ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ತಂಡವೇ ವಿಶ್ವಕಪ್ ಗೆಲ್ಲಲಿದೆ: ಎಬಿ ಡಿವಿಲಿಯರ್ಸ್ ಭವಿಷ್ಯಕ್ಕೆ ಟೀಮ್ ಇಂಡಿಯಾ ಅಭಿಮಾನಿಗಳು ಹರ್ಷ!

T20 World cup: AB de Villiers big prediction, said India will win the Final match and lift the trophy

ಟಿ20 ವಿಶ್ವಕಪ್‌ನಲ್ಲಿ ಯಾವ ತಂಡ ಚಾಂಪಿಯನ್ ಆಗಲಿದೆ ಎಂಬುದು ಘೋಷಣೆ ಯಾಗಲು ಇನ್ನು ಕೇವಲ ಮೂರು ಪಂದ್ಯಗಳು ಮಾತ್ರವೇ ಬಾಕಿಯಿದೆ. ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದು ಫೈನಲ್ ಹಂತಕ್ಕೆ ಪ್ರವೇಶ ಪಡೆಯಲು ಹಾತೊರೆಯುತ್ತಿದೆ. ಈ ಪಂದ್ಯಗಳ ಕುರಿತಾಗಿ ಸಾಕಷ್ಟು ಚರ್ಚೆಗಳು ವಿಶ್ಲೇಷಣೆಗಳು ನಡೆಯುತ್ತಿದ್ದು ಕ್ರಿಕೆಟ್ ಪಂಡಿತರು ಮತ್ತು ವಿಶ್ಲೇಷಕರು ನಾನಾ ರೀತಿಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆರ್‌ಸಿಬಿ ತಂಡದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ ಯಾವ ಎರಡು ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿದೆ ಹಾಗೂ ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಎಬಿಡಿ ನುಡಿದ ಭವಿಷ್ಯಕ್ಕೆ ಭಾತೀಯ ಕ್ರಿಕೆಟ್ ಅಭಿಮಾನಿಗಳು ಹರ್ಷಗೊಳ್ಳುವುದು ಖಚಿತ.

IND vs ENG: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ; ರೋಹಿತ್ ಶರ್ಮಾಗೆ ಗಾಯIND vs ENG: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ; ರೋಹಿತ್ ಶರ್ಮಾಗೆ ಗಾಯ

ಫೈನಲ್ ಹಂತಕ್ಕೇರುವ ಎರಡು ತಂಡಗಳನ್ನು ಹೆಸರಿಸಿದ ಎಬಿಡಿ

ಫೈನಲ್ ಹಂತಕ್ಕೇರುವ ಎರಡು ತಂಡಗಳನ್ನು ಹೆಸರಿಸಿದ ಎಬಿಡಿ

ಸದ್ಯ ಸೆಮಿಫೈನಲ್‌ನಲ್ಲಿ ನಾಲ್ಕು ತಂಡಗಳು ಸಣೆಸಾಟಕ್ಕೆ ಸಜ್ಜಾಗಿದೆ. ನ್ಯೂಜಿಲೆಂಡ್ ಪಾಕಿಸ್ತಾನ ಹಾಗೂ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈ ಘಟ್ಟಕ್ಕೆ ಪ್ರವೇಶಿಸಿ ಕಾದಾಟ ನಡೆಸಲಿದೆ. ಈ ಪೈಕಿ ಗೆಲ್ಲುವ ಎರಡು ತಮಡಗಳು ಮಾತ್ರವೇ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಇದರಲ್ಲಿ ಒಂದು ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಮತ್ತೊಂದು ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿದ್ದು ಈ ಎರಡು ತಂಡಗಳು ಫೈನಲ್‌ಗೆ ಪ್ರವೇಶ ಪಡೆಯಲಿದೆ ಎಂದು ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಭವಿಷ್ಯ ನುಡಿದಿದ್ದಾರೆ.

