ಟಿ20 ವಿಶ್ವಕಪ್‌: ಬಾಂಗ್ಲಾದೇಶಕ್ಕೆ ಆಘಾತ; ಟೂರ್ನಿಯಿಂದಲೇ ಹೊರಬಿದ್ದ ಪ್ರಮುಖ ಆಟಗಾರ

ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಕೂಡ ಸೋತಿರುವ ಬಾಂಗ್ಲಾದೇಶ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೇರುವ ಸ್ಪರ್ಧೆಯಿಂದ ಹೊರಬಿದ್ದಿದೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶ ತಂಡಕ್ಕೆ ಮತ್ತೊಂದು ಆಘಾತವುಂಟಾಗಿದೆ. ತಂಡದ ಅನುಭವಿ ಆಟಗಾರ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೋಗಾಗು ಅಂತಿಮ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಲಿದೆ.

ಬಾಂಗ್ಲಾದೇಶ ತಂಡ ತನ್ನ ಮುಂದಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ತಂಡದ ಆಲ್‌ರೌಂಡರ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದು ಮುಂದಿನ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಟಿ20 ವಿಶ್ವಕಪ್: ಫೈನಲ್‌ನಲ್ಲಿ ಪಾಕಿಸ್ತಾನದ ಜೊತೆ ಕಾದಾಟ ನಡೆಸಲಿರುವ ತಂಡವನ್ನು ಹೆಸರಿಸಿದ ಶೇನ್ ವಾರ್ನ್!ಟಿ20 ವಿಶ್ವಕಪ್: ಫೈನಲ್‌ನಲ್ಲಿ ಪಾಕಿಸ್ತಾನದ ಜೊತೆ ಕಾದಾಟ ನಡೆಸಲಿರುವ ತಂಡವನ್ನು ಹೆಸರಿಸಿದ ಶೇನ್ ವಾರ್ನ್!

ಎಎನ್‌ಐ ಮೂಲಗಳ ಹೇಳಿಕೆಯನ್ನು ಆಧರಿಸಿ ಈ ಬಗ್ಗೆ ವರದಿ ಮಾಡಿದೆ. "ಶಕೀಬ್ ಅಲ್ ಹಸನ್ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದಾರೆ. ಸ್ಕ್ಯಾನ್ ವರದಿ ಬಂದ ಬಳಿಕ ಅವರ ಗಾಯದ ತೀವ್ರತೆ ಸ್ಪಷ್ಟವಾಗಲಿದೆ. ಆದರೆ ಅವರು ಈ ಟೂರ್ನಿಯಿಂದ ಹೊರ ಬಿದ್ದಿದ್ದಾರೆ" ಎಂದು ಮೂಲಗಳ ಹೇಳಿಕೆಯನ್ನು ಎಎನ್‌ಐ ಉಲ್ಲೇಖಿಸಿದೆ.

ಬಾಂಗ್ಲಾದೇಶ ತಂಡ ಈ ಬಾರಿಯ ಟೂರ್ನಿಯಲ್ಲಿ ಈಗಾಗಲೇ ಮೂರು ಪಂದ್ಯಗಳನ್ನು ಆಡಿದೆ. ಆದರೆ ಟೂರ್ನಿಯಲ್ಲಿ ಒಂದು ಗೆಲುವು ಕೂಡ ತಂಡಕ್ಕೆ ಸಾಧ್ಯವಾಗಿಲ್ಲ. ಇದೀಗ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಕೂಡ ತಂಡಕ್ಕೆ ಅಲಭ್ತವಾಗಿದ್ದು ಮುಂದಿನ ಪಂದ್ಯಗಳಲ್ಲಿ ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಪ್ರಮುಖ ಆಟಗಾರನನ್ನು ಹೊರಗಿಡುವ ಸೂಚನೆ ನೀಡಿದ ಕೊಹ್ಲಿ!ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಪ್ರಮುಖ ಆಟಗಾರನನ್ನು ಹೊರಗಿಡುವ ಸೂಚನೆ ನೀಡಿದ ಕೊಹ್ಲಿ!

