ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೇರೆಯವರ ಅಭಿಪ್ರಾಯಗಳು ಪರಿಣಾಮ ಬೀರುವುದಿಲ್ಲ: ಟೀಕೆಗಳಿಗೆ ಆಸಿಸ್ ನಾಯಕನ ಪ್ರತ್ಯುತ್ತರ

T20 World Cup: Others opinions dont matter Australian skipper Aaron Finch on criticism

ಆಸ್ಟ್ರೇಲಿಯಾ ತಂಡ ಈ ಬಾರಿ ಟಿ20 ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರಿದ್ಧ ಸೋಲು ಅನುಭವಿಸಿದೆ. ಈ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಈ ಟೀಕೆಗಳಿಗೆ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಉತ್ತರ ನೀಡಿದ್ದಾರೆ. ನಮ್ಮ ತಂಡದ ಬಗ್ಗೆ ಬೇರೆಯವರು ಯಾವ ರೀತಿಯಾಗಿ ಆಲೋಚನೆ ಮಾಡುತ್ತಾರೆ ಎಂಬುದು ನಮಗೆ ಮುಖ್ಯವಾಗುವುದಿಲ್ಲ. ಅದು ಯಾವ ಪರಿಣಾಮವನ್ನು ಕೂಡ ಬೀರುವುದಿಲ್ಲ ಎಂದು ತಂಡವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಐಸಿಸಿ ಟಿ20 ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾವು ಕೆಲ ಸಮಯದ ಹಿಂದೆ ನಂಬರ್ 1 ತಂಡವಾಗಿತ್ತು ಎಂದಿರುವ ಆರೋನ್ ಫಿಂಚ್ ನಮ್ಮ ತಂಡವನ್ನು ಜನರು ಸಾಮಾನ್ಯ ಟಿ20 ತಂಡ ಎಂದು ಭಾವಿಸಿದರೆ ಪರವಾಗಿಲ್ಲ ಎಂದಿದ್ದಾರೆ. ಆದರೆ ನಮ್ಮ ತಂಡದ ಚಿತ್ತ ಈಗ ಉಳಿದ ಪಂದ್ಯಗಳತ್ತ ಇದ್ದು ಅಲ್ಲಿ ಗೆಲುವು ಸಾಧಿಸುವ ಮೂಲಕ ನಾವು ಸೆಮಿಫೈನಲ್ ಪಂದ್ಯಕ್ಕೆ ಅರ್ಹತೆ ಸಂಪಾದಿಸಲಿದ್ದೇವೆ ಎಂದಿದ್ದಾರೆ.

ಟಿ20 ವಿಶ್ವಕಪ್: ಫೈನಲ್‌ನಲ್ಲಿ ಪಾಕಿಸ್ತಾನದ ಜೊತೆ ಕಾದಾಟ ನಡೆಸಲಿರುವ ತಂಡವನ್ನು ಹೆಸರಿಸಿದ ಶೇನ್ ವಾರ್ನ್!ಟಿ20 ವಿಶ್ವಕಪ್: ಫೈನಲ್‌ನಲ್ಲಿ ಪಾಕಿಸ್ತಾನದ ಜೊತೆ ಕಾದಾಟ ನಡೆಸಲಿರುವ ತಂಡವನ್ನು ಹೆಸರಿಸಿದ ಶೇನ್ ವಾರ್ನ್!

ಚುಟುಕು ಕ್ರಿಕೆಟ್ ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡದ ಇತ್ತೀಚಿನ ಸಾಧನೆ ಅತ್ಯಂತ ಕಳಪೆಯಾಗಿದೆ. ಇನ್ನು ಐಸಿಸಿ ಟಿ20ಐ ಶ್ರೇಯಾಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಈಗ 6ನೇ ಸ್ಥಾನದಲ್ಲಿದೆ. ಟಿ20 ವಿಶ್ವಕಪ್‌ಗೆ ಮುನ್ನ ನಡೆದ ಐದು ಟಿ20 ಸರಣಿಗಳಲ್ಲಿ ಎಲ್ಲ ಸರಣಿಯಲ್ಲಿಯೂ ಆಸ್ಟ್ರೇಲಿಯಾ ಸೋಲು ಅನುಭವಿಸಿದೆ. ಬಾಂಗ್ಲಾದೇಶ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಭಾರತ ಹಾಗೂ ಇಂಗ್ಲೆಂಡ್ ತಂಡದ ವಿರುದ್ಧ ಆಸ್ಟ್ರೇಲಿಯಾ ಸರಣಿಯನ್ನು ಕಳೆದುಕೊಂಡಿತ್ತು.

ಇನ್ನು ಆಸ್ಟ್ರೇಲಿಯಾ ತಂಡ ಈ ಬಾರಿಯ ಟಿ20 ವಿಶ್ವಕಪ್‌ನ ಮೊದಲ ಎರಡು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಹೀನಾಯಕವಾಗಿ ಕಳೆದುಕೊಂಡಿದೆ. ನಿಗದಿತ ಟಿ20 ಓವರ್‌ಗಳಲ್ಲಿ ಕೇವಲ 125 ರನ್‌ಗಳಿಗೆ ಆಲೌಟ್ ಆದ ಆಸ್ಟ್ರೇಲಿಯಾ ಪಡೆಯನ್ನು ಇಂಗ್ಲೆಂಡ್ ಸುಲಭವಾಗಿ ಸೋಲಿಸಿದೆ. ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಏಕಾಂಗಿಯಾಗಿ ಆಸ್ಟ್ರೇಲಿಯಾದ ಬೌಲಿಂಗ್ ಪಡೆಯನ್ನು ಪುಡಿಗಟ್ಟಿದ್ದರು.

Story first published: Sunday, October 31, 2021, 18:59 [IST]
Other articles published on Oct 31, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X