ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

T20 World Cup: ಐಪಿಎಲ್‌ನಲ್ಲಿ ಆಡಿದ್ದು ಸಹಾಯಕವಾಯಿತು ಎಂದ ಆಸ್ಟ್ರೇಲಿಯಾ ಆಲ್‌ರೌಂಡರ್

T20 World Cup: IPL Helped Me To Improve My Game: Australia All-Rounder Marcus Stoinis

ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ 2022ರ T20 ವಿಶ್ವಕಪ್‌ನಲ್ಲಿ ಮಂಗಳವಾರ ಶ್ರೀಲಂಕಾ ವಿರುದ್ಧ 327.78 ಸ್ಟ್ರೈಕ್ ರೇಟ್‌ನಲ್ಲಿ 18 ಎಸೆತಗಳಲ್ಲಿ 59 ರನ್‌ಗಳನ್ನು ಗಳಿಸಿದರು. ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಆಸ್ಟ್ರೇಲಿಯಾ 16.3 ಓವರ್ ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 2 ಅಂಕಗಳನ್ನು ಗಳಿಸಿತು.

ಈ ಸೋಲು 'ಸ್ಪಿರಿಟ್ ಆಫ್ ಗೇಮ್' ಅನಿಸುತ್ತಾ? ಇಂಗ್ಲೆಂಡ್ ತಂಡದ ಕಾಲೆಳೆದ ಅಮಿತ್ ಮಿಶ್ರಾಈ ಸೋಲು 'ಸ್ಪಿರಿಟ್ ಆಫ್ ಗೇಮ್' ಅನಿಸುತ್ತಾ? ಇಂಗ್ಲೆಂಡ್ ತಂಡದ ಕಾಲೆಳೆದ ಅಮಿತ್ ಮಿಶ್ರಾ

ಮಾರ್ಕಸ್ ಸ್ಟೊಯಿನಿಸ್ ಆರು ಭರ್ಜರಿ ಸಿಕ್ಸರ್‌ ಮತ್ತು ನಾಲ್ಕು ಬೌಂಡರಿಗಳನ್ನು ಹೊಡೆದರು. ಅವರ ಒಟ್ಟು ಸ್ಕೋರ್ 59 ರಲ್ಲಿ ಬೌಂಡರಿ ಮೂಲಕವೇ 52 ರನ್ ಗಳಿಸಿದ್ದು ವಿಶೇಷ. ಇದಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು.

ಅವರು ತಮ್ಮ ಬ್ಯಾಟಿಂಗ್ ಸುಧಾರಣೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮಹತ್ವದ ಪಾತ್ರ ವಹಿಸಿತು ಎಂದು ತಿಳಿಸಿದ್ದಾರೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಶ್ರೀಲಂಕಾದ ಸ್ಪಿನ್ ಜೋಡಿಯಾದ ಮಹೇಶ್ ತೀಕ್ಷಣ ಮತ್ತು ವನಿಂದು ಹಸರಂಗ ವಿರುದ್ಧ ಬೌಂಡರಿಗಳನ್ನು ಗಳಿಸಿದರು. ಸ್ಪಿನ್ನರ್‌ಗಳ ವಿರುದ್ಧ ಆಕ್ರಮಣಕಾರಿ ಆಟವನ್ನಾಡಲು ಐಪಿಎಲ್ ಸಹಾಯ ಮಾಡಿತು ಎಂದು ಅವರು ಹೇಳಿದ್ದಾರೆ.

T20 World Cup: IPL Helped Me To Improve My Game: Australia All-Rounder Marcus Stoinis

