ಟಿ20 ವಿಶ್ವಕಪ್: ಇಂಗ್ಲೆಂಡ್‌ ವಿರುದ್ಧ ಗೆದ್ದರೂ ದಕ್ಷಿಣ ಆಫ್ರಿಕಾ ಮನೆಗೆ: ಆಸಿಸ್ ಸೆಮಿಫೈನಲ್‌ಗೆ

ಈ ಬಾರಿಯ ಟಿ20 ವಿಸ್ವಕಪ್‌ನ ಸೂಪರ್ 12 ಹಂತದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ತಂಡಕ್ಕೆ ಭರ್ಜರಿಯಾಗಿ ಸೋಲುಣಿಸಿದೆ. ಹಾಗಿದ್ದರೂ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್‌ಗೇರಲು ವಿಫಲವಾಗಿದೆ. ನೆಟ್‌ರನ್‌ರೇಟ್ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ತಂಡಕ್ಕಿಂತ ಹಿಂದುಳಿದ ಕಾರಣದಿಂದಾಗಿ ಸಮಿಫೈನಲ್‌ಗೇರುವ ಅವಕಾಶವನ್ನು ಕಳೆದುಕೊಂಡಿದೆ. ಈ ಮೂಲಕ 2021ರ ಟಿ20 ವಿಶ್ವಕಪ್ ಅಭಿಯಾನವನ್ನು ಅಂತಿಮಗೊಳಿಸಿದೆ.

ಭಾನುವಾರದ ಎರಡು ಪಂದ್ಯಗಳು ಕೂಡ ಆರಂಭವಾಗುವ ಮುನ್ನ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಿ ಮೂರು ಪಂದ್ಯಗಳಲ್ಲಿ ಗೆಲುವು ಹಾಗೂ ಒಂದು ಪಂದ್ಯದಲ್ಲಿ ಸೋಲು ಕಂಡಿತ್ತು. ಈ ಮೂಲಕ 6 ಅಂಕಗಳನ್ನು ಗಳೊಂದಿಗೆ ಸಮಬಲದಲ್ಲಿತ್ತು. ನೆಟ್ ರನ್‌ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾ ಮುಂದಿದ್ದರೂ ಎರಡೂ ತಂಡಗಳ ಅಂತಿಮ ಪಂದ್ಯ ಯಾರು ಸೆಮಿಫೈನಲ್‌ಗೇರಲು ಅರ್ಹತೆ ಸಂಪಾದಿಸುತ್ತಾರೆ ಎಂಬ ಕುತೂಹಲ ಮೂಡಿಸಿತ್ತು.

ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿ ನೀಡಿದ ಸ್ಕಾಟ್ಲೆಂಡ್ ಆಟಗಾರರಿಗೆ ರಾಹುಲ್, ರೋಹಿತ್ ಟಿಪ್ಸ್ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿ ನೀಡಿದ ಸ್ಕಾಟ್ಲೆಂಡ್ ಆಟಗಾರರಿಗೆ ರಾಹುಲ್, ರೋಹಿತ್ ಟಿಪ್ಸ್

ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿಯಾಗಿ ಗೆದ್ದ ಆಸ್ಟ್ರೇಲಿಯಾ: ಇನ್ನು ಸೆಮಿಫೈನಲ್‌ಗೇರಲು ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ತಂಡವನ್ನು ಸೂಪರ್ 12 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಸೋಲಿಸಬೇಕಿತ್ತು. ಇದರಲ್ಲಿ ಆಸ್ಟ್ರೇಲಿಯಾ ಭರ್ಜಿರಿಯಾಗಿ ಯಶಸ್ಸು ಸಾಧಿಸಿತು. 158 ರನ್‌ಗಳ ಗುರಿ ನೀಡಿದ್ದ ವೆಸ್ಟ್ ಇಂಡೀಸದ ತಂಡವನ್ನು ಆಸ್ಟ್ರೇಲಿಯಾ ಇನ್ನೂ 22 ಎಸೆತಗಳು ಬಾಕಿಯಿರುವಂತೆಯೇ 8 ವಿಕೆಟ್‌ಗಳ ಬೃಹತ್ ಅಂತದದಿಂದ ಗೆಲುವು ಸಾಧಿಸಿತು. ಈ ಮೂಲಕ ಮೇಲುಗೈ ಸಾಧಿಸಿತು.

