ಭಾರತ vs ಇಂಗ್ಲೆಂಡ್: ಲಾರ್ಡ್ಸ್ ಗೆದ್ದರೂ ನಿರಾಳವಾಗುವಂತಿಲ್ಲ ಟೀಮ್ ಇಂಡಿಯಾ

ಇಂಗ್ಲೆಂಡ್ ಪರವಾಗಿ ಬ್ಯಾಟ್ ಬೀಸಿದ ನಾಸಿರ್ ಹುಸೇನ್ | Oneindia Kannada

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಈಗ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಮಾಂಚನಕಾರಿ ಜಯ ಸಾಧಿಸಿದೆ. ಈ ಗೆಲುವು ಟೀಮ್ ಇಂಡಿಯಾ ಪಾಲಿಗೆ ಈ ಇಂಗ್ಲೆಂಡ್ ಪ್ರವಾಸದಲ್ಲಿ ಅತಿ ದೊಡ್ಡ ಸ್ಪೂರ್ತಿ ನೀಡಿದೆ. ಈ ಮೂಲಕ ಇನ್ನುಳಿದ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಪಡೆ ಆತ್ಮವಿಶ್ವಾಸದಿಂದ ಹೋರಾಟವನ್ನು ನಡೆಸಲಿದೆ.

ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಾಟಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿಯೂ ಭಾರತ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದರೆ ಅಂತಿಮ ದಿನದಾಟಕ್ಕೆ ಮಳೆ ಸಂಪೂರ್ಣವಾಗಿ ಅಡ್ಡಿಯಾಗಿದ್ದ ಕಾರಣ ಪಂದ್ಯವನ್ನು ಗೆಲ್ಲಲು ಸಾಧ್ಯವಾಗದೆ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಲಾರ್ಡ್ಸ್ ಪಂದ್ಯ ಸಾಕಷ್ಟು ಏರಿಳಿತಗಳ ಬಳಿಕ ಟೀಮ್ ಇಂಡಿಯಾ ರೋಮಾಂಚನಕಾರಿ ರೀತಿಯಲ್ಲಿ ಗೆದ್ದು ಬೀಗಿತ್ತು. ಟೀಮ್ ಇಂಡಿಯಾದ ಬೌಲರ್‌ಗಳು ಅಂತಿಮ ದಿನದಲ್ಲಿ ನೀಡಿದ ಪ್ರದರ್ಶನ ಈ ಪಂದ್ಯವನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸುದೀರ್ಘ ಕಾಲ ನೆನಪಿಟ್ಟುಕೊಳ್ಳುವಂತೆ ಮಾಡಿದೆ.

ಹಾಗಿದ್ದರೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಾಕಷ್ಟು ವಿಚಾರಗಳ ಬಗ್ಗೆ ಮತ್ತಷ್ಟು ಎಚ್ಚರವಹಿಸಬೇಕಿದೆ.

ವಿರಾಟ್ ಕೊಹ್ಲಿ ಪ್ರದರ್ಶನ : ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿ ಈವರೆಗಿನ ಆಟದಲ್ಲಿ ತಮ್ಮ ನೈಜ ಶೈಲಿಯ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟ್‌ನಿಂದ ಸರಾಗವಾಗಿ ರನ್‌ ಹರಿದುಬರುತ್ತಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿಯೂ ವಿರಾಟ್ ಕೊಹ್ಲಿ ಎಡವುತ್ತಿರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ಕಳೆದ ಈ ಸರಣಿಯ ಮೂರು ಪಂದ್ಯ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಕೂಡ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಈ ಮೂಲಕ ತಂಡಕ್ಕೆ ಹಿನ್ನಡೆಯಾಗಿದ್ದಾರೆ. ವಿರಾಟ್ ಕೊಹ್ಲಿ ಆದಷ್ಟು ಬೇಗನೆ ತಮ್ಮ ಲಯಕ್ಕೆ ಮರಳುವ ಅಗತ್ಯವಿದೆ.

