ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್‌ ಆಟದಲ್ಲಿ ಎಂಎಸ್‌ ಧೋನಿ ಛಾಯೆ ಇದೆ: ಆರ್ ಶ್ರೀಧರ್

ರಿಷಬ್ ಪಂತ್ ಅವರ ಕ್ರಿಕೆಟ್ ಆಡುವ ರೀತಿಯಲ್ಲಿ ಎಂಎಸ್ ಧೋನಿಯ ಛಾಯೆಗಳಿವೆ ಎಂದು ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅಭಿಪ್ರಾಯಪಟ್ಟಿದ್ದಾರೆ. ಯುವಕರು ದಿಗ್ಗಜ ಕ್ರಿಕೆಟಿಗನನ್ನು ಆರಾಧಿಸುತ್ತಾ ಬೆಳೆದಿರುವುದು ಆಶ್ಚರ್ಯವೇನಿಲ್ಲ ಎಂದು ಶ್ರೀಧರ್ ಹೇಳಿದ್ದಾರೆ.

ಪಂದ್ಯದ ಎಲ್ಲಾ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ಆಗಿ ಎಂಎಸ್ ಧೋನಿಯಿಂದ ಪಂತ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇತ್ತೀಚೆಗೆ, ದಿನೇಶ್ ಕಾರ್ತಿಕ್ ಅವರಿಗೆ ಟಿ20 ಸ್ವರೂಪದಲ್ಲಿ ಕಠಿಣ ಸ್ಪರ್ಧೆಯನ್ನು ನೀಡುತ್ತಿದ್ದಾರೆ, ಆದರೆ 24 ವರ್ಷ ವಯಸ್ಸಿನ ಪಂತ್ ಟೆಸ್ಟ್ ಮತ್ತು ಏಕದಿನ ಮಾದರಿ ಕ್ರಿಕೆಟ್‌ನಲ್ಲಿ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ.

2007ರ ಟಿ20 ವಿಶ್ವಕಪ್‌ ಫೈನಲ್‌ನ ಕೊನೆಯ ಓವರ್‌ನಲ್ಲಿ ಜೋಗಿಂದರ್‌ ಶರ್ಮಾಗೆ ಧೋನಿ ಹೇಳಿದ್ದೇನು ಗೊತ್ತಾ?2007ರ ಟಿ20 ವಿಶ್ವಕಪ್‌ ಫೈನಲ್‌ನ ಕೊನೆಯ ಓವರ್‌ನಲ್ಲಿ ಜೋಗಿಂದರ್‌ ಶರ್ಮಾಗೆ ಧೋನಿ ಹೇಳಿದ್ದೇನು ಗೊತ್ತಾ?

ರಿಷಬ್ ಪಂತ್ ಕುರಿತಂತೆ ಮಾತನಾಡಿರುವ ಶ್ರೀಧರ್, ಯುವ ಕೀಪರ್-ಬ್ಯಾಟರ್ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು. ಎಂಎಸ್ ಧೋನಿ ಪ್ರಭಾವವು ರಿಷಬ್ ಪಂತ್ ಆಟದ ಶೈಲಿಯಲ್ಲಿ ಕಾಣಿಸುತ್ತದೆ ಎಂದು ಹೇಳಿದರು.

" ರಿಷಬ್ ಪಂತ್‌ನಲ್ಲಿ ಮಹೇಂದ್ರ ಸಿಂಗ್ ಧೋನಿಯ ಛಾಯೆ ಇದೆ. ನಿಸ್ಸಂಶಯವಾಗಿ, ನೀವು ಯಾರನ್ನಾದರೂ ಆರಾಧಿಸುವಾಗ, ಅವರಂತೆ ಆಗಲು ಒಲವು ತೋರುತ್ತಾರೆ. ರಿಷಬ್‌ ಪಂತ್‌ನಲ್ಲಿ ನೀವು ಸ್ವಲ್ಪ ಮಾಹಿಯನ್ನು ನೋಡಬಹುದು. ಏಕೆಂದರೆ ಅವನು ಧೋನಿಯನ್ನು ಆರಾಧಿಸುತ್ತಾ ಬೆಳೆದವನು." ಎಂದು ಹೇಳಿದ್ದಾರೆ.

ಎಂಎಸ್‌ ಧೋನಿಯನ್ನು ಆರಾಧಿಸುವ ಪಂತ್

ಎಂಎಸ್‌ ಧೋನಿಯನ್ನು ಆರಾಧಿಸುವ ಪಂತ್

ಪಂತ್ ಒಂದಲ್ಲ ಒಂದು ಸಂದರ್ಭದಲ್ಲಿ ಧೋನಿಯ ಮೇಲಿನ ಅಭಿಮಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರ ಐಪಿಎಲ್ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ಪಂತ್ ಈ ಬಗ್ಗೆ ಹೇಳಿದ್ದರು.

