ನ್ಯೂಜಿಲೆಂಡ್ ವಿರುದ್ಧದ ಸೋಲಿನ ಬಳಿಕ ಕೊಹ್ಲಿ ಮತ್ತು ರವಿ ಶಾಸ್ತ್ರಿ ನಡೆಗೆ ಕಿಡಿಕಾರಿದ ಅಜರುದ್ದೀನ್!

ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್‌ನಲ್ಲಿ ಸತತ ಎರಡು ಸೋಲು ಅನುಭವಿಸಿದ ನಂತರ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಈ ಮಧ್ಯೆ ನ್ಯೂಜಿಲೆಂಡ್ ತಂಡದ ವಿರುದ್ಧ ಸೋಲು ಕಂಡ ಬಳಿಕ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಒಂದು ನಡೆಯ ಬಗ್ಗೆ ಮಾಜಿ ಕ್ರಿಕೆಟಿಗ ಅಜರುದ್ದೀನ್ ಕಿಡಿಕಾರಿದ್ದಾರೆ. ಜವಾಬ್ಧಾರಿಯುವ ಸ್ಥಾನದಲ್ಲಿರುವ ಈ ಇಬ್ಬರ ಈ ನಡೆ ಸರಿಯಾದುದಲ್ಲ ಎಂದು ಅಜರುದ್ದೀನ್ ಹೇಳಿಕೆ ನೀಡಿದ್ದಾರೆ.

ನ್ಯೂಜಿಲೆಂಡ್ ತಂಡದ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್‌ಗಳ ಅಂತರದ ಆಘಾತಕಾರಿ ಸೋಲು ಅನುಭವಿಸಿತು. ಬ್ಯಾಟಿಂಗ್‌ನಲ್ಲಿ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಪಡೆ ಕೇವಲ 110 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಗಿತ್ತು. ಇದನ್ನು ಕಿವೀಸ್ ಪಡೆ ನಿರಾಯಾಸವಾಗಿ ತಲುಪಿ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಮುಲಕ ಭಾರತದ ಸೆಮಿಫೈನಲ್ ಪ್ರವೇಶಿಸುವ ಕನಸು ದುರ್ಗಮವಾಗಿದೆ.

"ಆಟಗಾರರು ರೋಬೋಟ್‌ಗಳಲ್ಲ": ಟೀಮ್ ಇಂಡಿಯಾ ಆಟಗಾರರ ಬೆನ್ನಿಗೆ ನಿಂತ ಕೆವಿನ್ ಪೀಟರ್ಸನ್

ಈ ಸೋಲಿನ ನಂತರ ಮಾಧ್ಯಮಗೋಷ್ಠಿಯಲ್ಲಿ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಭಾಗವಹಿಸಿದ್ದರು. ಇದು ಭಾರತದ ಮಾಜಿ ನಾಯಕ ಅಜರುದ್ದೀನ್‌ಗೆ ಅಸಮಾಧಾನ ಉಂಟು ಮಾಡಿದೆ.

ನಾಯಕ ಅಥವಾ ಕೋಚ್ ಭಾಗವಹಿಸಬೇಕಿತ್ತು

ನಾಯಕ ಅಥವಾ ಕೋಚ್ ಭಾಗವಹಿಸಬೇಕಿತ್ತು

ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡ ನಂತರ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಮಾಧ್ಯಮಗಳ ಜೊತೆಗೆ ಮಾತನಾಡಿದ್ದರು. ಆದರೆ ಮಾಜಿ ಕ್ರಿಕೆಟಿಗ ಅಜರುದ್ದೀನ್ ಈ ಮಾಧ್ಯಮಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅಥವಾ ಕೋಚ್ ರವಿ ಶಾಸ್ತ್ರಿ ಭಾಗವಹಿಸಬೇಕಾಗುತ್ತು ಎಂಬ ಅಭಿಪ್ರಾಯಪಟ್ಟಿದ್ದಾರೆ. "ನನ್ನ ಅಭಿಪ್ರಾಯದ ಪ್ರಕಾರ ಈ ಮಾಧ್ಯಮಗೋಷ್ಠಿಗೆ ನಾಯಕ ವಿರಾಟ್ ಕೊಹ್ಲಿ ಅಥವಾ ಕೋಚ್ ರವಿ ಶಾಸ್ತ್ರಿ ಬರಬೇಕಾಗಿತ್ತು. ನಾಯಕ ವಿರಾಟ್ ಕೊಹ್ಲಿ ಈ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಲು ಇಷ್ಟಪಡದಿದ್ದರೆ ಅದು ಪರವಾಗಿಲ್ಲ. ಆದರೆ ಕೋಚ್ ರವಿ ಶಾಸ್ತ್ರಿಯವರು ಇದರಲ್ಲಿ ಭಾಗವಹಿಸಲೇಬೇಕಿತ್ತು" ಎಂದು ಮೊಹಮ್ಮದ್ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.

