ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನೆದರ್ಲೆಂಡ್ಸ್: ಪಂದ್ಯಕ್ಕಿದೆಯಾ ಮಳೆಯ ಆತಂಕ?: ಆಡುವ ಬಳಗದಲ್ಲಿ ಯಾರ್ಯಾರು? ಸಂಪೂರ್ಣ ಮಾಹಿತಿ

T20 World Cup India vs Netherlands: pitch report weather forecast and Probable XI details

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಗುರುವಾರ ತನ್ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಭಾರತ ತಂಡ ಗೆಲುವಿನ ಲಯದಲ್ಲಿ ಮುಂದುವರಿಯುವ ವಿಶ್ವಾಸದಲ್ಲಿದೆ. ಸಿಡ್ನಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು ಪಂದ್ಯದಲ್ಲಿ ಹಿಡಿತ ಸಾಧಿಸಲು ಟೀಮ್ ಇಂಡಿಯಾ ಸಿದ್ಧತೆ ನಡೆಸುತ್ತಿದೆ.

ಪಾಕಿಸ್ತಾನದ ವಿರುದ್ಧ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಯಶಸ್ವಿಯಾಗಿತ್ತು. ನಂತರ ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕ ಕಳಪೆ ಪ್ರದರ್ಶನ ನಿಡಿ ಆಘಾತಕರ ರೀತಿಯಲ್ಲಿ ಕುಸಿದರು ಕೂಡ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಲ್ಲದೆ ರೋಚಕ ಗೆಲುವು ತಂದುಕೊಟ್ಟರು.

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್: ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಫಿಲ್ ಸೈಮನ್ಸ್ಟಿ20 ವಿಶ್ವಕಪ್‌ನಿಂದ ಹೊರಬಿದ್ದ ವೆಸ್ಟ್ ಇಂಡೀಸ್: ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ಫಿಲ್ ಸೈಮನ್ಸ್

ಭಾರತ vs ನೆದರ್ಲೆಂಡ್ಸ್ ಪಂದ್ಯದ ಸಮಯ ಹಾಗೂ ನೇರಪ್ರಸಾರ

ಭಾರತ vs ನೆದರ್ಲೆಂಡ್ಸ್ ಪಂದ್ಯದ ಸಮಯ ಹಾಗೂ ನೇರಪ್ರಸಾರ

ಭಾರತ ಹಾಗೂ ನೆದರ್ಲೆಂಡ್ಸ್ ತಂಡಗಳು ಗುರುವಾರ ಮುಖಾಮುಖಿಯಾಗಲಿದ್ದು ಮಧ್ಯಾಹ್ನ 12:30ಕ್ಕೆ ಈ ಪಂದ್ಯ ಆರಂಭವಾಗಲಿದೆ. 12 ಗಂಟೆಗೆ ಪಂದ್ಯದ ಟಾಸ್ ಪ್ರಕ್ರಿಯೆ ನಡೆಯಲಿದೆ. ಸಿಡ್ನಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಹಾಟ್‌ಸ್ಟಾರ್ ಹಾಗೂ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ಪಂದ್ಯ ನೇರಪ್ರಸಾರವಾಗಲಿದೆ.

ಪಿಚ್ ರಿಪೋರ್ಟ್ ಹವಾಮಾನ ವರದಿ

ಪಿಚ್ ರಿಪೋರ್ಟ್ ಹವಾಮಾನ ವರದಿ

ಪಿಚ್ ರಿಪೋರ್ಟ್: ಸಿಡ್ನಿ ಕ್ರಿಕೆಟ್ ಮೈದಾನ ಬ್ಯಾಟಿಂಗ್‌ಗೆ ಉತ್ತಮವಾಗಿರುವ ಪಿಚ್ ಹೊಂದಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವ ಕಾರಣ ಆರಂಭದಿಂದಲೇ ಬ್ಯಾಟರ್‌ಗಳು ಬೌಲರ್‌ಗಳನ್ನು ದಂಡಿಸಬಹುದು. ಈ ತಾಣದಲ್ಲಿ ದೊಡ್ಡ ಮೊತ್ತದ ಪಂದ್ಯವನ್ನು ಅಭಿಮಾನಿಗಳು ನಿರೀಕ್ಷಿಸಬಹುದಾಗಿದೆ.
ಹವಾಮಾನ ವರದಿ: ಗುರುವಾರ ಸಿಡ್ನಿ ಸುತ್ತಮುತ್ತ ಮಳೆಯಾಗುವ ಸಾಧ್ಯತೆಯಿರುವ ಕಾರಣ ಪಂದ್ಯಕ್ಕೂ ಸಣ್ಣ ಪ್ರಮಾಣದಲ್ಲಿ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ.

ಸಂಭಾವ್ಯ ಆಡುವ ಬಳಗ

ಸಂಭಾವ್ಯ ಆಡುವ ಬಳಗ

ಟೀಮ್ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್

ನೆದರ್ಲೆಂಡ್ಸ್: ಮ್ಯಾಕ್ಸ್ ಒ'ಡೌಡ್, ವಿಕ್ರಮಜಿತ್ ಸಿಂಗ್, ಬಾಸ್ ಡಿ ಲೀಡೆ, ಕಾಲಿನ್ ಅಕರ್‌ಮನ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್/ರೋಲೋಫ್ ವ್ಯಾನ್ ಡೆರ್ ಮೆರ್ವೆ, ಫ್ರೆಡ್ ಕ್ಲಾಸೆನ್, ಪಾಲ್ ವ್ಯಾನ್ ಮೀಕೆರೆನ್

ಸಂಪೂರ್ಣ ಸ್ಕ್ವಾಡ್ ಹೀಗಿದೆ

ಸಂಪೂರ್ಣ ಸ್ಕ್ವಾಡ್ ಹೀಗಿದೆ

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ

ನೆದರ್ಲೆಂಡ್ಸ್: ಸ್ಕಾಟ್ ಎಡ್ವರ್ಡ್ಸ್ (ನಾಯಕ), ಕಾಲಿನ್ ಅಕರ್ಮನ್, ಶರೀಜ್ ಅಹ್ಮದ್, ಲೋಗನ್ ವ್ಯಾನ್ ಬೀಕ್, ಟಾಮ್ ಕೂಪರ್, ಬ್ರಾಂಡನ್ ಗ್ಲೋವರ್, ಟಿಮ್ ವ್ಯಾನ್ ಡೆರ್ ಗುಗ್ಟನ್, ಫ್ರೆಡ್ ಕ್ಲಾಸೆನ್, ಬಾಸ್ ಡಿ ಲೀಡೆ, ಪಾಲ್ ವ್ಯಾನ್ ಮೀಕೆರೆನ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ಸ್ಟೀಫನ್ ಮೈಬರ್ಗ್, ತೇಜ ನಿಡಮನೂರು, ಮ್ಯಾಕ್ಸ್ ಓಡೌಡ್, ಟಿಮ್ ಪ್ರಿಂಗಲ್, ವಿಕ್ರಮಜಿತ್ ಸಿಂಗ್

Story first published: Wednesday, October 26, 2022, 15:45 [IST]
Other articles published on Oct 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X