ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿಟ್ವೆಂಟಿ ಪಂದ್ಯಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಲಿವೆ ಈ 5 ಹೊಸ ನಿಯಮಗಳು!; ವೀಕ್ಷಕರಿಗೆ ಹಬ್ಬದೂಟ

These 5 New rules can make T20 cricket more interesting than now

ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಆರಂಭವಾದಾಗಿನಿಂದ ಒಂದಲ್ಲೊಂದು ಹೊಚ್ಚ ಹೊಸ ನಿಯಮಗಳನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸುತ್ತಲೇ ಬಂದಿದೆ. ದಿನವಿಡೀ ನಡೆಯುತ್ತಿದ್ದ ಪಂದ್ಯವನ್ನು ನಾಲ್ಕೈದು ಗಂಟೆಗಳಲ್ಲಿ ಮುಗಿಯುವ ಹಾಗೆ ಮಾಡಿದ್ದೇ ಈ ಟಿ ಟ್ವೆಂಟಿ ಪಂದ್ಯಗಳು. ಅಷ್ಟೇ ಅಲ್ಲದೇ ಟಿ ಟ್ವೆಂಟಿ ಪಂದ್ಯಗಳು ಆರಂಭವಾದ ನಂತರ ಕ್ರಿಕೆಟ್ ಜಗತ್ತಿಗೆ ಫ್ರೀ ಹಿಟ್ ರೀತಿಯ ಹಲವಾರು ಹೊಚ್ಚ ಹೊಸ ನಿಯಮಗಳು ಪರಿಚಯವಾದವು.

ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ಈ ದಾಖಲೆಗಳ ಮೇಲೆ ಕೊಹ್ಲಿ, ರೋಹಿತ್ ಮತ್ತು ಜೋ ರೂಟ್ ಕಣ್ಣುಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ಈ ದಾಖಲೆಗಳ ಮೇಲೆ ಕೊಹ್ಲಿ, ರೋಹಿತ್ ಮತ್ತು ಜೋ ರೂಟ್ ಕಣ್ಣು

ಬ್ಯಾಟ್ಸ್‌ಮನ್‌ಗಳು ಕಡಿಮೆ ಎಸೆತಗಳಲ್ಲಿ ಊಹಿಸಲಾಗದಷ್ಟು ರನ್ ಬಾರಿಸಲು ಆರಂಭಿಸಿದರು ಮತ್ತು ಬೌಲರ್‌ಗಳೂ ಸಹ ಭಿನ್ನವಿಭಿನ್ನವಾದ ಎಸೆತಗಳನ್ನು ಎಸೆಯಲು ಆರಂಭಿಸಿದರು. ಹೀಗೆ ಟಿ ಟ್ವೆಂಟಿ ಕ್ರಿಕೆಟ್ ಅಸ್ತಿತ್ವಕ್ಕೆ ಬಂದ ನಂತರ ಕೇವಲ 20 ಓವರ್‌ಗಳಲ್ಲಿ ಪಂದ್ಯವನ್ನು ಹೇಗೆ ಆಡಬಹುದು ಎಂಬುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಡಲಾಯಿತು. ನಂತರ ಟಿ ಟೆನ್ ಕ್ರಿಕೆಟ್ ಕೂಡ ಆರಂಭವಾಗಿ ಕ್ರಿಕೆಟ್ ಆಟದ ಅವಧಿಯನ್ನು ಮತ್ತಷ್ಟು ಕಡಿಮೆಗೊಳಿಸಿತು.

ಇಂಗ್ಲೆಂಡ್ ವಿರುದ್ಧದ ಗೆಲುವಿಗೆ ಅವರು ಮಾತ್ರ ಕಾರಣ ಎನ್ನಲೇಬೇಡಿ ಎಂದು ಕಿಡಿಕಾರಿದ ವಿರಾಟ್ ಕೊಹ್ಲಿ!ಇಂಗ್ಲೆಂಡ್ ವಿರುದ್ಧದ ಗೆಲುವಿಗೆ ಅವರು ಮಾತ್ರ ಕಾರಣ ಎನ್ನಲೇಬೇಡಿ ಎಂದು ಕಿಡಿಕಾರಿದ ವಿರಾಟ್ ಕೊಹ್ಲಿ!

