ಟಿ20 ವಿಶ್ವಕಪ್ 2021: ಇಂಗ್ಲೆಂಡ್ ವಿರುದ್ಧ ಭಾರತದ ಅಭ್ಯಾಸ ಪಂದ್ಯ ರದ್ದು

ಟಿ20 ವಿಶ್ವಕಪ್‌ನ ಆರಂಭಕ್ಕೂ ಮುನ್ನ ಭಾರತ ಎರಡು ಅಭ್ಯಾಸ ಪಂದ್ಯವನ್ನು ಆಡಲಿದೆ. ಈಗಾಗಲೇ ನಿಗದಿಯಾಗಿರುವಂತೆ ಮೊದಲ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಅಕ್ಟೋಬರ್ 18ರಂದು ಇಂಗ್ಲೆಂಡ್ ತಂಡದ ವಿರುದ್ಧ ಸೆಣೆಸಾಡಬೇಕಿತ್ತು. ಬಳಿಕ ಅಕ್ಟೋಬರ್ 20ರಂದು ಆಸ್ಟ್ರೇಲಿಕಯಾ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲು ಸಮಯ ನಿಗದಿಯಾಗಿತ್ತು.

ಆದರೆ ಈಗ ಈ ಅಭ್ಯಾಸ ಪಂದ್ಯಗಳಲ್ಲಿ ಬದಲಾವಣೆ ಮಾಡಲಾಗಿದೆ. ಮೊದಲ ಅಭ್ಯಾಸ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ 18ರಂದು ದುಬೈ ಕ್ರೀಡಾಂಗಣದಲ್ಲಿ ಭಾರತ ಆಡಲಿದೆ. ಭಾರತದ ಎರಡನೇ ಅಭ್ಯಾಸ ಪಂದ್ಯ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಕ್ಟೋಬರ್ 20ರಂದು ದುಬೈನಲ್ಲಿ ನಡೆಯಲಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಅಭ್ಯಾಸ ಪಂದ್ಯ ಕೂಡ ಸಂಜೆ 7:30ಕ್ಕೆ ಆರಂಭವಾಗಲಿದೆ.

ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು!ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕರಾಗಿ ವಿರಾಟ್ ಕೊಹ್ಲಿ ಅಂಕಿ-ಅಂಶಗಳು!

ಇನ್ನು ಭಾರತದ ಈ ಅಭ್ಯಾಸ ಪಮದ್ಯದಲ್ಲಿ ಮತ್ತೊಂದು ಬದಲಾವಣೆ ಮಾಡಲಾಗಿದೆ. ಭಾರತದ ಅಭ್ಯಾಸ ಪಂದ್ಯಗಳ ಆಡುವ ತಾಣವನ್ನು ಮೊದಲ ವೇಳಾಪಟ್ಟಿಯ ಪ್ರಕಾರ ಭಾರತ ತನ್ನ ಅಭ್ಯಾಸ ಪಂದ್ಯಗಳನ್ನು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಬೇಕಿತ್ತು. ಆದರೆ ಈಗ ಈ ಅಭ್ಯಾಸ ಪಂದ್ಯವನ್ನು ಐಸಿಸಿ ಅಕಾಡೆಮಿ ಮೈದಾನದಲ್ಲಿ ಆಯೋಜನೆ ಮಾಡಲಾಗಿದೆ.

ಈ ಬದಲಾದ ವೇಳಾಪಟ್ಟಿಯ ಪ್ರಕಾರ ಇಂಗ್ಲೆಂಡ್ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 18ರಂದು ಟಾಲೆರೆನ್ಸ್ ಓವಲ್‌ನಲ್ಲಿ ಆಡಲಿದೆ. ಇಂಗ್ಲೆಂಡ್ ತಂಡದ ಎರಡನೇ ಅಭ್ಯಾಸ ಪಂದ್ಯ ಅಕ್ಟೋಬರ್ 20ರಂದು ನ್ಯೂಜಿಲೆಂಡ್ ತಂಡದ ವಿರುದ್ಧ ನಡೆಯಲಿದೆ. ಎರಡನೇ ಪಂದ್ಯ ಅಬುದಾಬಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!ಪಂಜಾಬ್ ಕಿಂಗ್ಸ್‌ ಬಿಟ್ಟು ಹೊರಬರುವ ಕೆಎಲ್ ರಾಹುಲ್‌ಗೆ ನಾಯಕ ಸ್ಥಾನ ನೀಡಲು ಸಿದ್ಧವಾಗಿವೆ ಈ 3 ತಂಡಗಳು!