"ಧೋನಿ ಮೈದಾನದ ಒಳಗೆ ಮತ್ತು ಹೊರಗೆ ನನಗೆ ಮಾರ್ಗದರ್ಶಕರಂತೆ. ನಾನು ಎದುರಿಸುತ್ತಿರುವ ಯಾವುದೇ ಸಮಸ್ಯೆಯೊಂದಿಗೆ ನಾನು ಅವರನ್ನು ಮುಕ್ತವಾಗಿ ಸಂಪರ್ಕಿಸಬಹುದು ಮತ್ತು ಅದಕ್ಕೆ ಸಂಪೂರ್ಣ ಪರಿಹಾರವನ್ನು ಅವನು ನನಗೆ ಎಂದಿಗೂ ನೀಡುವುದಿಲ್ಲ. ಇದರಿಂದ ನಾನು ಅವನ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗುವುದಿಲ್ಲ, ಅವರು ನನಗೆ ಕೆಲವು ಸುಳಿವುಗಳನ್ನು ನೀಡುತ್ತಾರೆ." ಎಂದು ಹೇಳಿಕೊಂಡಿದ್ದರು.

ಐಪಿಎಲ್‌ನಲ್ಲಿ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಐಪಿಎಲ್ ಪಂದ್ಯಾವಳಿಯ ಆರಂಭದಿಂದಲೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಾಯಕರಾಗಿದ್ದಾರೆ.

ತಮಾಷೆ ಸ್ವಭಾವದ ರಿಷಬ್ ಪಂತ್

ತಮಾಷೆ ಸ್ವಭಾವದ ರಿಷಬ್ ಪಂತ್

ಪಂತ್ ಕ್ರಿಕೆಟ್ ಮೈದಾನದಲ್ಲಿ ಗಂಭೀರವಾಗಿ ಕಾಣಿಸಿಕೊಂಡರೆ, ಮೈದಾನದ ಹೊರಗೆ ತಮಾಷೆಯ ಮತ್ತು ವಿಶ್ರಾಂತಿಯಿಂದ ಇರುತ್ತಾರೆ ಎಂದು ಶ್ರೀಧರ್ ಬಹಿರಂಗಪಡಿಸಿದ್ದಾರೆ.

ಸ್ಫೋಟಕ ಕೀಪರ್-ಬ್ಯಾಟರ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಶ್ರೀಧರ್, "ರಿಷಬ್ ತುಂಬಾ ಸ್ನೇಹಪರ, ತುಂಬಾ ತಮಾಷೆಯಾಗಿ ಕಾಣುತ್ತಾರೆ. ಅವರು ಮೈದಾನದ ಹೊರಗೆ ನಗುವುದನ್ನು ಪ್ರೀತಿಸುತ್ತಾರೆ. ಮೈದಾನದಿಂದ ಹೊರಗಿರುವಾಗ ಮತ್ತು ತುಂಬಾ ನಿರಾಳರಾಗಿರುವಾಗ ಅವರು ಎಲ್ಲದರಿಂದ ಸಾಕಷ್ಟು ಬೇರ್ಪಟ್ಟಿರುತ್ತಾರೆ. ಮೋಜು ಮಾಡಲು ಇಷ್ಟಪಡುವ ವ್ಯಕ್ತಿ. ಅವನು ತನ್ನ ಇತರ ಕ್ರೀಡೆಗಳನ್ನು ಪ್ರೀತಿಸುತ್ತಾನೆ." ಎಂದು ಹೇಳಿದ್ದಾರೆ.

ಫಾರ್ಮ್ ಕಂಡುಕೊಳ್ಳಬೇಕಿದೆ ಪಂತ್

ಫಾರ್ಮ್ ಕಂಡುಕೊಳ್ಳಬೇಕಿದೆ ಪಂತ್

2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಪಂತ್ 31 ಟೆಸ್ಟ್, 27 ಏಕದಿನ ಮತ್ತು 59 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಪ್ರಸ್ತುತ ತವರಿನಲ್ಲಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿರುವ ಭಾರತ ತಂಡದ ಭಾಗವಾಗಿದ್ದಾರೆ.

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ರಿಷಬ್ ಪಂತ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್‌ನಲ್ಲಿ ಪಂತ್ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು. ರನ್ ಗಳಿಸಲು ಪರದಾಡುತ್ತಿರುವ ಪಂತ್ ಬದಲಿಗೆ ದಿನೇಶ್ ಕಾರ್ತಿಕ್‌ಗೆ ಸ್ಥಾನ ನೀಡುವಂತೆ ಭಾರಿ ಒತ್ತಾಯ ಕೇಳಿಬಂದಿತ್ತು.

Story first published: Sunday, September 25, 2022, 0:09 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X