ಹೀಗೆ ಟಿ ಟ್ವೆಂಟಿ ಕ್ರಿಕೆಟ್ ದಿನದಿಂದ ದಿನಕ್ಕೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಾ ಹೋದಂತೆ ಜಗತ್ತಿನಾದ್ಯಂತ ಹಲವಾರು ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳೂ ಹುಟ್ಟಿಕೊಂಡವು. ಅದರಲ್ಲಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ ಕ್ರಿಕೆಟ್ ಮಾದರಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಯಿತು ಎಂದರೆ ಅಕ್ಷರಶಃ ತಪ್ಪಾಗಲಾರದು. ಇಂಡಿಯನ್ ಪ್ರೀಮಿಯರ್ ಲೀಗ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ನಂತರ ಬಿಗ್ ಬ್ಯಾಶ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್ ಸೇರಿದಂತೆ ಹಲವಾರು ಟಿ ಟ್ವೆಂಟಿ ಕ್ರಿಕೆಟ್ ಪ್ರೀಮಿಯರ್ ಲೀಗ್‌ಗಳು ಆರಂಭವಾಗಿ ಕ್ರೀಡಾಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹೀಗೆ ಟಿ ಟ್ವೆಂಟಿ ಕ್ರಿಕೆಟ್ ಯಶಸ್ವಿಯಾದ ನಂತರ ಇದೀಗ ದ ಹಂಡ್ರೆಡ್ ಕ್ರಿಕೆಟ್ ಲೀಗ್ ಕೂಡ ಆರಂಭವಾಗಿದೆ. 100 ಬಾಲ್‌ಗಳ ಪಂದ್ಯಗಳ ಕ್ರಿಕೆಟ್ ಟೂರ್ನಿ ಇದಾಗಿದ್ದು ಟಿ ಟ್ವೆಂಟಿ ಕ್ರಿಕೆಟ್‍ಗಿಂತ ಕೊಂಚ ಭಿನ್ನವಾದ ನಿಯಮಗಳನ್ನೊಳಗೊಂಡಿದ್ದು ಉದ್ಘಾಟನಾ ಆವೃತ್ತಿಯಲ್ಲಿಯೇ ಕ್ರಿಕೆಟ್ ಅಭಿಮಾನಿಗಳನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನೀನು ಎಷ್ಟೇ ದೊಡ್ಡ ಬ್ಯಾಟ್ಸ್‌ಮನ್‌ ಆದರೂ ಇಲ್ಲಿ ಅಹಂ ಮುಚ್ಚಿಟ್ಟು ಆಡಬೇಕು ಎಂದ ಕೊಹ್ಲಿ!ನೀನು ಎಷ್ಟೇ ದೊಡ್ಡ ಬ್ಯಾಟ್ಸ್‌ಮನ್‌ ಆದರೂ ಇಲ್ಲಿ ಅಹಂ ಮುಚ್ಚಿಟ್ಟು ಆಡಬೇಕು ಎಂದ ಕೊಹ್ಲಿ!

ಹೀಗೆ ಕ್ರಿಕೆಟ್ ಅಭಿಮಾನಿಗಳನ್ನು ದೊಡ್ಡ ಮಟ್ಟದಲ್ಲಿ ಆಕರ್ಷಿಸಿರುವ ಟಿ ಟ್ವೆಂಟಿ ಕ್ರಿಕೆಟ್ ಮಾದರಿಯಲ್ಲಿ ಈ ಕೆಳಕಂಡ ಕೆಲವೊಂದಷ್ಟು ಬದಲಾವಣೆಗಳನ್ನು ತಂದರೆ ಟಿ ಟ್ವೆಂಟಿ ಪಂದ್ಯಗಳು ಮತ್ತಷ್ಟು ಕುತೂಹಲಕಾರಿಯಾಗಿರುವುದಂತೂ ಖಚಿತ..

1. 100 ಮೀ. ಸಿಕ್ಸರ್ ಬಾರಿಸಿದರೆ 8 ರನ್!