ಪೂಜಾರ, ರಹಾನೆ ಫಾರ್ಮ್: ಟೀಮ್ ಇಂಡಿಯಾದ ಅನುಭವಿಗಳಾದ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯಾ ರಹಾನೆ ಕಳೆದ ಹಲವಾರು ಪಂದ್ಯಗಳಲ್ಲಿ ಸತತವಾಗಿ ವೈಫಲ್ಯ ಕಾಣುತ್ತಾ ಬಂದಿದ್ದಾರೆ. ಆದರೆ ಈ ಇಬ್ಬರು ಕೂಡ ಕಳೆದ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಮಾತ್ರ ಭರವಸೆಯ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಉಪ ನಾಯಕ ಅಜಿಂಕ್ಯಾ ರಹಾನೆ ಈ ಪಂದ್ಯದಲ್ಲಿ ಅರ್ಧ ಶತಕವನ್ನು ಗಳಿಸಿದ್ದರು. ಪೂಜಾರ ಹಾಗೂ ರಹಾನೆ ಜೋಡಿ ಲಾರ್ಡ್ಸ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕದ ಜೊತೆಯಾಟವನ್ನು ಕೂಡ ನೀಡಿ ಮಿಂಚಿದ್ದಾರೆ. ಈ ಪ್ರದರ್ಶನ ಮುಂದುವರಿಸಲು ಈ ಇಬ್ಬರು ಅನುಭವಿ ಆಟಗಾರರಿಗೆ ಸಾಧ್ಯವಾದಲ್ಲಿ ತಂಡಕ್ಕೆ ನಿಜಕ್ಕೂ ದೊಡ್ಡ ಬಲ ಸಿಕ್ಕಂತಾಗುತ್ತದೆ.

ಬೌಲರ್‌ಗಳಿಗೆ ಕಠಿಣ ಸವಾಲಾಗುತ್ತಿದ್ದಾರೆ ರೂಟ್: ಇಂಗ್ಲೆಂಡ್ ತಂಡ ದಾಂಡಿಗರ ವಿರುದ್ಧ ಭಾರತೀಯ ಬೌಲರ್‌ಗಳು ಸಂಪೂರ್ಣವಾಗಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಇಂಗ್ಲೆಂಡ್ ತಮಡದ ನಾಯಕ ಜೋ ರೂಟ್ ಮಾತ್ರ ವಿರಾಟ್ ಹುಡುಗರಿಗೆ ಕಠಿಣ ಸವಾಲಾಗುತ್ತಿದ್ದಾರೆ. ಈ ಸರಣಿಯಲ್ಲಿ ಜೋ ರೂಟ್ ನಾಲ್ಕು ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿದಿದ್ದಾರೆ. ಇದರಲ್ಲಿ ಅವರು ಗಳಿಸಿದ್ದು ಬರೊಬ್ಬರಿ 386 ರನ್‌ಗಳು. ಇದರಲ್ಲಿ ಎರಡು ಭರ್ಜರಿ ಶತಕ ಹಾಗೂ ಒಂದು ಅರ್ಧ ಶತಕ ಸೇರಿದೆ. ಲಾರ್ಡ್ಸ್ ಅಂಗಳದಲ್ಲಿ ನಡೆದ ಅಂತಿಮ ಇನ್ನಿಂಗ್ಸ್‌ನಲ್ಲಿ ಮಾತ್ರವೇ ಜೋ ರೂಟ್ ವಿಕೆಟ್‌ಅನ್ನು ಅಗ್ಗಕ್ಕೆ ಪಡೆಯಲು ಟೀಮ್ ಇಂಡಿಯಾ ಬೌಲರ್‌ಗಳು ಸಫಲವಾಗಿದ್ದರು. ಹೀಗಾಗಿ ಜೋ ರೂಟ್ ಅವರನ್ನು ಕಟ್ಟಿಹಾಕಲು ಟೀಮ್ ಇಂಡಿಯಾ ಪ್ರತ್ಯೇಕ ರಣತಂತ್ರವನ್ನು ಹೆಣೆಯಲೇ ಬೇಕಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, August 18, 2021, 23:54 [IST]
Other articles published on Aug 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X