ಶ್ರೀಲಂಕಾ ವಿರುದ್ಧ ಆಡಿದ್ದ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಅಂತರದಿಂದ ಸೋಲು ಕಂಡಿದ್ದ ಬಾಂಗ್ಲಾದೇಶ ನಂತರದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿತ್ತು. ಈ ಪಂದ್ಯವನ್ನು 8 ವಿಕೆಟ್‌ಗಳ ಅಂತರದಿಂದ ಬಾಂಗ್ಲಾದೇಶ ಸೋತಿತ್ತು. ನಂತರ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆಡಿದ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶ 3 ರನ್‌ಗಳ ಅಂತರದಿಂದ ರೋಚಕವಾಗಿ ಸೋಲು ಕಂಡಿತು. ಹೀಗಾಗಿ ಸೂಪರ್ 12 ಹಂತದಲ್ಲಿ ಸತತ ಮೂರು ಸೋಲು ಕಂಡಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಇನ್ನು ಕೂಡ ಬಾಂಗ್ಲಾ ಖಾತೆ ತೆರೆದಿಲ್ಲ.

ಬಾಂಗ್ಲಾದೇಶ ಈ ಬಾರಿ ಅರ್ಹತಾ ಸುತ್ತಿನಲ್ಲಿ ಆಡಿದ ನಂತರ ವಿಶ್ವಕಪ್‌ನ ಪ್ರಧಾನ ಸುತ್ತು ಸೂಪರ್ 12ಗೆ ಅರ್ಹತೆ ಸಂಪಾದಿಸಿತ್ತು. ಈ ಹಂತದಲ್ಲಿ ಬಾಂಗ್ಲಾದೇಶ ಆಡಿದ 3 ಪಂದ್ಯಗಳ ಪೈಕಿ 2 ಗೆಲುವನ್ನು ಸಾಧಿಸಿ ಅರ್ಹತೆ ಸಂಪಾದಿಸಿತ್ತು. ಗ್ರೂಪ್ 'ಎ'ಯಲ್ಲಿ 2ನೇ ತಂಡವಾಗಿ ಅರ್ಹತೆ ಪಡೆದ ಬಾಂಗ್ಲಾದೇಶ ತಂಡ ಸೂಪರ್ 12 ಹಂತದಲ್ಲಿ ಗ್ರೂಪ್ 1ರಲ್ಲಿ ಸ್ಥಾನ ಪಡೆದುಕೊಂಡಿದೆ.

ಗ್ರೂಪ್ 1 ಕಠಿಣ ತಂಡಗಳನ್ನು ಹೊಂದಿರುವ ಗುಂಪಾಗಿದ್ದು ಬಾಂಗ್ಲಾದೇಶಕ್ಕೆ ಎಲ್ಲಾ ತಂಡಗಳು ಕೂಡ ಕಠಿಣ ಸವಾಲನ್ನು ಒಡ್ಡಲಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ತಮಡಗಳು ಈ ಗುಂಪಿನಲ್ಲಿರುವ ಇತರ ತಂಡಗಳಾಗಿದೆ. ಈ ಗುಂಪಿನಲ್ಲಿ ಸದ್ಯ ಇಂಗ್ಲೆಂಡ್ ಆಡಿದ 3 ಪಂದ್ಯಗಳ ಪೈಕಿ 3ರಲ್ಲಿಯೂ ಗೆಲುವು ಸಾಧಿಸಿದ್ದು ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಎರಡು ಹಾಗೂ ಮೂರನೇ ಸ್ಥಾನದಲ್ಲಿ ಮೂರು ಪಂದ್ಯಗಳಲ್ಲಿ 2 ಗೆಲುವು ಸಾಧಿಸಿರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳಿದೆ.

ಬಾಂಗ್ಲಾದೇಶ ಸ್ಕ್ವಾಡ್ ಮಹ್ಮದುಲ್ಲಾ (ಕ್ಯಾಪ್ಟನ್), ನೈಮ್ ಶೇಖ್, ಸೌಮ್ಯ ಸರ್ಕಾರ್, ಲಿಟನ್ ಕುಮಾರ್ ದಾಸ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ನೂರುಲ್ ಹಸನ್ ಸೋಹನ್, ಶಾಕ್ ಮಹಿದಿ ಹಸನ್, ನಸುಮ್ ಅಹ್ಮದ್, ಮುಸ್ತಫಿಜುರ್ ರಹಮಾನ್, ಶೋರಿಫುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಶೈಫ್ ಉದ್ದೀನ್, ಶಾಮ್ ಉದ್ದಿಂ ಹೊಸೇನ್, ರುಬೆಲ್ ಹುಸೇನ್, ಅಮೀನುಲ್ ಇಸ್ಲಾಂ ಬಿಪ್ಲಬ್

For Quick Alerts
ALLOW NOTIFICATIONS
For Daily Alerts
Story first published: Sunday, October 31, 2021, 21:53 [IST]
Other articles published on Oct 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X