1. 100 ಮೀ. ಸಿಕ್ಸರ್ ಬಾರಿಸಿದರೆ 8 ರನ್!

ಸದ್ಯ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿ ಎಷ್ಟೇ ಉದ್ದದ ಸಿಕ್ಸರ್ ಬಾರಿಸಿದರೂ ಸಹ 6 ರನ್ ಎಂದು ಪರಿಗಣಿಸಲಾಗುತ್ತಿದೆ. ಆದರೆ ಬ್ಯಾಟ್ಸ್‌ಮನ್ 100 ಮೀಟರ್‌ಗಿಂತ ಹೆಚ್ಚು ಉದ್ದದ ಸಿಕ್ಸರ್ ಬಾರಿಸಿದರೆ ಅದನ್ನು 8 ರನ್ ಎಂದು ಪರಿಗಣಿಸಿದರೆ ಟಿ ಟ್ವೆಂಟಿ ಪಂದ್ಯಗಳು ನಿಜಕ್ಕೂ ಮತ್ತಷ್ಟು ಹೆಚ್ಚಿನ ಕುತೂಹಲಕಾರಿ ಆಗುವುದಂತೂ ನಿಜ. ಒಂದುವೇಳೆ ಈ ನಿಯಮವೇನಾದರೂ ಜಾರಿಗೆ ಬಂದಿದ್ದೇ ಆದಲ್ಲಿ ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್ ರೀತಿಯ ಸ್ಫೋಟಕ ಆಟಗಾರರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲಕಾರಿಯಾಗಲಿದೆ.

2. ಬೌಲರ್‌ಗಳಿಗೆ 4ಕ್ಕಿಂತ ಹೆಚ್ಚು ಓವರ್‌ಗಳು

2. ಬೌಲರ್‌ಗಳಿಗೆ 4ಕ್ಕಿಂತ ಹೆಚ್ಚು ಓವರ್‌ಗಳು

ಸದ್ಯ ಟಿ ಟ್ವೆಂಟಿ ಕ್ರಿಕೆಟ್ ನಿಯಮದ ಪ್ರಕಾರ, ಟಿ ಟ್ವೆಂಟಿ ಕ್ರಿಕೆಟ್ ಪಂದ್ಯವೊಂದರಲ್ಲಿ ಓರ್ವ ಬೌಲರ್‌ ಒಟ್ಟು 4 ಓವರ್‌ಗಳನ್ನು ಎಸೆಯಲು ಅವಕಾಶವಿದೆ. ಓರ್ವ ಬ್ಯಾಟ್ಸ್‌ಮನ್‌ ಸಂಪೂರ್ಣ ಇನ್ನಿಂಗ್ಸ್ ಆಡುವ ಅವಕಾಶವನ್ನು ಹೊಂದಿದ್ದರೆ, ಬೌಲರ್ ಮಾತ್ರ 4 ಸೀಮಿತ ಓವರ್‌ ಮಾಡುವ ನಿಯಮಕ್ಕೆ ಕಟ್ಟುಬಿದ್ದಿದ್ದಾರೆ. ಹೀಗಾಗಿ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿ ಬೌಲರ್ ಓರ್ವ ನಾಲ್ಕಕ್ಕಿಂತ ಹೆಚ್ಚಿನ ಓವರ್‌ಗಳನ್ನು ಎಸೆಯಬಹುದು ಎಂಬ ನಿಯಮವನ್ನು ಜಾರಿಗೆ ತಂದರೆ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳು ಮತ್ತಷ್ಟು ಕಠಿಣ ಮತ್ತು ಕುತೂಹಲಕಾರಿಯಾಗಿರಲಿವೆ. ಒಂದುವೇಳೆ ಈ ಅಧಿಕ ಓವರ್ ಮಾಡುವ ನಿಯಮ ಜಾರಿಗೆ ಬಂದಿದ್ದೇ ಆದಲ್ಲಿ ಬಲಿಷ್ಠ ಬೌಲರ್‌ಗಳು ಹೆಚ್ಚಿನ ಓವರ್‌ಗಳನ್ನು ಮಾಡುವ ಅವಕಾಶವನ್ನು ಪಡೆದುಕೊಳ್ಳಲಿದ್ದು ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ರನ್ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ ಮತ್ತು ಎರಡೂ ತಂಡಗಳ ನಡುವಿನ ಸೆಣಸಾಟ ಇನ್ನಷ್ಟು ಕುತೂಹಲಕಾರಿ ಆಗಿರುವುದಂತೂ ಖಚಿತ.

