ಟಿ20 ವಿಶ್ವಕಪ್‌ 2021: ಟೂರ್ನಿ ಆರಂಭಕ್ಕೂ ಮುನ್ನವೇ ದಾಖಲೆ ಬರೆದ ಭಾರತ vs ಪಾಕಿಸ್ತಾನ ಪಂದ್ಯ!

ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಯುಎಇಯಲ್ಲಿ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯತ್ತ ಇದೆ. ಈ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿದ್ದು, ಪ್ಲೇ ಆಫ್ ಸುತ್ತಿನ ಪಂದ್ಯಗಳಿಗೆ ದಿನಗಣನೆ ಆರಂಭವಾಗಿದೆ. ಇದೇ ಅಕ್ಟೋಬರ್ 15ರಂದು ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬೀಳಲಿದ್ದು, ಇದೇ ಯುಎಇಯಲ್ಲಿ ಅಕ್ಟೋಬರ್ 17ರಿಂದ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.

ಹೌದು, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ತೆರೆ ಬೀಳುವ ಬೆನ್ನಲ್ಲೇ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗಲಿದ್ದು ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಸಾಲು ಸಾಲು ಮನರಂಜನೆಯ ರಸದೌತಣವೇ ದೊರೆಯಲಿದೆ. ಅದರಲ್ಲಿಯೂ ಅಕ್ಟೋಬರ್ 24ರ ಭಾನುವಾರದಂದು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಮತ್ತು ಕುತೂಹಲಗಳು ಹುಟ್ಟುಕೊಂಡಿವೆ. ಯಾಕೆಂದರೆ ಆ ದಿನ ನಡೆಯಲಿರುವ ಪಂದ್ಯದಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ.

ಟಿ20 ವಿಶ್ವಕಪ್‌ಗೂ ಮುನ್ನವೇ ಉಂಟಾಗಿರುವ ಈ 4 ಸಮಸ್ಯೆಗಳು ಭಾರತದ ಟ್ರೋಫಿ ಕನಸಿಗೆ ಮುಳುವಾಗಬಹುದು!ಟಿ20 ವಿಶ್ವಕಪ್‌ಗೂ ಮುನ್ನವೇ ಉಂಟಾಗಿರುವ ಈ 4 ಸಮಸ್ಯೆಗಳು ಭಾರತದ ಟ್ರೋಫಿ ಕನಸಿಗೆ ಮುಳುವಾಗಬಹುದು!

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ಸಾಕು ಕೇವಲ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲದೆ ಬೇರೆ ದೇಶಗಳ ಕ್ರಿಕೆಟ್ ಅಭಿಮಾನಿಗಳು ಸಹ ಕ್ರೀಡಾಂಗಣಕ್ಕೆ ಬಂದು ಪಂದ್ಯವನ್ನು ವೀಕ್ಷಿಸುತ್ತಾರೆ. ಕೇವಲ ಕ್ರೀಡಾಂಗಣದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ದೂರದರ್ಶನಗಳ ಮೂಲಕ ನೇರ ಪ್ರಸಾರದಲ್ಲಿ ಈ ತಂಡಗಳ ನಡುವಿನ ಪಂದ್ಯವನ್ನು ವೀಕ್ಷಿಸುವಷ್ಟು ಬೇರೆ ಯಾವುದೇ ತಂಡಗಳ ನಡುವಿನ ಪಂದ್ಯವನ್ನು ಕೂಡ ವೀಕ್ಷಿಸುವುದಿಲ್ಲ ಎಂದರೆ ತಪ್ಪಾಗಲಾರದು.

ಈ ಎರಡೂ ತಂಡಗಳು ಸಾಮಾನ್ಯ ಪಂದ್ಯಗಳಲ್ಲಿಯೇ ಮುಖಾಮುಖಿಯಾಗುತ್ತಿವೆ ಎಂದರೆ ದೊಡ್ಡ ಮಟ್ಟದ ಕುತೂಹಲ ಮತ್ತು ಕ್ರೇಜ್ ಹುಟ್ಟಿಕೊಂಡುಬಿಡುತ್ತದೆ. ಅಂಥದ್ದರಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಲಿವೆ ಎಂದರೆ ಆ ಕ್ರೇಜ್ ಮತ್ತು ಕುತೂಹಲ ಎಷ್ಟರಮಟ್ಟಿಗೆ ಇರುತ್ತದೆ ಎಂಬುದು ನಿಮ್ಮ ಊಹೆಗೆ ಬಿಟ್ಟದ್ದು.

ಇನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಈ ಎರಡೂ ತಂಡಗಳ ಮುಖಾಮುಖಿಯ ಪಂದ್ಯ ಟೂರ್ನಿ ಆರಂಭವಾಗುವ ಮುನ್ನವೇ ದೊಡ್ಡ ಮಟ್ಟದ ಸದ್ದು ಮಾಡಿದೆ. ಹೌದು, ಇನ್ನೂ ಸಹ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಉದ್ಘಾಟನೆ ಆಗಿಯೇ ಇಲ್ಲ ಅಷ್ಟರಲ್ಲಿಯೇ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಎಲ್ಲ ಟಿಕೆಟ್‌ಗಳು ಮಾರಾಟವಾಗಿಬಿಟ್ಟಿವೆ.

'ಧೋನಿ ಸಿಎಸ್‌ಕೆ ಪರ ಏನೂ ಮಾಡಿಲ್ಲ, ಆದರೂ ತಂಡ ಪ್ಲೇಆಫ್ ತಲುಪಿದೆ' ಎಂದ ಮಾಜಿ ಕ್ರಿಕೆಟಿಗ'ಧೋನಿ ಸಿಎಸ್‌ಕೆ ಪರ ಏನೂ ಮಾಡಿಲ್ಲ, ಆದರೂ ತಂಡ ಪ್ಲೇಆಫ್ ತಲುಪಿದೆ' ಎಂದ ಮಾಜಿ ಕ್ರಿಕೆಟಿಗ

ಪ್ಲಾಟಿನಮ್ಲಿಸ್ಟ್ ಎಂಬ ವೆಬ್ ತಾಣದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಟಿಕೆಟ್‌ಗಳನ್ನು ಆನ್ ಲೈನ್ ಮುಖಾಂತರ ಮಾರಾಟ ಮಾಡಲಾಗುತ್ತದೆ. ಹೀಗೆ ಈ ವೆಬ್ ತಾಣದಲ್ಲಿ ಕಳೆದ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಪಂದ್ಯದ ಟಿಕೆಟ್‌ಗಳ ಬುಕಿಂಗ್ ತೆರೆಯಲಾಯಿತು. ಹೀಗೆ ದುಬೈ ಕ್ರೀಡಾಂಗಣದ ವಿವಿಧ ಹಂತಗಳ ಟಿಕೆಟ್‌ಗಳ ಬುಕಿಂಗ್ ಆರಂಭವಾದ ಕೂಡಲೇ ಸಾವಿರಾರು ಕ್ರಿಕೆಟ್ ಅಭಿಮಾನಿಗಳು ವೆಬ್ ತಾಣಕ್ಕೆ ಬಂದು ವೇಗವಾಗಿ ಟಿಕೆಟ್ ಖರೀದಿಸಲು ಆರಂಭಿಸಿದರು.

Dhoni ಆಟದ ಬಗ್ಗೆ ಪಂದ್ಯ ಮುಗಿದ ನಂತರ Fleming ಹೇಳಿದ್ದೇನು | Oneindia Kannada

ಆಶ್ಚರ್ಯವೇನೆಂದರೆ ಕೇವಲ ಒಂದೇ ಒಂದು ಗಂಟೆಯಲ್ಲಿ ಪಂದ್ಯದ ಎಲ್ಲ ಟಿಕೆಟ್‌ಗಳೂ ಕೂಡ ಮಾರಾಟವಾಗಿಬಿಟ್ಟಿವೆ. ಜನರಲ್, ಜನರಲ್ ಈಸ್ಟ್, ಪ್ಲಾಟಿನಮ್, ಪೆವಿಲಿಯನ್ ಈಸ್ಟ್ ಮತ್ತು ಪ್ಲಾಟಿನಮ್ ವಿಭಾಗದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿದ್ದು ಟಿಕೆಟ್ ಖರೀದಿಸಲು ಪ್ರಯತ್ನಿಸಿ ಸಿಗದ ಹಲವಾರು ಕ್ರಿಕೆಟ್ ಅಭಿಮಾನಿಗಳು ಯಾರಾದರೂ ಟಿಕೆಟ್ ಮಾರಾಟ ಮಾಡಲು ತಯಾರಿದ್ದೀರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿಕೆಗಳನ್ನು ಇಡುತ್ತಿದ್ದಾರೆ. ಹೀಗೆ ಪಂದ್ಯ ಆರಂಭವಾಗಲು ಇನ್ನೂ 20 ದಿನಗಳು ಬಾಕಿ ಇರುವಾಗಲೇ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿರುವುದು ಆ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳಿಗೆ ಇರುವ ಆಸಕ್ತಿಯನ್ನು ಎತ್ತಿಹಿಡಿದಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, October 5, 2021, 13:16 [IST]
Other articles published on Oct 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X