ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜಿನಲ್ಲಿ ಅವಮಾನ, ಭಾರತದ ವಿರುದ್ಧ ಹಗೆ: ನಾಲ್ಕು ಆಟಗಾರ ಸೇಡಿನ ಕಥೆ!

These Four cricketers were rejected by IPL teams later they played match winning performance against India

ವಿಶ್ವ ಕ್ರಿಕೆಟ್‌ನಲ್ಲಿ ಐಪಿಎಲ್ ಟೂರ್ನಿಗೆ ತನ್ನದೇ ಆದ ಪ್ರಾಮುಖ್ಯತೆಯಿದೆ. ಎಲ್ಲಾ ದೇಶಗಳ ಆಟಗಾರರು ಈ ಕ್ರಿಕೆಟ್ ಲೀಗ್‌ನಲ್ಲಿ ಭಾಗವಹಿಸಲು ಹಾತೊರೆಯುವುದು ಸಹಜ. ಹೀಗಾಗಿ ಪ್ರತಿಭಾನ್ವುತ ಆಟಗಾರರ ದಂಡೇ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು ಈ ಲೀಗ್ ಟೂರ್ನಿಯ ರಂಗು ಹೆಚ್ಚಾಗುವಂತೆ ಮಾಡುತ್ತದೆ. ಕ್ರಿಕೆಟ್ ಟೂರ್ನಿಯಲ್ಲಿ ಬೃಹತ್ ಪ್ರಮಾಣದಲ್ಲಿ ಆಟಗಾರರು ಆಡಲು ಬಯಸುತ್ತಾರಾದರೂ ಆಡುವ ಅವಕಾಶ ಮಾತ್ರ ಎಲ್ಲರಿಗೂ ದೊರೆಯುವುದಿಲ್ಲ.

ವಿಶ್ವ ಕ್ರಿಕೆಟ್‌ನಲ್ಲಿ ತಾರೆಗಳಾಗಿ ಮಿಂಚುವ ಬಹುತೇಕ ಆಟಗಾರರು ಈ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದುಕೊಳ್ಳುತ್ತಾರೆ. ಆದರೆ ಕೆಲ ಆಟಗಾರರು ಆಡುವ ಹಂಬಲವನ್ನು ಹೊಂದಿದ್ದರೂ ಯಾವುದೇ ತಂಡ ಕೊಳ್ಳಲು ಮನಸ್ಸು ಮಾಡದ ಕಾರಣ ಹರಾಜಾಗದೆ ಉಳಿದುಕೊಳ್ಳುತ್ತಾರೆ. ಕೆಲವೊಮ್ಮೆ ಪ್ರತಿಭಾವಂತ ಆಟಗಾರರು ಕೂಡ ಹೀಗೆ ಹರಾಜಾಗದೆ ಉಳಿದುಕೊಳ್ಳುವ ಸಾಧ್ಯತೆಗಳು ಇರುತ್ತದೆ. ಹೀಗೆ ಹರಾಜಾಗದೆ ಉಳಿದುಕೊಂಡ ಕೆಲ ವಿದೇಶಿ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ದ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದ ಕೆಲ ಉದಾಹರಣೆಗಳು ನಮ್ಮ ಮುಂದಿದೆ.

ಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಹೀಗೆ ಐಪಿಎಲ್‌ನಲ್ಲಿ ಹರಾಜಾಗದೆ ಉಳಿದಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ಸೋಲಿಗೆ ಕಾರಣವಾದ ನಾಲ್ವರು ಆಟಗಾರರ ಕುತೂಹಲಕಾರಿ ಮಾಹಿತಿ ಇಲ್ಲಿದೆ.. ಮುಂದೆ ಓದಿ..

ಮೆಹಿದಿ ಹಸನ್ ಮಿರಾಜ್

ಮೆಹಿದಿ ಹಸನ್ ಮಿರಾಜ್

ಪ್ರಸ್ತುತ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಮಿಂಚುತ್ತಿರುವ ಆಟಗಾರರ ಮೆಹಿದಿ ಹಸನ್ ಮಿರಾಜ್. ಬಾಂಗ್ಲಾದೇಶದ ಈ ಆಲ್‌ರೌಂಡರ್ 2017ರಲ್ಲಿ ಐಪಿಎಲ್ ಹರಾಜಿನ ಭಾಗವಾಗಿದ್ದರು. ಆದರೆ ಆ ಸಂದರ್ಭದಲ್ಲಿ ಯಾವುದೇ ಫ್ರಾಂಚೈಸಿ ಮೆಹಿದಿ ಹಸನ್ ಮಿರಾಜ್ ಅವರ ಮೇಲೆ ಆಸಕ್ತಿ ತೋರಲೇ ಇಲ್ಲ. ಆದರೆ ಈಗ ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಮಿರಾಜ್ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊದಲ ಪಂದ್ಯದಲ್ಲಿಯೂ ಬಾಂಗ್ಲಾದೇಶದ ಒಂದು ವಿಕೆಟ್‌ ಅಂತರದ ಗೆಲುವಿಗೆ ಕಾರಣವಾಗಿದ್ದ ಮೆಹಿದಿ ಹಸನ್ ಮಿರಾಜ್ ಎರಡನೇ ಪಂದ್ಯದಲ್ಲಿಯೂ ಶತಕ ಸಿಡಿಸಿ ಭಾರತದ ಸೋಲಿಗೆ ಕಾರಣವಾದರು. ಈ ಮೂಲಕ ಐಪಿಎಲ್‌ನಲ್ಲಾದ ಅವಮಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸೇಡು ತೀರಿಸಿಕೊಂಡಿದ್ದಾರೆ.

