ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ವಿರುದ್ಧ ಪ್ರತಿ ಬಾರಿಯೂ ಹೀಗೆಯೇ ಆಗುತ್ತಿದೆ!: ಸೋತ ಬಳಿಕ ಅಳಲು ತೋಡಿಕೊಂಡ ಬಾಂಗ್ಲಾ ನಾಯಕ

T20 world cup: Bangladesh skipper Shakib Al Hasan disappointed after defeate against India

ಸೂಪರ್ 12 ಹಂತದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಅದ್ಭುತ ಹೋರಾಟ ಪ್ರದರ್ಶಿಸಿದ ಹೊರತಾಗಿಯೂ ಭಾರತ ತಂಡಕ್ಕೆ 5 ರನ್‌ಗಳ ಅಂತರದಿಂದ ಶರಣಾಗಿದೆ. ಭಾರತ ನೀಡಿ ಗುರಿಯನ್ನು ಆರಂಭದಲ್ಲಿ ಭರ್ಜರಿಯಾಗಿ ಬೆನ್ನಟ್ಟಲು ಆರಂಭಿಸಿದ ಬಾಂಗ್ಲಾದೇಶ ನಂತರ ಎಡವಿತು. ಹಾಗಿದ್ದರೂ ಗೆಲುವಿನ ಸನಿಹದವರೆಗೂ ಆಗಮಿಸಿದ್ದ ಶಕೀಬ್ ಅಲ್ ಹಸನ್ ಪಡೆ 5 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಭಾರತ ತಂಡದ ಸೆಮಿಫೈನಲ್ ಕನಸು ಮತ್ತಷ್ಟು ಹತ್ತಿರವಾಗಿದೆ.

ಇನ್ನು ಈ ಪಂದ್ಯದಲ್ಲಿ ರೋಚಕ ಸೆಣೆಸಾಟದ ಹೊರತಾಗಿಯೂ ಅಂತಿಮ ಹಂತದಲ್ಲಿ ಸೋಲು ಅನುಭವಿಸಿದ್ದಕ್ಕೆ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಭಾರೀ ನೋವು ವ್ಯಕ್ತಪಡಿಸಿದ್ದಾರೆ. ಗೆಲುವಿನ ಸನಿಹಕ್ಕೆ ಬಂದರೂ ಗೆಲುವು ಸಾಧ್ಯವಾಗದ ಬಗ್ಗೆ ಶಕೀಬ್ ಅಲ್ ಹಸನ್ ಬೇಸರದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

ಬಾಬರ್ ಅಜಂ ಬಗ್ಗೆ ಗಂಭೀರ ಆಪಾದನೆ ಮಾಡಿದ ಗೌತಮ್ ಗಂಭೀರ್: ಟೀಕೆಗೆ ವಾಸಿಂ ಅಕ್ರಮ್ ಪ್ರತಿಕ್ರಿಯೆಬಾಬರ್ ಅಜಂ ಬಗ್ಗೆ ಗಂಭೀರ ಆಪಾದನೆ ಮಾಡಿದ ಗೌತಮ್ ಗಂಭೀರ್: ಟೀಕೆಗೆ ವಾಸಿಂ ಅಕ್ರಮ್ ಪ್ರತಿಕ್ರಿಯೆ

ಭಾರತದ ವಿರುದ್ಧ ಹೀಗೆಯೇ ಆಗುತ್ತಿದೆ

ಭಾರತದ ವಿರುದ್ಧ ಹೀಗೆಯೇ ಆಗುತ್ತಿದೆ

ಶಕೀಬ್ ಅಲ್ ಹಸನ್ ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. "ಹೌದು, ಪ್ರತಿ ಬಾರಿ ಭಾರತದ ವಿರುದ್ಧ ಆಡಿದಾಗಲೂ ಹೀಗೆಯೇ ಆಗುತ್ತಿದೆ. ನಾವು ಗೆಲುವಿನ ಸನಿಹಕ್ಕೆ ಬರುತ್ತೇವೆ. ಆದರೆ ಗೆಲುವಿನ ಗೆರೆ ದಾಟಲು ಸಾಧ್ಯವಾಗುತ್ತಿಲ್ಲ. ಇದು ಕ್ರಿಕೆಟ್‌ನ ಅತ್ಯುತ್ತಮ ಪಂದ್ಯವಾಗಿತ್ತು. ಅಭಿಮಾನಿಗಳು ಈ ಕಾದಾಟವನ್ನು ಸಾಕಷ್ಟು ಅನಂದಿಸಿದ್ದಾರೆ. ನಾವು ಬಯಸುವುದು ಕೂಡ ಅದನ್ನೇ. ಅಂತಿಮವಾಗಿ ಒಬ್ಬರು ಗೆಲ್ಲಬೇಕು, ಮತ್ತೊಬ್ಬರು ಸೋಲಬೇಕು" ಎಂದಿದ್ದಾರೆ ಶಕೀಬ್ ಅಲ್ ಹಸನ್.

