಧಿಸಿದ್ದು ಇದರಲ್ಲಿ ತವರಿನಿಂದ ಆಚೆ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವು ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಡ್ರಾ ಕೂಡ ಇದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಮತ್ತಷ್ಟು ಆಕ್ರಮಣಕಾರಿ ಪ್ರದರ್ಶನವನ್ನು ನೀಡುತ್ತಿದೆ. ಇನ್ನು ಬಹುತೇಕ ಆಟಗಾರರು ಫಾರ್ಮ್‌ನಲ್ಲಿದ್ದು ಮಹತ್ವದ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

Dinesh Karthik ಬಗ್ಗೆ Jadeja ಹೀಗೆ ಹೇಳಿದ್ದೇಕೆ | *Cricket | OneIndia Kannada
ದಕ್ಷಿಣ ಆಫ್ರಿಕಾ (ಗ್ರೂಪ್ 2 )

ದಕ್ಷಿಣ ಆಫ್ರಿಕಾ (ಗ್ರೂಪ್ 2 )

ಗ್ರೂಪ್ 2ರಲ್ಲಿ ಸೆಮಿಫೈನಲ್ ಹಂತಕ್ಕೇರುವ ಅವಕಾಶ ಹೆಚ್ಚಿರುವ ತಂಡ ಎಂದರೆ ದಕ್ಷಿಣ ಆಪ್ರಿಕಾ. ಕಳೆದ ವರ್ಷ ನೆಟ್‌ರನ್‌ರೇಟ್ ಆಧಾದಲ್ಲಿ ದಕ್ಷಿಣ ಆಪ್ರಿಕಾ ಸೆಮಿಫಯನಲ್‌ಗೇರುವ ಅವಕಾಶದಿಂದ ವಂಚಿತವಾಗಿತ್ತು. ಆದರೆ ಈ ಬಾರಿ ಪಾಕಿಸ್ತಾನ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೇರುವ ಸಾಧ್ಯತೆಯಿದೆ. ಐಸಿಸಿ ಶ್ರೇಯಾಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ದಕ್ಷಿಣ ಆಪ್ರಿಕಾ ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದೆ. ಹೀಗಾಗಿ ಸೆಮಿ ಫೈನಲ್ ಹಂತಕ್ಕೇರುವ ಮತ್ತೊಂದು ಪ್ರಮುಖ ಸಂಭಾವ್ಯ ತಂಡವಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, August 11, 2022, 14:49 [IST]
Other articles published on Aug 11, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X