3. ಪಂದ್ಯದ ನಡುವೆಯೇ ಆಟಗಾರರನ್ನು ಬದಲಾಯಿಸುವ ಅವಕಾಶ!

3. ಪಂದ್ಯದ ನಡುವೆಯೇ ಆಟಗಾರರನ್ನು ಬದಲಾಯಿಸುವ ಅವಕಾಶ!

ಪಂದ್ಯದ 10 ಓವರ್‌ಗಳ ಆಟ ಮುಗಿದ ನಂತರ ಆಟಗಾರರನ್ನು ಬದಲಾಯಿಸಲು ಅವಕಾಶ ನೀಡುವುದರಿಂದ ಟಿ ಟ್ವೆಂಟಿ ಕ್ರಿಕೆಟ್ ಮತ್ತಷ್ಟು ಕುತೂಹಲಕಾರಿಯಾಗಲಿದೆ. ಈಗಾಗಲೇ ಈ ನಿಯಮವನ್ನು ಬಿಗ್ ಬ್ಯಾಷ್ ಲೀಗ್‌ನಲ್ಲಿ ಬಳಸಲಾಗಿದ್ದು ಕ್ರಿಕೆಟ್ ಅಭಿಮಾನಿಗಳಲ್ಲಿ ಪಂದ್ಯ ವೀಕ್ಷಿಸುವ ವೇಳೆ ಕುತೂಹಲವನ್ನು ಕೆರಳಿಸಿತ್ತು. ಪಂದ್ಯದ 10 ಓವರ್‌ಗಳ ಆಟ ಮುಗಿದ ನಂತರ ಇನ್ನೂ ಬ್ಯಾಟಿಂಗ್ ಮಾಡದೇ ಇರುವ ಯಾರಾದರೂ ಓರ್ವ ಬ್ಯಾಟ್ಸ್‌ಮನ್‌ ಬದಲು ಬೇರೆ ಬ್ಯಾಟ್ಸ್‌ಮನ್‌ನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ ಹಾಗೂ 1 ಓವರ್‌ಗಿಂತ ಅಧಿಕ ಓವರ್ ಬೌಲಿಂಗ್ ಮಾಡಿರದ ಯಾರಾದರೂ ಓರ್ವ ಬೌಲರ್‌ನ್ನು ತಂಡದಿಂದ ಹೊರಗಿಟ್ಟು ಬೇರೆ ಬೌಲರ್‌ಗೆ ಅವಕಾಶವನ್ನು ನೀಡಬಹುದು. ಹೀಗೆ ಮಾಡುವುದರಿಂದ ಎದುರಾಳಿ ತಂಡಗಳ ಮೇಲೆ ಹಿಡಿತ ಸಾಧಿಸಬಹುದಾಗಿದ್ದು ಪಂದ್ಯ ಮತ್ತಷ್ಟು ಕುತೂಹಲಕಾರಿಯಾಗಿ ಬದಲಾಗುವುದು ಖಚಿತ.

4. ನಿಧಾನಗತಿಯ ಬೌಲಿಂಗ್‌ಗೆ ರನ್ ಕಡಿತ!

4. ನಿಧಾನಗತಿಯ ಬೌಲಿಂಗ್‌ಗೆ ರನ್ ಕಡಿತ!