ಬಾಂಗ್ಲಾ ವಿರುದ್ಧ ರೋಚಕ ಕದನ

ಬಾಂಗ್ಲಾ ವಿರುದ್ಧ ರೋಚಕ ಕದನ

ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು ಟಿ20 ಮಾದರಿಯಲ್ಲಿ ಅತ್ಯಂತ ಪೈಪೋಟಿಯ ಪ್ರದರ್ಶನ ನೀಡಿರುವುದು ಗಮನಾರ್ಹ ಅಂಶ. ಇದರಲ್ಲಿ ಒಂದು 2016ರ ವಿಶ್ವಕಪ್‌ನಲ್ಲಿ ಗ್ರೂಪ್ ಹಂತದಲ್ಲಿ ನಡೆದ ಮುಖಾಮುಖಿ ಈ ಪಂದ್ಯದಲ್ಲಿ ಭಾರತ ತಂಡ ಕೇವಲ 1 ರನ್‌ ಅಂತರದಿಂದ ಗೆದ್ದಿತ್ತು. ಇನ್ನೊಂದು ನಿದಾಹಸ್ ಟ್ರೋಫಿಯ ಫೈನಲ್ ಪಂದ್ಯ. ಈ ಪಂದ್ಯದಲ್ಲಿ ಭಾರತದ ಗೆಲುವಿಗೆ ಅಂತಿಮ ಎಸೆತದಲ್ಲಿ 5 ರನ್‌ಗಳ ಅಗತ್ಯವಿತ್ತು. ಆದ ಕ್ರೀಸ್‌ನಲ್ಲಿದ್ದ ಡಿಕೆ ಸಿಕ್ಸರ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು.

ಈ ಹಿಂದೆಯೂ ಗೆಲುವಿನ ಸನಿಹ ಎಡವಿದ್ದ ಬಾಂಗ್ಲಾ

ಈ ಹಿಂದೆಯೂ ಗೆಲುವಿನ ಸನಿಹ ಎಡವಿದ್ದ ಬಾಂಗ್ಲಾ

ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತು ಆರಂಭದಲ್ಲಿ ಬ್ಯಾಟಿಂಗ್ ನಡೆಸಿತು. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಅರ್ಧ ಶತಕ ಹಾಗೂ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ 30 ರನ್‌ಗಳ ಕೊಡುಗೆಯಿಂದಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 184 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ಅತ್ಯಂತ ಸ್ಪೋಟಕ ಆರಂಭ ದೊರೆಯಿತು. ಆರಂಭಿಕ ಆಟಗಾರ ಲಿಟನ್ ದಾಸ್ ಕೇವಲ 27 ಎಸೆತಗಳಲ್ಲಿ 60 ರನ್‌ ಬಾರಿಸಿ ತಂಡಕ್ಕೆ ಮೇಲುಗೈ ಒದಗಿಸಿದ್ದರು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾದ ಕಾರಣ ಪಂದ್ಯವನ್ನು 16 ಓವರ್‌ಗಳಿಗೆ ಇಳಿಸಿದ್ದು ಡಕ್ವರ್ತ್ ಲೂಯೀಸ್ ನಿಯಮದ ಅನ್ವಯ ಬಾಂಗ್ಲಾದೇಶಕ್ಕೆ 150 ರನ್‌ಗಳನ್ನು ಗಳಿಸುವ ಗುರಿ ನಿಗದಿಯಾಗಿತ್ತು. ಆದರೆ ಮಳೆ ನಿಂತು ಪಂದ್ಯ ಪುನಾರಂಭವಾದ ಬಳಿಕ ಭಾರತ ಪಂದ್ಯದಲ್ಲಿ ಹಿಡಿತ ಸಾಧಿಸಲು ಯಶಸ್ವಿಯಾಯಿತು. ಅಂತಿಮವಾಗಿ ಭಾರತ ತಂಡ 5 ರನ್‌ಗಳ ಅಂತರದಿಂದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇತ್ತಂಡಗಳ ಆಡುವ ಬಳಗ ಹೀಗಿದೆ

ಇತ್ತಂಡಗಳ ಆಡುವ ಬಳಗ ಹೀಗಿದೆ

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್
ಬೆಂಚ್: ರಿಷಬ್ ಪಂತ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್, ದೀಪಕ್ ಹೂಡಾ

ಬಾಂಗ್ಲಾದೇಶ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಾಕಿಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಯಾಸಿರ್ ಅಲಿ, ಮೊಸದ್ದೆಕ್ ಹೊಸೈನ್, ನೂರುಲ್ ಹಸನ್ (ವಿಕೆಟ್ ಕೀಪರ್), ಮುಸ್ತಾಫಿಜುರ್ ರೆಹಮಾನ್, ಹಸನ್ ಮಹ್ಮದ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ
ಬೆಂಚ್: ಮೆಹಿದಿ, ಎಹಮಿನ್‌ಬಾ ಹಸನ್, ಮಿಸ್ಸಾ ಮಿಸ್ , ಸೌಮ್ಯ ಸರ್ಕಾರ್

Story first published: Wednesday, November 2, 2022, 21:26 [IST]
Other articles published on Nov 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X