ಐಪಿಎಲ್ ನನ್ನ ಕ್ರಿಕೆಟ್ ಜೀವನವನ್ನು ಬದಲಾಯಿಸಿದೆ

"ಖಂಡಿತವಾಗಿ ಐಪಿಎಲ್ ನನ್ನ ಕ್ರಿಕೆಟ್ ಅನ್ನು ಬದಲಾಯಿಸಿದೆ ಮತ್ತು ನಾನು ಆಟದಲ್ಲಿ ಸುಧಾರಣೆಯಾಗಲು ಸಹಾಯ ಮಾಡಿದೆ, ಪ್ರಪಂಚದಾದ್ಯಂತದ ಉತ್ತಮ ತರಬೇತುದಾರರನ್ನು ಹೊಂದಿದೆ, ವಿವಿಧ ದೇಶಗಳ ಆಟಗಾರರನ್ನು ಹೊಂದಿದೆ. ನಾನು ಕೆಲವು ವರ್ಷಗಳಿಂದ ಐಪಿಎಲ್‌ನಲ್ಲಿ ಹಲವು ತಂಡಗಳಲ್ಲಿ ಆಡಿದ್ದೇನೆ. ಸ್ಪಿನ್ ಅನ್ನು ಹೇಗೆ ಆಡಬೇಕೆಂಬುದರ ಕುರಿತು ಹಲವಾರು ತಂತ್ರಗಳು ಮತ್ತು ಮನಸ್ಥಿತಿಗಳನ್ನು ಅಲ್ಲಿ ನೋಡುತ್ತೀರಿ. ಇದು ನನಗೆ ಸುಧಾರಿಸಲು ಸಹಾಯ ಮಾಡಿದೆ," ಎಂದು ಶ್ರೀಲಂಕಾ ವಿರುದ್ಧದ ಗೆಲುವಿನ ನಂತರ ಸ್ಟೊಯಿನಿಸ್ ಹೇಳಿದರು.

"ಹಿಂದಿನ ಪಾದ ಮತ್ತು ಮುಂದಿನ ಪಾದದ ಮೇಲೆ ಆಡಲು ನಾನು ಕಲಿತಿದಿದ್ದೇನೆ. ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮವಾಗಿ ಆಡುತ್ತೇನೆ." ಎಂದು ಅವರು ಹೇಳಿದರು.

ನೀವು ಬ್ಯಾಟಿಂಗ್ ಮಾಡುವಾಗ, ನೀವು ಉತ್ತಮ ಹೊಡೆತ ಆಡಲು ಬಯಸುತ್ತೀರಿ, ನಿಮಗೆ ಬೇಕಾದ ಕಡೆ ಬಾಲ್ ಹೊಡೆಯಲು ನಿರ್ಧರಿಸಬೇಕು. ಅದಕ್ಕಾಗಿಯೇ ಲ್ಯಾಪ್ ಅಥವಾ ರಿವರ್ಸ್ ಅಥವಾ ಸ್ವೀಪ್ ಶಾಟ್ ಅನ್ನು ಆಡಲು ಬಯಸುತ್ತೇನೆ ಎಂದು ಅವರು ಹೇಳಿದರು.

ಸ್ಟೊಯಿನಿಸ್ ಕೇವಲ 17 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಪರವಾಗಿ ವೇಗದ ಅರ್ಧ ಶತಕವನ್ನು ಪೂರ್ಣಗೊಳಿಸಿದ ಆಟಗಾರ ಎನಿಸಿಕೊಂಡರು. ವಿಶ್ವಕಪ್‌ನ ತಮ್ಮ ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಹಾಲಿ ಚಾಂಪಿಯನ್‌ಗಳು ತಮ್ಮರನ್ ರೇಟ್ ಅನ್ನು ಉತ್ತಮಗೊಳಿಸಲು ಅವರ ಸ್ಫೋಟಕ ಆಟವು ಸಹಾಯ ಮಾಡಿತು.

ಸ್ಫೋಟಕ ಇನ್ನಿಂಗ್ಸ್ ಪೂರ್ವ-ಯೋಜಿತವಾಗಿದೆಯೇ ಎಂಬ ಬಗ್ಗೆ ಮಾತನಾಡುತ್ತಾ, ಅವರು "ನಿಜವಾಗಿಯೂ ಅಲ್ಲ. ಇದು ಕೇವಲ ಬ್ಯಾಟಿಂಗ್ ಮತ್ತು ಸ್ಕೋರ್ ಗಳಿಸಲು ನೋಡುತ್ತಿದೆ ಮತ್ತು ನಂತರ ನಾನು ಎದುರಿಸಿದ ಕೊನೆಯ ಎರಡು ಓವರ್‌ಗಳ ಕಡೆಗೆ, ನಾನು ನಿಧಾನವಾಗಿ ರನ್ ಗಳಿಸಬೇಕೆ ಎಂದು ಯೋಚಿಸಿದೆ. ಆದರೆ, ನಂತರ ನಾನು ನನ್ನ ಆಟವಾಡಲು ನಿರ್ಧರಿಸಿದೆ." ಎಂದು ಹೇಳಿದ್ದಾರೆ.

ಅಕ್ಟೋಬರ್ 28, ಶುಕ್ರವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್ ಅನ್ನು ಎದುರಿಸಲಿದೆ.

Story first published: Thursday, October 27, 2022, 2:30 [IST]
Other articles published on Oct 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X