ಸದ್ಯ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ನಿಧಾನಗತಿಯ ಬೌಲಿಂಗ್ ಪ್ರದರ್ಶಿಸುವ ತಂಡಗಳಿಂದ ಅಂಕಗಳನ್ನು ಕಡಿತ ಮಾಡಿಕೊಳ್ಳಲಾಗುತ್ತಿದೆ. ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳು ಸಹ ನಿಧಾನಗತಿಯ ಬೌಲಿಂಗ್ ಮಾಡಿದ ಕಾರಣಕ್ಕೆ ಇದೇ ರೀತಿ ಅಂಕಗಳನ್ನು ಕಡಿತ ಮಾಡಿಕೊಳ್ಳಲಾಗಿತ್ತು. ಇದೇ ಮಾದರಿಯಲ್ಲಿ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ನಿಧಾನಗತಿಯ ಬೌಲಿಂಗ್ ಮಾಡುವ ತಂಡಕ್ಕೆ 5 ರನ್‌ಗಳನ್ನು ಕಡಿತಗೊಳಿಸುವ ನಿಯಮವನ್ನು ಜಾರಿಗೆ ತರಬಹುದಾಗಿದ್ದು, ಈ ನಿಯಮವೇನಾದರೂ ಜಾರಿಗೆ ಬಂದರೆ ಈ ಟ್ವೆಂಟಿ ಕ್ರಿಕೆಟ್ ಮತ್ತಷ್ಟು ಕುತೂಹಲಕಾರಿಯಾಗಲಿದೆ.

ಕಾಶ್ಮೀರ ಆಕ್ರಮಿಸಲು ತಾಲಿಬಾನ್ ಸಹಾಯ ಪಡೆಯೋಕೆ ರೆಡಿಯಾದ ಪಾಕಿಸ್ತಾನ | Oneindia Kannada
5. ಗೋಲ್ಡನ್ ಓವರ್

5. ಗೋಲ್ಡನ್ ಓವರ್

ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿ 20 ಓವರ್‌ಗಳ ಜೊತೆ ಮತ್ತೊಂದು ಓವರ್ ಸೇರಿಸಬಹುದಾಗಿದೆ. ಹೀಗೆ 20 ಓವರ್‌ಗಳ ಜೊತೆ ಸೇರಿಕೊಳ್ಳಲಿರುವ ಅಧಿಕ ಓವರ್‌ಗೆ ಗೋಲ್ಡನ್ ಓವರ್ ಎಂದು ಕರೆಯಲಾಗುತ್ತದೆ. ಈ ಗೋಲ್ಡನ್ ಓವರ್‌ನಲ್ಲಿ ಬ್ಯಾಟ್ಸ್‌ಮನ್‌ ಬಾರಿಸುವ ರನ್ ದುಪ್ಪಟ್ಟಾಗಿ ಎಣಿಕೆಯಾಗಲಿದೆ. ಉದಾಹರಣೆಗೆ ಬ್ಯಾಟ್ಸ್‌ಮನ್‌ ಗೋಲ್ಡನ್ ಓವರ್‌ನ ಎಸೆತವೊಂದರಲ್ಲಿ 4 ರನ್ ಬಾರಿಸಿದರೆ 8 ರನ್ ತಂಡಕ್ಕೆ ಲಭಿಸಲಿದೆ. ಅದೇ ರೀತಿ ಬೌಲರ್ ನೀಡುವ ಅಧಿಕ ರನ್‌ಗಳನ್ನೂ ಕೂಡ ದುಪ್ಪಟ್ಟಾಗಿ ಎಣಿಕೆ ಮಾಡಿಕೊಳ್ಳುವುದರ ಮೂಲಕ ಟಿ ಟ್ವೆಂಟಿ ಕ್ರಿಕೆಟ್‌ನ್ನು ಇನ್ನಷ್ಟು ಹೆಚ್ಚು ಕುತೂಹಲಕಾರಿಯನ್ನಾಗಿಸಬಹುದಾಗಿದೆ. ಹೀಗೆ ಗೋಲ್ಡನ್ ಓವರ್‌ನ್ನು ಜಾರಿಗೆ ತಂದಿದ್ದೇ ಆದಲ್ಲಿ ಕ್ರಿಕೆಟ್ ಅಭಿಮಾನಿಗಳು ಆ ಒಂದು ನಿರ್ಧಿಷ್ಟ ಓವರ್ ವೀಕ್ಷಿಸಲು ಟಿವಿ ಮುಂದೆ ಹಾಜರ್ ಆಗುವುದು ಖಚಿತ..

Story first published: Wednesday, August 25, 2021, 16:14 [IST]
Other articles published on Aug 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X