ಕಿವೀಸ್ ಆಟಗಾರ ಇಶ್ ಸೋಧಿ

ಕಿವೀಸ್ ಆಟಗಾರ ಇಶ್ ಸೋಧಿ

ನ್ಯೂಜಿಲೆಂಡ್ ತಂಡದ ಆಟಗಾರ ಇಶ್ ಸೋಧಿ ಐಪಿಎಲ್ ಹರಾಜಿನಲ್ಲಿ ಭಾಗವಹಿಸಿದ್ದರೂ ಹಲವು ಸಂದರ್ಭದಲ್ಲಿ ಅವರನ್ನು ಯಾವುದೇ ತಂಡಗಳು ಖರೀದಿಸದೆ ನಿರ್ಲಕ್ಷ್ಯವಹಿಸಿದೆ. ಆದರೆ ಕಿವಿಸ್‌ನ ಈ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅದ್ಭುತ ಅಂಕಿಅಂಶವನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ. ಅಲ್ಲದೆ 2016ರ ಟಿ20 ವಿಶ್ವಕಪ್ ಹಾಗೂ 2021ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದರು ಈ ಸ್ಪಿನ್ನರ್.

ಶ್ರೀಲಂಕಾ ನಾಯಕ ದಸುನ್ ಶನಕಾ

ಶ್ರೀಲಂಕಾ ನಾಯಕ ದಸುನ್ ಶನಕಾ

ಐಪಿಎಲ್‌ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಆಟಗಾರರ ಪೈಕಿ ಶ್ರೀಲಂಕಾ ತಂಡದ ಟಿ20 ನಾಯಕ ದಸುನ್ ಶನಕಾ ಕೂಡ ಸೇರಿದ್ದಾರೆ ಎಂಬುದು ಗಮನಾರ್ಹ. ಶನಕಾ ಒಂದು ಬಾರಿಯೂ ಐಪಿಎಲ್ ಒಪ್ಪಂದ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಈ ವರ್ಷ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಶನಕಾ ಭಾರತದ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಭಾರತದ ಸೋಲಿಗೆ ಕಾರಣವಾದರು. ಸೂಪರ್ 4 ಹಂತದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಮೂಖಾಮುಖಿಯಾಗಿದ್ದಾಗ ಬೌಲಿಂಗ್‌ನಲ್ಲಿ 26 ರನ್‌ಗಳಿಗೆ 2 ವಿಕೆಟ್ ಕಿತ್ತಿದ್ದ ಶನಕಾ ಬಳಿಕ ಬ್ಯಾಟಿಂಗ್‌ನಲ್ಲಿ 18 ಎಸೆತಗಳಲ್ಲಿ 33 ರನ್‌ ಸಿಡಿಸಿ ಭಾರತದ ಸೋಲಿಗೆ ಕಾರಣವಾಗಿದ್ದರು. ಈ ಮೂಲಕ ಭಾರತ ಏಷ್ಯಾ ಕಪ್‌ನಿಂದ ನಿರ್ಗಮಿಸಿತ್ತು.

ಬಾಂಗ್ಲಾದೇಶದ ಅನುಭವಿ ಆಟಗಾರ ಮುಷ್ಫೀಕರ್ ರಹೀಮ್

ಬಾಂಗ್ಲಾದೇಶದ ಅನುಭವಿ ಆಟಗಾರ ಮುಷ್ಫೀಕರ್ ರಹೀಮ್

ಬಾಂಗ್ಲಾದೇಶದ ವಿಕೆಟ್ ಕೀಪರ್ ಬ್ಯಾಟರ್ ಮುಷ್ಫಿಕರ್ ರಹೀಮ್ ಪ್ರತಿ ಬಾರಿಯೂ ಐಪಿಎಲ್‌ನಲ್ಲಿ ಹೆಸರು ನೊಂದಾಯಿಸಿ ನಿರಾಸೆ ಅನುಭವಿಸುತ್ತಿದ್ದಾರೆ. ಯಾವುದೇ ಫ್ರಾಂಚೈಸಿ ಬಾಂಗ್ಲಾ ಆಟಗಾರನನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಆಸಕ್ತಿ ತೋರದ ಕಾರಣ ಪದೇ ಪದೇ ಹರಾಜಾಗದೆಯೇ ಉಳಿದುಕೊಳ್ಳುತ್ತಿದ್ದಾರೆ. ಆದರೆ 2019ರಲ್ಲಿ ಬಾಂಗ್ಲಾದೇಶ ಭಾರತದ ವಿರುದ್ಧ ಚೊಚ್ಚಲ ಗೆಲುವು ಸಾಧಿಸಲು ಮುಷ್ಫಿಕರ್ ರಹೀಮ್ ಕಾಎಣವಾಗಿದ್ದರು ಎಂಬುದನ್ನು ಬಹುತೇಕ ಭಾರತೀಯ ಕ್ರಿಕೆಟ್‌ನ ಅಭಿಮಾನಿಗಳು ಮರೆತಿರುವ ಸಾಧ್ಯತೆಯಿದೆ. ಆ ಪಂದ್ಯದಲ್ಲಿ 43 ಎಸೆತಗಳಲ್ಲಿ 60 ರನ್‌ಗಳಿಸಿ ಭಾರತದ ವಿರುದ್ಧ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು. ಅಲ್ಲದೆ 2007ರ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಅರ್ಧ ಶತಕ ಬಾರಿಸಿದ್ದರು.

Story first published: Thursday, December 8, 2022, 12:27 [IST]
Other articles published on Dec 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X