ಫೈನಲ್‌ನಲ್ಲಿ ಭಾರತ ಗೆಲ್ಲಲಿದೆ ಎಂದ ಮಿಸ್ಟರ್ 360

ಫೈನಲ್‌ನಲ್ಲಿ ಭಾರತ ಗೆಲ್ಲಲಿದೆ ಎಂದ ಮಿಸ್ಟರ್ 360

ಇನ್ನು ಈ ಸಂದರ್ಭದಲ್ಲಿ ಫೈನಲ್‌ನಲ್ಲಿ ಗೆದ್ದು ಯಾವ ತಂಡ ಚಾಂಪಿಯನ್ ಪಟ್ಟಕ್ಕೇರಲಿದೆ ಎಂಬ ಬಗ್ಗೆಯೂ ಎಬಿಡಿ ಮಾತನಾಡಿದ್ದಾರೆ. ಎನ್‌ಐ ಜೊತೆಗೆ ಮಾತನಾಡಿರುವ ಎಬಿ ಡಿವಿಲಿಯರ್ಸ್ "ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಫೈನಲ್‌ನಲ್ಲಿ ಆಡಲಿದೆ. ನನ್ನ ಪ್ರಕಾರ ಭಾರತ ಗೆಲುವು ಸಾಧಿಸಲಿದೆ" ಎಂದಿದ್ದಾರೆ ಎಬಿಡಿ ವಿಲಿಯರ್ಸ್. ಎಬಿಡಿ ವಿಲಿಯರ್ಸ್ ಅವರ ಈ ಭವಿಷ್ಯದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಹಜವಾಗಿಯೇ ಖುಷಿಗೊಂಡಿದ್ದು ಈ ಮಾತು ನಿಜವಾಗಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಭಾರತದ ಕಳಪೆ ಹಿನ್ನೆಲೆ

ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೂರ್ನಿಯಲ್ಲಿ ಭಾರತದ ಕಳಪೆ ಹಿನ್ನೆಲೆ

ಇನ್ನು ಐಸಿಸಿ ಟೂರ್ನಮೆಂಟ್‌ಗಳಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಇತ್ತೀಚಿನ ವರ್ಷಗಳಲ್ಲಿ ಭಾರತದ ಸಾಧನೆ ಅತ್ಯಂತ ಕಳಪೆಯಾಗಿದೆ ಎಂಬುದು ಗಮನಾರ್ಹ ಅಂಶ. ಇತ್ತೀಚೆಗೆ ಕಳೆದ ವರ್ಷ ನ್ಯೂಜಿಲೆಂಡ್ ತಂಡದ ವಿರುದ್ಧ ಗೆಲ್ಲಲೇಬೇಕಿದ್ದ ಪಂದ್ಯವನ್ನು ಭಾರತ ಸೋತು ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಅದಕ್ಕೂ ಮುನ್ನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನ್ಯೂಜಿಲೆಂಡ್‌ಗೆ ಶರಣಾಗಿದ್ದ ಭಾರತ 2019ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿತ್ತು.

ಭಾರತದ ಆಟಗಾರರ ಫಾರ್ಮ್ ಬಗ್ಗೆ ಎಬಿಡಿ ಮಾತು

ಭಾರತದ ಆಟಗಾರರ ಫಾರ್ಮ್ ಬಗ್ಗೆ ಎಬಿಡಿ ಮಾತು

ಇನ್ನು ಇದೇ ಸಂದರ್ಭದಲ್ಲಿ ಎಬಿ ಡಿವಿಲಿಯರ್ಸ್ ಭಾರತದ ಆಟಗಾರರ ಪ್ರದರ್ಶನದ ಬಗ್ಗೆ ಹಾಗೂ ಫಾರ್ಮ್ ಬಗ್ಗೆ ಮಾತನಾಡಿದ್ದಾರೆ. "ಭಾರತದ ಪ್ರತಿಯೊಬ್ಬರು ಕೂಡ ಉತ್ತಮವಾಗಿ ಆಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಫಾರ್ಮ್ ಕೂಡ ಅದ್ಭುತವಾಗಿದೆ. ರೋಹಿತ್ ಅವರಿಂದ ಅತ್ಯುತ್ತಮ ಆಟ ಈವರೆಗೆ ಬಂದಿಲ್ಲವಾದರೂ ತಂಡಕ್ಕೆ ಅಗತ್ಯವಾದಾಗ ಅವರು ಮಿಂಚುತ್ತಾರೆ. ಆತನೋರ್ವ ಅದ್ಭುತವಾದ ಆಟಗಾರ. ಭಾರತದ ಬ್ಯಾಟಿಂಗ್ ಲೈನ್‌ಅಪ್ ಹಾಗೂ ಸಂಪೂರ್ಣ ತಂಡ ಪ್ರತಿಭಾವಂತರಿಂದ ತುಂಬಿದೆ. ಇಂಗ್ಲೆಂಡಗ್ ವಿರುದ್ಧ ಅವರಿಂದ ಅತ್ಯುತ್ತಮ ಪ್ರದರ್ಶನ ಬರುವುದನ್ನು ನಾನು ಎದುರು ನೋಡುತ್ತಿದ್ದೇನೆ. ಅವರಿಗೆ ಅದು ದೊಡ್ಡ ಸವಾಲಾಗಿದ್ದು ಆ ಪಂದ್ಯವನ್ನು ಗೆದ್ದರೆ ಫೈನಲ್‌ನಲ್ಲಿ ಗೆಲುವು ಸಾಧಿಸಲಿದ್ದಾರೆ" ಎಂದಿದ್ದಾರೆ ಎಬಿ ಡಿವಿಲಿಯರ್ಸ್.

Story first published: Tuesday, November 8, 2022, 21:29 [IST]
Other articles published on Nov 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X