ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮಿಂದ ನಿರೀಕ್ಷಿತ ಪ್ರದರ್ಶನ ಬರುತ್ತಿಲ್ಲ: ಪಂದ್ಯ ಗೆದ್ದರೂ ಬೇಸರ ಹೊರ ಹಾಕಿದ ಪಾಕ್ ನಾಯಕ ಬಾಬರ್

T20 World Cup: Pakistan skipper Babar Azam reaction after win against South Africa disappointed about his performance

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಪಾಕ್ ತಂಡ ಮೇಲುಗೈ ಸಾಧಿಸಿದ್ದು ಈ ಟೂರ್ನಿಯಲ್ಲಿ ಅಜೇಯವಾಗುಳಿದಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ಸೋಲಿನ ರುಚಿ ತೋರಿಸಿದೆ. ಈ ಮೂಲಕ ಪಾಕಿಸ್ತಾನ ತಂಡ ಸೆಮಿಫೈನಲ್‌ಗೇರುವ ಸ್ಪರ್ಧೆಯಲ್ಲಿ ಜೀವಂತವಾಗುಳಿದಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯಕ್ಕೆ ಮಳೆ ಅಡ್ಡಿಯುಂಟಾಗಿದ್ದರೂ ಪಾಕಿಸ್ತಾನ ತಂಡ ಡಕ್ವರ್ತ್ ಲೂಯೀಸ್ ನಿಯಮದಲ್ಲಿ 33 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಈ ಗೆಲುವಿನ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ವೈಯಕ್ತಿಕ ಪ್ರದರ್ಶನದ ಬಗ್ಗೆ ಬೇಸರವನ್ನೂ ಬಾಬರ್ ಹೊರಹಾಕಿದ್ದಾರೆ.

IPL 2023: ಬೆಂಗಳೂರಿಗೆ ಬಂದ ಎಬಿ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ?IPL 2023: ಬೆಂಗಳೂರಿಗೆ ಬಂದ ಎಬಿ ಡಿವಿಲಿಯರ್ಸ್ ಹೇಳಿದ್ದೇನು ಗೊತ್ತಾ?

ತಂಡದ ಆಟಗಾರರ ಪ್ರದರ್ಶನಕ್ಕೆ ಬಾಬರ್ ಸಂತಸ

ತಂಡದ ಆಟಗಾರರ ಪ್ರದರ್ಶನಕ್ಕೆ ಬಾಬರ್ ಸಂತಸ

ಇನ್ನು ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ತಮಡದ ಆಟಗಾರರ ಪ್ರದರ್ಶನವನ್ನು ಬಾಬರ್ ಕೊಂಡಾಡಿದ್ದಾರೆ. ಫಕರ್ ಜಮಾನ್ ಬದಲಿಗೆ ಸ್ಥಾನವ್ನು ಪಡೆದು ಈ ಪಂದ್ಯದಲ್ಲಿ 11 ಎಸೆತಗಳಲ್ಲಿ 28 ರನ್ ಬಾರಿಸಿದ್ದ ಮೊಹಮ್ಮದ್ ಹ್ಯಾರಿಸ್ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ ಬಾಬರ್ ಶದಬ್ ಖಾನ್ ಹಾಗೂ ಇಫ್ತಿಕಾರ್ ಅಹ್ಮದ್ ಅವರ ಪ್ರದರ್ಶನ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಗಿಸಿತು ಎಂದಿದ್ದಾರೆ. ಈ ಇಬ್ಬರು ಆಟಗಾರರ ಕಾರಣದಿಂದಾಗಿಯೇ ಪಾಕಿಸ್ತಾನ 185 ರನ್‌ಗಳನ್ನು ಗಳಿಸಲು ಸಾಧ್ಯವಾಗಿತ್ತು.

