ಭಾರತ vs ನ್ಯೂಜಿಲ್ಯಾಂಡ್: ಅಂತಿಮ ಪಂದ್ಯವನ್ನು ಗೆದ್ದು ವಿಶ್ವದಾಖಲೆಯತ್ತ ಟೀಮ್ ಇಂಡಿಯಾ ಚಿತ್ತ

ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಇಂದು ಅಂತಿಮ ಪಂದ್ಯ ನಡೆಯಲಿದ್ದು ಈ ಪಂದ್ಯವನ್ನೂ ಗೆದ್ದು ಸರಣಿಯನ್ನು ಕ್ಲೀನ್‌ ಸ್ವೀಪ್ ಮಾಡುವ ಹುಮ್ಮಸ್ಸಿನಲ್ಲಿದೆ.

ಮೌಂಟ್‌ ಮಾಂಗುನಿಯಲ್ಲಿ ನಡೆಯಲಿರುವ ಅಂತಿಮ ಪಂದ್ಯವೂ ಟೀಮ್ ಇಂಡಿಯಾ ಪಾಲಾದರೆ ಟೀಮ್ ಇಂಡಿಯಾ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆಗೆ ಪಾತ್ರವಾಗಲಿದೆ. ಹೀಗಾಗಿ ಈ ವಿಶ್ವ ದಾಖಲೆಯ ಮೇಲೆ ಟೀಮ್ ಇಂಡಿಯಾ ಕಣ್ಣಿಟ್ಟಿದೆ.

ಟಿ20 ಇತಿಹಾಸದಲ್ಲಿ ಈವರೆಗೆ 5 ಮತ್ತು ಅದಕ್ಕೂ ಹೆಚ್ಚಿನ ಪಂದ್ಯಗಳ ಸರಣಿ ನಡೆದಿರುವುದು ನಾಲ್ಕನೇ ಬಾರಿ. ಟಿ20 ಸರಣಿಯಲ್ಲಿ ಈವರೆಗೂ ಯಾವ ತಂಡವೂ ಎದುರಾಳಿಯನ್ನು 5-0 ಅಂತರದಿಂದ ಮಣಿಸಿಲ್ಲ. ಭಾರತಕ್ಕೆ ಈ ಸರಣಿಯಲ್ಲಿ ಈ ದಾಖಲೆಯನ್ನು ಮಾಡುವ ಅಪೂರ್ವ ಅವಕಾಶವೊಂದಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದಕ್ಕೆ ಇಂದು ಉತ್ತರ ದೊರೆಯಲಿದೆ.

ಈ ಸರಣಿಗೂ ಮುನ್ನ ಟಿ20ಯಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಟೀಮ್ ಇಂಡಿಯಾ ಕಳಪೆ ದಾಖಲೆಯನ್ನು ಹೊಂದಿತ್ತು. ಮುಖಾಮುಖಿಯಾಗಿದ್ದ 11 ಪಂದ್ಯಗಳಲ್ಲಿ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್‌ಗೆ 8 ಬಾರಿ ಮುಖಾಮುಖಿಯಾಗಿತ್ತು. ಹೀಗಾಗಿ ಈ ಸರಣಿಯೂ ಟೀಮ್ ಇಂಡಿಯಾ ಪಾಲಿಗೆ ಕಠಿಣವಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಟೀಮ್ ಇಂಡಿಯಾ ಆಟಗಾರರು ಅದ್ಭುತ ಪ್ರದರ್ಶನವನ್ನು ನೀಡಿ ಕೀವಿಸ್ ಪಡೆಯನ್ನು ಮಣಿಸಿದ್ದಾರೆ.

ಇಂದು ಮೌಂಟ್‌ ಮಾಂಗುನಿಯಲ್ಲಿ ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ನ್ಯೂಜಿಲ್ಯಾಂಡ್ ಗೆದ್ದು ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳು ಪ್ರಯತ್ನಿಸಿದರೆ ಟೀಮ್ ಇಂಡಿಯಾ ವಿಶ್ವದಾಖಲೆ ನಿರ್ಮಿಸಲು ಹವಣಿಸುತ್ತಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Sunday, February 2, 2020, 10:48 [IST]
Other articles published on Feb 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X