ಗೆಲುವಿನ ಸಮಯದಲ್ಲಿ ಮಾತ್ರ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸುವುದಲ್ಲ!

ಗೆಲುವಿನ ಸಮಯದಲ್ಲಿ ಮಾತ್ರ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸುವುದಲ್ಲ!

"ನೀವು ತಂಡ ಗೆಲುವು ಸಾಧಿಸಿದ ಸಂದರ್ಭದಲ್ಲಿ ಮಾತ್ರವೇ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸುವುದಲ್ಲ. ಸೋಲಿನ ನಂತರ ಅದಕ್ಕೂ ವಿವರಣೆಯನ್ನು ನೀಡಬೇಕು. ಜಸ್ಪ್ರಿತ್ ಬೂಮ್ರಾ ಅವರನ್ನು ಮಾಧ್ಯಮಗೋಷ್ಠಿಗೆ ಕಳುಹಿಸಿರುವುದು ಸೂಕ್ತವಲ್ಲ. ಇದಕ್ಕೆ ನಾಯಕ ಅಥವಾ ಕೋಚ್ ಭಾಗವಹಿಸಬೇಕು. ಅಥವಾ ಕೋಚಿಂಗ್ ವಿಭಾಗದ ಸಿಬ್ಬಂದಿಗಳು ಭಾಗವಹಿಸಬೇಕು" ಎಂದು ಮೊಹಮ್ಮದ್ ಅಜರುದ್ದೀನ್ ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ.

"ಮುಖಭಂಗ ಅನುಭವಿಸುವಂತದ್ದೇನೂ ಇಲ್ಲ"

ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ಮಾಜಿ ನಾಯಕ ಅಜರುದ್ದೀನ್ ಅವರಿಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ಸೋಲಿನ ನಂತರ ಪ್ರಶ್ನೆಗಳನ್ನು ಎದುರಿಸಲು ಬಯಸಿರಲಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಅಜರುದ್ದೀನ್, "ನೀವು ಒಂದು ಅಥವಾ ಎರಡು ಪಂದ್ಯವನ್ನು ಸೋತರೆ ಅದರಲ್ಲಿ ಮುಖಭಂಗ ಅನುಭವಿಸುವಂತದ್ದು ಏನೂ ಇಲ್ಲ. ಆದರೆ ನಾಯಕ ಅಥವಾ ಕೋಚ್ ಮುಂದೆ ಬಂದು ಯಾವ ಕಾರಣಕ್ಕಾಗಿ ತಂಡ ಸೋಲು ಕಂಡಿತು ಎಂಬುದನ್ನು ವಿವರಿಸಬೇಕು. ಯಾರಾದರೂ ಅದರ ಜವಾಬ್ಧಾರಿ ವಹಿಸಿಕೊಳ್ಳಬೇಕು. ಇದೆಲ್ಲದಕ್ಕೂ ಬೂಮ್ರಾ ಅವರಿಂದ ಉತ್ತರ ದೊರೆಯುತ್ತದೆ ಎಂದು ಹೇಗೆ ನಿರೀಕ್ಷಿಸುವುದಕ್ಕೆ ಸಾಧ್ಯವಿದೆ. ನೀವು ತಂಡ ಗೆದ್ದಾಗ ಪ್ರಶ್ನೆಗಳನ್ನು ಎದುರಿಸುತ್ತೀರಿ ಎಂದಾದರೆ ತಂಡ ಕಠಿಣ ಸ್ಥಿತಿಯಲ್ಲಿದ್ದಾಗಲೂ ಮುಂದೆ ಬರಬೇಕು" ಎಂದಿದ್ದಾರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್.

ಈ ಪವಾಡ ನಡೆದು ಟೀಮ್ ಇಂಡಿಯಾಗೆ ಸೆಮಿಫೈನಲ್ ಚಾನ್ಸ್ ಸಿಗುತ್ತಾ? | Oneindia Kannada

For Quick Alerts
ALLOW NOTIFICATIONS
For Daily Alerts
Story first published: Tuesday, November 2, 2021, 13:13 [IST]
Other articles published on Nov 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X