ತಮ್ಮ ಪ್ರದರ್ಶನದ ಬಗ್ಗೆ ಬಾಬರ್ ಬೇಸರ

ತಮ್ಮ ಪ್ರದರ್ಶನದ ಬಗ್ಗೆ ಬಾಬರ್ ಬೇಸರ

ಇನ್ನು ಈ ಸಂದರ್ಭದಲ್ಲಿ ಇಡೀ ತಂಡದ ಪ್ರದರ್ಶನದ ಬಗ್ಗೆ ಬಾಬರ್ ಅಜಂ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. "ತಂಡ ನೀಡಿರುವ ಪ್ರದರ್ಶನ ನನಗೆ ಬಹಳ ಹರ್ಷವನ್ನುಂಟು ಮಾಡಿದೆ. ಆದರೆ ನಾನು ಮತ್ತು ರಿಜ್ವಾನ್ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಆದರೆ ಹ್ಯಾರಿಸ್ ಆಡಿದ ರೀತಿಯಿಂದ ಆತನೋರ್ವ ಭಿನ್ನ ಆಟಗಾರ ಎಂಬುದನ್ನು ಸಾರಿದ್ದಾರೆ. ಆ ಆಟದಿಂದಾಗಿ ಪಂದ್ಯದ ಗತಿ ಬದಲಾಯಿತು. ಅದಾದ ಬಳಿಕ ಶದಬ್ ಹಾಗೂ ಇಫ್ತಿಕಾರ್ ಅಹ್ಮದ್ ಅಮೋಘ ಆಟದ ಮೂಲಕ ಅದ್ಭುತವಾಗಿ ಪಂದ್ಯವನ್ನು ಮುಗಿಸಿದರು" ಎಂದಿದ್ದಾರೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ.

ಶದಬ್ ಖಾನ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ

ಶದಬ್ ಖಾನ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ

ಪಾಕಿಸ್ತಾನ ತಂಡದ ಕೆಳ ಮಧ್ಯಮ ಕ್ರಮಾಂಕದ ಆಟಗಾರ ಶದಬ್ ಖಾನ್ ಈ ಪಂದ್ಯದಲ್ಲಿ ಅಕ್ಷರಶಃ ಅಬ್ಬರದ ಪ್ರದರ್ಶನ ನಿಡಿ ಮಿಂಚಿದರು. ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ದಾಳಿಯ ವಿರುದ್ಧ ಮಿಂಚಿನ ಪ್ರದರ್ಶನ ನೀಡಿದ ಶದಬ್ ಖಾನ್ ಕೇವಲ 20 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಒಳಗೊಂಡಿತ್ತು. 7ನೇ ವಿಕೆಟ್‌ಗೆ ಇಫ್ತಿಕಾರ್ ಅಹ್ಮದ್ ಜೊತೆ ಸೇರಿಕೊಂಡು ಬರೊಬ್ಬರಿ 82 ರನ್‌ಗಳ ಜೊತೆಯಾಟವನ್ನು ನೀಡುವಲ್ಲಿ ಯಶಸ್ವಿಯಾದರು. ಇನ್ನು ಶದಬ್ ಖಾನ್ ಬ್ಯಾಟಿಂಗ್‌ನ ಬಳಿಕ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡಿದ್ದು ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬವುಮಾ ಹಾಗೂ ಐಡೆನ್ ಮಾರ್ಕ್ರಮ್ ವಿಕೆಟ್ ಪಡೆಯುವ ಮೂಲಕ ಬೌಲಿಂಗ್‌ನಲ್ಲಿಯೂ ಮೇಲುಗೈ ಒದಗಿಸಿದರು.

ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಪಾಕ್

ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಪಾಕ್

ಇನ್ನು ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಪಾಕಿಸ್ತಾನ ಅಂಕಪಟ್ಟಿಯಲ್ಲಿಯೂ ಅದ್ಭುತ ಪ್ರಗತಿ ಸಾಧಿಸಿದೆ. ಈ ಪಂದ್ಯಕ್ಕೂ ಮುನ್ನ 5ನೇ ಸ್ಥಾನದಲ್ಲಿದ್ದ ಪಾಕಿಸ್ತಾನ ನೆಟ್‌ರನ್‌ರೇಟ್‌ನಲ್ಲಿಯೂ ಏರಿಕೆ ಕಂಡಿದೆ. ಹೀಗಾಗಿ 3ನೇ ಸ್ಥಾನಕ್ಕೇರಿದೆ. ಮೊದಲ ಸ್ಥಾನದಲ್ಲಿ ಭಾರತ ತಂಡವಿದ್ದು ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನದಲ್ಲಿದೆ.

Story first published: Thursday, November 3, 2022, 20:08 [IST]
Other articles published on Nov 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X