ಆಸಿಸ್ ಗೆಲುವು ದಕ್ಷಿಣ ಆಫ್ರಿಕಾಗೆ ಸಂಕಷ್ಟ: ವೆಸ್ಟ್ ಇಂಡೀಸ್ ತಂಡದ ವಿರುದ್ಧ ಆಸ್ಟ್ರೇಲಿಯಾ ಗೆಲುವು ಸಾಧಿಸಿರುವುದು ದಕ್ಷಿಣ ಆಫ್ರಿಕಾಗೆ ಸಂಕಷ್ಟವನ್ನು ತಂದೊಡ್ಡಿತು. ಸೆಮಿಫೈನಲ್‌ಗೇರವೇಕಾದರೆ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಭಾರೀ ಅಂತರದ ಗೆಲುವು ಸಾಧಿಸಬೇಕಿತ್ತು. ಕನಿಷ್ಠ 57 ರನ್‌ಗಳ ಅಂತರದ ಗೆಲುವು ಸಾಧಿಸಿದರೆ ಮಾತ್ರವೇ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೇರುವ ಅವಕಾಶ ಪಡೆದುಕೊಂಡಿತು. ಗೆಲುವು ಸಾಧಿಸಿದರೂ ನೆಟ್‌ ರನ್‌ರೇಟ್ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾ ಹಿಂದಕ್ಕೆ ಬಿತ್ತು. ಹೀಗಾಗಿ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿದರೂ ಸೆಮಿಫೈನಲ್ ಟಿಕೆಟ್ ಕಳೆದುಕೊಂಡಿತು.

SMAT 2021-22: ಮನೀಶ್ ಅರ್ಧಶತಕ; ಹ್ಯಾಟ್ರಿಕ್ ಗೆಲುವು ಕಂಡು ಅಬ್ಬರಿಸುತ್ತಿದೆ ಕರ್ನಾಟಕSMAT 2021-22: ಮನೀಶ್ ಅರ್ಧಶತಕ; ಹ್ಯಾಟ್ರಿಕ್ ಗೆಲುವು ಕಂಡು ಅಬ್ಬರಿಸುತ್ತಿದೆ ಕರ್ನಾಟಕ

ದಕ್ಷಿಣ ಆಫ್ರಿಕಾ ಭರ್ಜರಿ ಪ್ರದರ್ಶನ: ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಮ ಹಿನ್ನಡೆ ಅನುಭವಿಸಿದ ಬಳಿಕ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ ಕೇವಲ 2 ವಿಕೆಟ್ ಕಳೆದುಕೊಂಡು 189 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ವಾನ್‌ ಡರ್ ದಸ್ಸೆನ್ ಹಾಗೂ ಮಾರ್ಕ್ರಮ್ ಮುರಿಯದ 3ನೇ ವಿಕೆಟ್‌ಗೆ 103 ರನ್‌ಗಳ ಭರ್ಜರಿ ಜೊತೆಯಾಟವನ್ನು ನೀಡಿದರು. ಡಸೆನ್ ಅಜೇಯ 94 ರನ್‌ಗಳ ಕೊಡುಗೆ ನೀಡಿದರೆ ಮರ್ಕ್ರಮ್ 52 ರನ್‌ಗಳ ಕೊಡುಗೆ ನೀಡಿದರು.

ದಕ್ಷಿಣ ಆಫ್ರಿಕಾ ತಂಡ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಿತು.ಆದರೆ ದಕ್ಷಿಣ ಆಫ್ರಿಕಾ ತಂಡ ನಿಡಿದ ಗುರಿಯನ್ನು ತಲುಪಲು ಇಂಗ್ಲೆಂಡ್‌ಗೆ ಸಾಧ್ಯವಾಗಲಿಲ್ಲ. ಅದರಲ್ಲೂ ಆರಂಭದಲ್ಲಿ ರನ್‌ ಬಿಟ್ಟುಕೊಟ್ಟು ದುಬಾರಿಯೆನಿಸಿದ್ದ ಕಗಿಸೋ ರಬಡಾ ನಂತರ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡು ಮಿಂಚುಹರಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡದ ಗೆಲುವು ಸಾಧ್ಯವಾಗಿಸಿದರು. ಅಂತಿಮವಾಗಿ ಇಂಗ್ಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 179 ರನ್ ಗಳಿಸಲಷ್ಟೇ ಶಕ್ರವಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಇಂಗ್ಲೆಂಡ್ 10 ರನ್‌ಗಳ ಅಂತರದಿಂದ ಶರಣಾಗಿದೆ. ಇದು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಅನುಭವಿಸಿದ ಮೊದಲ ಸೋಲು.

For Quick Alerts
ALLOW NOTIFICATIONS
For Daily Alerts
Story first published: Sunday, November 7, 2021, 9:27 [IST]
Other articles published on Nov 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X