ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಕಪ್ಪುಪಟ್ಟಿ ಧರಿಸಿ ಮೈದಾನಕ್ಕಿಳಿಯಲಿದೆ ಕೊಹ್ಲಿ ಪಡೆ

Team India to wear black arm bands in Test match against West Indies

ಆ್ಯಂಟಿಗುವಾ, ಆಗಸ್ಟ್ 24: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಶನಿವಾರ (ಆಗಸ್ಟ್ 24) ಆತಿಥೇಯರ ವಿರುದ್ಧದ 1ನೇ ಟೆಸ್ಟ್‌ನ 3ನೇ ದಿನದಾಟ ಆಡಲಿದೆ. ಈ ವೇಳೆ ಭಾರತ ತಂಡ ಜೆರ್ಸಿ ಜೊತೆಗೆ ಕಪ್ಪುಪಟ್ಟಿ ಧರಿಸಿ ಮೈದಾನಕ್ಕಿಳಿಯಲಿದೆ. ಮಾಜಿ ಕೇಂದ್ರ ಸಚಿವ, ಅರುಣ್ ಜೇಟ್ಲಿಯವರ ನಿಧನಕ್ಕೆ ಸಂತಾಪ ಸೂಚಿಸಿ ಕೊಹ್ಲಿ ಪಡೆ ಕಪ್ಪುಪಟ್ಟಿ ಧರಿಸಲಿದೆ.

ಕನಿಷ್ಠ ರನ್‌ಗೆ ಆಲೌಟ್ ಆಗಿ ದಾಖಲೆ ಬರೆದ ವಿಶ್ವ ಚಾಂಪಿಯನ್ ಇಂಗ್ಲೆಂಡ್!ಕನಿಷ್ಠ ರನ್‌ಗೆ ಆಲೌಟ್ ಆಗಿ ದಾಖಲೆ ಬರೆದ ವಿಶ್ವ ಚಾಂಪಿಯನ್ ಇಂಗ್ಲೆಂಡ್!

ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ, ಡೆಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್‌ನ (ಡಿಡಿಸಿಎ) ಮಾಜಿ ಅಧ್ಯಕ್ಷ ಮತ್ತು ಬೋರ್ಡ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮಾಜಿ ಉಪಾಧ್ಯಕ್ಷರೂ ಹೌದು. ಹೀಗಾಗಿ ಅಗಲಿದ ರಾಷ್ಟ್ರನಾಯಕನಿಗೆ ಗೌರವ ಸೂಚಕವಾಗಿ ಟೀಮ್ ಇಂಡಿಯಾ ಕಪ್ಪು ಪಟ್ಟಿ ಧರಿಸಿ ಟೆಸ್ಟ್‌ನಲ್ಲಿ ಪಾಲ್ಗೊಳ್ಳಲಿದೆ. 66ರ ಹರೆಯದ ಜೇಟ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು.

ಭಾರತ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್, 3ನೇ ದಿನ, Live ಸ್ಕೋರ್‌ಕಾರ್ಡ್

1
46250

ಆ್ಯಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಇತ್ತಂಡಗಳು ಮೊದಲ ಟೆಸ್ಟ್‌ ಪಂದ್ಯವನ್ನಾಡುತ್ತಿವೆ. ಶುಕ್ರವಾರ (ಆಗಸ್ಟ್ 23) 2ನೇ ದಿನದಾಟದ ಅಂತ್ಯಕ್ಕೆ ಮೊದಲ ಇನ್ನಿಂಗ್ಸ್‌ಗೆ ಇಳಿದಿದ್ದ ಕೆರಿಬಿಯನ್ನರು 59 ಓವರ್‌ಗೆ 8 ವಿಕೆಟ್ ಕಳೆದು 189 ರನ್ ಪೇರಿಸಿದ್ದರು.

ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ಬರೆದ ಕೃಷ್ಣಪ್ಪ ಗೌತಮ್!

ಟಾಸ್ ಸೋತು ಇಳಿಸಲ್ಪಟ್ಟ ಭಾರತ, ಮೊದಲ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ 81, ಕೆಎಲ್ ರಾಹುಲ್ 44, ರವೀಂದ್ರ ಜಡೇಜಾ 58 ರನ್‌ನೊಂದಿಗೆ 96.4 ಓವರ್‌ಗೆ 297 ರನ್ ಮಾಡಿತ್ತು. ಭಾರತದ ಇನ್ನಿಂಗ್ಸ್ ವೇಳೆ ವಿಂಡೀಸ್‌ನ ಕೆಮರ್ ರೋಚ್ 4, ಶ್ಯಾನನ್ ಗೇಬ್ರಿಯಲ್ 3 ವಿಕೆಟ್ ಪಡೆದರೆ, ವಿಂಡೀಸ್ ಇನ್ನಿಂಗ್ಸ್‌ನಲ್ಲಿ ವೇಗಿ ಇಶಾಂತ್ ಶರ್ಮಾ 5 ವಿಕೆಟ್‌ನೊಂದಿಗೆ ಪಾರಮ್ಯ ಮೆರೆದಿದ್ದಾರೆ.

Story first published: Saturday, August 24, 2019, 17:42 [IST]
Other articles published on Aug 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X