ಸೋಲಿನ ಬಳಿಕ ರೋಹಿತ್ ಶರ್ಮಾ ವರ್ತನೆಗೆ ಕಿಡಿಕಾರಿದ ಇನ್ಜಮಾಮ್ ಉಲ್ ಹಕ್

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ ಬಳಿಕ ನಾನಾ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿದೆ. ಒಂದೆಡೆ ಟೀಮ್ ಇಂಡಿಯಾ ಸೋಲಿಗೆ ಕಾರಣಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರೆ ಭವಿಷ್ಯದ ದೃಷ್ಟಿಯಿಂದ ಆಗಬೇಕಿರುವ ಬದಲಾವಣೆಗಳ ಬಗ್ಗೆಯೂ ಚರ್ಚೆಗಳು ಜೋರಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ.

ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಆಂಗಿಕ ಭಾಷೆಯನ್ನು ಉಲ್ಲೇಖಿಸಿ ಇನ್ಜಮಾಮ್ ಉಲ್ ಹಕ್ ಟೀಕಿಸಿದ್ದಾರೆ. ನಾಯಕತ್ವ ರೋಹಿತ್ ಶರ್ಮಾ ಮೇಲೆ ಸಾಕಷ್ಟು ಒತ್ತಡಗಳನ್ನು ಹೇರುತ್ತಿದ್ದು ಅದರಿಂದಾಗಿ ರೋಹಿತ್ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದಿದ್ದಾರೆ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್.

ಚಹಾಲ್, ರವಿ ಬಿಷ್ಣೋಯಿ ಬಿಟ್ಟು ಅಶ್ವಿನ್‌ರನ್ನು ನಾನು ಆಯ್ಕೆ ಮಾಡುತ್ತಿರಲಿಲ್ಲ: ಫಾರೂಕ್ ಎಂಜಿನಿಯರ್ಚಹಾಲ್, ರವಿ ಬಿಷ್ಣೋಯಿ ಬಿಟ್ಟು ಅಶ್ವಿನ್‌ರನ್ನು ನಾನು ಆಯ್ಕೆ ಮಾಡುತ್ತಿರಲಿಲ್ಲ: ಫಾರೂಕ್ ಎಂಜಿನಿಯರ್

ತಂಡದ ಮೇಲೆ ಪರಿಣಾಮ ಬೀರುತ್ತದೆ

ತಂಡದ ಮೇಲೆ ಪರಿಣಾಮ ಬೀರುತ್ತದೆ

ಟೀಮ್ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇನ್ಜಮಾಮ್ ಉಲ್ ಹಕ್ ಮಾತನಾಡಿದ್ದಾರೆ. "ನಾಯಕನ ಆಂಗಿಕ ಭಾಷೆ ತಂಡದ ಮೇಲೆ ಪರಿಣಾಮವನ್ನು ಬೀರುತ್ತದೆ. ರೋಹಿತ್ ಶರ್ಮಾ ದೊಡ್ಡ ಆಟಗಾರ ನಿಜ. ಅವರು ಸಾಕಷ್ಟು ಅದ್ಭುತ ಪ್ರದರ್ಶನಗಳನ್ನು ನೀಡಿದ್ದಾರೆ. ಆದರೆ ಸೆಮಿಫೈನಲ್‌ ಪಂದ್ಯದಲ್ಲಿ ಅವರ ಮುಖದ ಭಾವನೆಗಳನ್ನು ಗಮನಿಸಿದ್ದೀರಾ? ಅಂಥಾ ವರ್ತನೆಗಳು ತಂಡದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಲು ರೋಹಿತ್ ವಿಫಲ

ವೈಯಕ್ತಿಕವಾಗಿಯೂ ಉತ್ತಮ ಪ್ರದರ್ಶನ ನೀಡಲು ರೋಹಿತ್ ವಿಫಲ

ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಈ ಬಾರಿಯ ವಿಶ್ವಕಪ್‌ನಲ್ಲಿ ವೈಯಕ್ತಿಕವಾಗಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದು ಸಾಕಷ್ಟು ಜವಾಬ್ಧಾರಿಯಿದ್ದರೂ ತಂಡದ ಅಗತ್ಯಕ್ಕೆ ಪೂರಕವಾಗಿ ಪ್ರದರ್ಶನ ನೀಡುವಲ್ಲಿ ರೋಹಿತ್ ವಿಫಲವಾದರು. ಸೆಮಿಫೈನಲ್ ಪಂದ್ಯದಲ್ಲಿಯೂ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಮೂಡಿಸಿದರು ಕೂಡ ಅವರ ಆಟ ಕೇವಲ 28 ಎಸೆತಗಳಲ್ಲಿ 27 ರನ್‌ಗಳಿಗೆ ಅಂತ್ಯವಾಯಿತು.

ಬೌಲರ್‌ಗಳನ್ನು ಹೊಣೆಯಾಗಿಸಿದ ರೋಹಿತ್; ಅಭಿಮಾನಿಗಳು ಕಿಡಿ

ಬೌಲರ್‌ಗಳನ್ನು ಹೊಣೆಯಾಗಿಸಿದ ರೋಹಿತ್; ಅಭಿಮಾನಿಗಳು ಕಿಡಿ

ಇನ್ನು ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಟೀಮ್ ಇಂಡಿಯಾ 10 ವಿಕೆಟ್‌ಗಳ ಅಂತರದಿಂದ ಭಾರೀ ಸೋಲು ಅನುಭವಿಸಿದ ಬಳಿಕ ನಾಯಕ ರೋಹಿತ್ ಶರ್ಮಾ ಬೌಲಿಂಗ್ ವಿಭಾಗದ ವೈಫಲ್ಯ ಪಂದ್ಯದ ಸೋಲಿಗೆ ಕಾರಣ ಎಂದಿದ್ದಾರೆ. ಆದರೆ ಇಂಥಾ ಮಹತ್ವದ ಘಟ್ಟದಲ್ಲಿ ನಾಯಕನಾಗಿ ರೋಹಿತ್ ಶರ್ಮಾ ಬೌಲಿಂಗ್ ವಿಭಾಗವನ್ನು ಮಾತ್ರವೇ ಸೋಲಿಗೆ ಹೋಣೆಯಾಗಿಸಿದ್ದು ಕೆಲ ಅಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿದೆ. ಸ್ವತಃ ವೈಫಲ್ಯವನ್ನು ಅನುಭವಿಸಿದ ರೋಹಿತ್ ಶರ್ಮಾ ಬೌಲಿಂಗ್ ವಿಭಾಗ ಮಾತ್ರವೇ ಸೋಲಿಗೆ ಕಾರಣವಾಯಿತು ಎಂದು ಪಂದ್ಯದ ಬಳಿಕ ಹೇಳಿಕೆ ನೀಡಿದ್ದು ಉತ್ತಮ ನಾಯಕನ ಲಕ್ಷಣವಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, November 11, 2022, 15:01 [IST]
Other articles published on Nov 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X