ಟಿ20 : ಸೋಲಿನ ಕಹಿ ಜತೆಗೆ ದಕ್ಷಿಣ ಆಫ್ರಿಕಾಕ್ಕೆ ದೊಡ್ದ ಆಘಾತ

Posted By:
T20i series: AB de Villiers Ruled Out With Knee Injury

ಜೋಹಾನ್ಸ್ ಬರ್ಗ್, ಫೆಬ್ರವರಿ 19: ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ಸೋಲು ಕಂಡಿರುವ ಅತಿಥೇಯ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ಎಬಿ ಡಿ ವಿಲಿಯರ್ಸ್ ಅವರು ಗಾಯಾಳುವಾಗಿದ್ದು, ಸರಣಿಯಿಂದ ಹೊರ ನಡೆದಿದ್ದಾರೆ.

ಮೂರು ಪಂದ್ಯಗಳ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 28 ರನ್ ಅಂತರದಿಂದ ಸೋಲು ಕಂಡಿತು. ಸೆಂಚೂರಿಯನ್ ನಲ್ಲಿ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಡಿ'ವಿಲಿಯರ್ಸ್ ಅವರು ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದರು.

ಹೀಗಾಗಿ, ಟಿ -20 ಸರಣಿಯಿಂದ ಹೊರಗುಳಿದಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ದಕ್ಷಿಣ ಆಫ್ರಿಕಾ ತಂಡದ ವೈದ್ಯ ಮೊಹಮ್ಮದ್ ಮೂಸಾಜೀ ಹೇಳಿದರು.

Story first published: Monday, February 19, 2018, 11:59 [IST]
Other articles published on Feb 19, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