ಅಭ್ಯಾಸ ಪಂದ್ಯಗಳ ಪರಿಷ್ಕೃತ ಪಟ್ಟಿ ಹೀಗಿದೆ

ಐರ್ಲೆಂಡ್ vs ಪಪುವಾ ನ್ಯೂಗಿನಿ, ದಿನಾಂಕ: ಅಕ್ಟೋಬರ್ 12, ಸಮಯ 3:30 PM , ಅಬುಧಾಬಿ
ಬಾಂಗ್ಲಾದೇಶ vs ಶ್ರೀಲಂಕಾ, ದಿನಾಂಕ: ಅಕ್ಟೋಬರ್ 12, ಸಮಯ 7:30 PM, ಟಾಲೆರೆನ್ಸ್ ಓವಲ್‌
ನಮೀಬಿಯಾ vs ಒಮನ್, ದಿನಾಂಕ: ಅಕ್ಟೋಬರ್ 12, ಸಮಯ 7:30 PM, ದುಬೈ
ಸ್ಕಾಟ್ಲೆಂಡ್ vs ನೆದರ್ಲ್ಯಾಂಡ್ಸ್, ದಿನಾಂಕ: ಅಕ್ಟೋಬರ್ 12, ಸಮಯ 7:30 PM, ಅಬುಧಾಬಿ
ಪಪುವಾ ನ್ಯೂಗಿನಿ vs ಶ್ರೀಲಂಕಾ, ದಿನಾಂಕ: ಅಕ್ಟೋಬರ್ 14, ಸಮಯ 11:30 AM, ಟಾಲೆರೆನ್ಸ್ ಓವಲ್‌
ಬಾಂಗ್ಲಾದೇಶ vs ಐರ್ಲೆಂಡ್, ಅಕ್ಟೋಬರ್ 14, ಸಮಯ 11:30 AM, ಅಬುಧಾಬಿ
ನಮೀಬಿಯಾ vs ಸ್ಕಾಟ್ಲೆಂಡ್, ದಿನಾಂಕ: ಅಕ್ಟೋಬರ್ 14, ಸಮಯ 11:30 AM, ದುಬೈ
ನೆದರ್ಲೆಂಡ್ vs ಒಮನ್, ದಿನಾಂಕ: ಅಕ್ಟೋಬರ್ 14, ಸಮಯ 11:30 AM, ದುಬೈ

ABD ಮುಂದಿನ IPL ನಲ್ಲಿ RCB ಯಲ್ಲಿ ಇರ್ತಾರಾ? ಇಲ್ವಾ? | Oneindia Kannada

'ಈತ ಮಾತನಾಡುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ'; ಐಪಿಎಲ್ ಕಳಪೆ ನಾಯಕನ ವಿರುದ್ಧ ವ್ಯಂಗ್ಯವಾಡಿದ ಸೆಹ್ವಾಗ್
ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್, ದಿನಾಂಕ: ಅಕ್ಟೋಬರ್ 18, , ಸಮಯ 3:30 PM, ಅಬುಧಾಬಿ
ಅಫ್ಘಾನಿಸ್ತಾನ vs ದಕ್ಷಿಣ ಆಫ್ರಿಕಾ, ದಿನಾಂಕ: ಅಕ್ಟೋಬರ್ 18, ಸಮಯ 3:30 PM, ದುಬೈ
ಇಂಗ್ಲೆಂಡ್ vs ಪಾಕಿಸ್ತಾನ, ದಿನಾಂಕ: ಅಕ್ಟೋಬರ್ 18, ಸಮಯ 7:30 PM, ಟಾಲೆರೆನ್ಸ್ ಓವಲ್‌
ಆಸ್ಟ್ರೇಲಿಯಾ vs ಭಾರತ, ದಿನಾಂಕ: ಅಕ್ಟೋಬರ್ 18, ಸಮಯ 7:30 PM , ದುಬೈ
ಪಾಕಿಸ್ತಾನ vs ವೆಸ್ಟ್ ಇಂಡೀಸ್, ದಿನಾಂಕ: ಅಕ್ಟೋಬರ್ 20, ಸಮಯ 3:30 PM, ಟಾಲೆರೆನ್ಸ್ ಓವಲ್‌
ಅಫ್ಘಾನಿಸ್ತಾನ vs ಆಸ್ಟ್ರೇಲಿಯಾ, ದಿನಾಂಕ: ಅಕ್ಟೋಬರ್ 20, ಸಮಯ 3:30 PM, ದುಬೈ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 13 - October 23 2021, 03:30 PM
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, October 12, 2021, 17:28 [IST]
Other articles published on Oct 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X