ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ 2021: ಶ್ರೀಲಂಕಾಗೆ ಸುಲಭ ತುತ್ತಾದ ನೆದರ್ಲೆಂಡ್ಸ್‌

T20 worldcup 2021, Match 12: SriLanka Won against Netherland by 8 wickets

ಕಳೆದ ಭಾನುವಾರದಿಂದ ಆರಂಭವಾಗಿರುವ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತು ಇಂದಿಗೆ ಮುಕ್ತಾಯವಾಗಿದೆ. ಈ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಇಂದು ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ ತಂಡಗಳು ಸೆಣಸಾಟ ನಡೆಸಿದವು.

ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡು ನೆದರ್ಲೆಂಡ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿತ್ತು . ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ 10 ಓವರ್‌ಗಳಲ್ಲಿ 44 ರನ್‌ಗಳಿಗೆ ಆಲ್ ಔಟ್ ಆಯಿತು.

ಇನ್ನು ನೆದರ್ಲೆಂಡ್ಸ್ ತಂಡ ನೀಡಿದ 45 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ ತಂಡ 7.1 ಓವರ್‌ಗಳಲ್ಲಿ 45 ರನ್ ಗಳಿಸುವುದರ ಮೂಲಕ 8 ವಿಕೆಟ್‍ಗಳ ಗೆಲುವನ್ನು ಸಾಧಿಸಿದೆ. ಇನ್ನು ಈ ಪಂದ್ಯ ಮುಗಿಯುವ ಮೂಲಕ ಇದೀಗ ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿಗೆ ತೆರೆಬಿದ್ದಿದ್ದು ನಾಳೆಯಿಂದ ( ಅಕ್ಟೋಬರ್ 23 ) ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿವೆ. ಶ್ರೀಲಂಕಾ ಪರ 3 ಓವರ್‌ ಬೌಲಿಂಗ್ ಮಾಡಿ ಕೇವಲ 7 ರನ್ ನೀಡಿ, 1 ಮೇಡನ್ ಸಹಿತ 3 ವಿಕೆಟ್ ಪಡೆದ ಲಹಿರು ಕುಮಾರ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇನ್ನುಳಿದಂತೆ ಪ್ರಮುಖ ಆಟಗಾರ ವನಿಂದು ಹಸರಂಗ ಕೂಡ 3 ಓವರ್ ಬೌಲಿಂಗ್ ಮಾಡಿ ಕೇವಲ 9 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಹಾಗೂ ಮಹೀಶ್ ತೀಕ್ಷಣ 2 ವಿಕೆಟ್ ಮತ್ತು ದುಷ್ಮಂತ ಚಮೀರ 1 ವಿಕೆಟ್ ಪಡೆದರು.

ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್ಆಸ್ಟ್ರೇಲಿಯಾಗಿದೆ ಆ ತಂಡಗಳ ಹೊಡೆತ; ಕಪ್ ಗೆಲ್ಲಬಹುದಾದ 2 ಬಲಿಷ್ಠ ತಂಡಗಳಿವು: ಶೇನ್ ವಾರ್ನ್

ಇನ್ನು ಈ ಪಂದ್ಯ ಆರಂಭವಾಗುವ ಮುನ್ನವೇ 2 ಪಂದ್ಯಗಳನ್ನು ಗೆದ್ದು ಉತ್ತಮ ನೆಟ್ ರನ್ ರೇಟ್ ಹೊಂದಿದ್ದ ಕಾರಣದಿಂದ ಶ್ರೀಲಂಕಾ ಯಶಸ್ವಿಯಾಗಿ ಸೂಪರ್ 12 ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತ್ತು. ಅತ್ತ ಈ ಪಂದ್ಯಕ್ಕೂ ಮುನ್ನ ಆಡಿದ ಎಲ್ಲಾ 2 ಪಂದ್ಯಗಳಲ್ಲಿಯೂ ಸೋತಿದ್ದ ನೆದರ್ಲೆಂಡ್ಸ್ ತಂಡ ಸೂಪರ್ 12 ಹಂತಕ್ಕೆ ಪ್ರವೇಶಿಸುವ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿತ್ತು.

ಸದ್ಯ ಪ್ರಸಕ್ತ ಸಾಲಿನ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಎ ಗುಂಪಿನ ತಂಡಗಳ ಪೈಕಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ತಂಡ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಗಿದೆ. ಹೌದು, ಶ್ರೀಲಂಕಾ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ತಾನು ಆಡಿದ 3 ಪಂದ್ಯಗಳ ಪೈಕಿ 3ರಲ್ಲಿಯೂ ಜಯಗಳಿಸಿದೆ. ಹೀಗೆ ಟೂರ್ನಿಯ ಅರ್ಹತಾ ಸುತ್ತಿನಲ್ಲಿ 6 ಅಂಕಗಳನ್ನು ಪಡೆದುಕೊಂಡು ಉತ್ತಮ ಪ್ರದರ್ಶನ ನೀಡಿರುವ ಶ್ರೀಲಂಕಾ ಸೂಪರ್ 12 ಹಂತಕ್ಕೆ ಲಗ್ಗೆ ಇಟ್ಟಿದ್ದು ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ಸೌತ್ ಆಫ್ರಿಕಾ ತಂಡಗಳಿರುವ ಗ್ರೂಪ್ 1ನಲ್ಲಿ ಸ್ಥಾನ ಪಡೆದುಕೊಂಡಿದೆ.

KL ರಾಹುಲ್ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಸಿದ ಪಾಕ್ ಕೋಚ್ | Oneindia Kannada

ಇನ್ನು ಈ ಪಂದ್ಯಕ್ಕೂ ಮುನ್ನ ನಡೆದ ಐರ್ಲೆಂಡ್ ಮತ್ತು ನಮೀಬಿಯಾ ತಂಡಗಳ ನಡುವಿನ ಪಂದ್ಯದಲ್ಲಿ ನಮೀಬಿಯಾ ತಂಡ ಐರ್ಲೆಂಡ್ ವಿರುದ್ಧ 8 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸೂಪರ್ 12 ಸುತ್ತಿಗೆ ಲಗ್ಗೆ ಇಟ್ಟಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 125 ರನ್ ಗಳಿಸುವುದರ ಮೂಲಕ ಎದುರಾಳಿ ನಮೀಬಿಯಾ ತಂಡಕ್ಕೆ 126 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಕೂಡ ನಮೀಬಿಯಾ ಯಶಸ್ವಿಯಾಗಿ 18.3 ಓವರ್‌ಗಳಲ್ಲಿ ಚೇಸ್ ಮಾಡುವ ಮೂಲಕ 8 ವಿಕೆಟ್‍ಗಳ ಜಯ ಸಾಧಿಸಿ ಸೂಪರ್ 12 ಹಂತಕ್ಕೆ ಅಧಿಕೃತವಾಗಿ ಪ್ರವೇಶವನ್ನು ಪಡೆದುಕೊಂಡು ಗ್ರೂಪ್ 2ಗೆ ಸೇರಿಕೊಂಡಿದೆ.

Story first published: Saturday, October 23, 2021, 9:27 [IST]
Other articles published on Oct 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X