ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದೇ ಓವರ್‌ನಲ್ಲಿ 6 ಸಿಕ್ಸರ್ ಚಚ್ಚಿದ ಶ್ರೀಲಂಕಾದ ತಿಸರ ಪೆರೆರ: ವಿಡಿಯೋ

Thisara Perera becomes first Sri Lankan to hit 6 sixes in an over

ಕೊಲಂಬೋ: ಒಂದೇ ಓವರ್‌ನಲ್ಲಿ ಸತತ ಆರು ಸಿಕ್ಸರ್ ಚಚ್ಚಿದ ಶ್ರೀಲಂಕಾದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಗೆ ತಿಸರ ಪೆರೆರ ಕಾರಣರಾಗಿದ್ದಾರೆ. ಶ್ರೀಲಂಕಾದ ಲಿಸ್ಟ್‌ 'ಎ' ಪಂದ್ಯವೊಂದರಲ್ಲಿ ಪೆರೆರ ಈ ಸಾಧನೆ ತೋರಿದ್ದಾರೆ. ಲಿಸ್ಟ್‌ 'ಎ'ನಲ್ಲಿ ಪೆರೆರ ಪೇರಿಸಿದ ರನ್ ಅತೀ ವೇಗ ಅರ್ಧ ಶತಕ ದಾಖಲೆಗೂ ಕಾರಣವಾಗಿದೆ. ಓವರ್‌ ಒಂದರಲ್ಲಿ 6 ಸಿಕ್ಸರ್ ಚಚ್ಚಿದ ಬ್ಯಾಟ್ಸ್‌ಮನ್‌ಗಳ ಸಾಲಿಗೆ ಪೆರೆರ ಕೂಡ ಸೇರಿಕೊಂಡಿದ್ದಾರೆ.

ಸಿಕ್ಸ್ ಚಚ್ಚಿದ ಶಾರ್ದೂಲ್ ಬ್ಯಾಟ್ ಚೆಕ್ ಮಾಡಿದ ಬೆನ್ ಸ್ಟೋಕ್ಸ್: ವಿಡಿಯೋಸಿಕ್ಸ್ ಚಚ್ಚಿದ ಶಾರ್ದೂಲ್ ಬ್ಯಾಟ್ ಚೆಕ್ ಮಾಡಿದ ಬೆನ್ ಸ್ಟೋಕ್ಸ್: ವಿಡಿಯೋ

ಮಾರ್ಚ್ 28ರ ಭಾನುವಾರ ನಡೆದ ಪ್ರಮುಖ ಕ್ಲಬ್‌ಗಳ ನಡುವಿನ ಲಿಸ್ಟ್‌ 'ಎ' ಪಂದ್ಯವೊಂದರಲ್ಲಿ ತಿಸರ ಪೆರೆರ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಶ್ರೀಲಂಕಾ ಆರ್ಮಿ ತಂಡಕ್ಕೆ ನಾಯಕರಾಗಿದ್ದ ಪೆರೆರಾ ಅತೀ ವೇಗದ ಶತಕ ಬಾರಿಸಿ ಗಮನ ಸೆಳೆದಿದ್ದಾರೆ.

ಪೆರೆರ ಸ್ಫೋಟಕ ಬ್ಯಾಟಿಂಗ್‌

ಪೆರೆರ ಸ್ಫೋಟಕ ಬ್ಯಾಟಿಂಗ್‌

ಪನಗೋಡ ಟೌನ್‌ನಲ್ಲಿ ಭಾನುವಾರ ನಡೆದ, ಲಿಸ್ಟ್‌ ಎ ಪಂದ್ಯವೊಂದರಲ್ಲಿ ಶ್ರೀಲಂಕಾ ಆರ್ಮಿ ತಂಡದ ತಿಸರ ಪೆರೆರ ಅವರು ಬ್ಲೂಮ್‌ಫೀಲ್ಡ್‌ ಕ್ರಿಕೆಟ್ ತಂಡದ ವಿರುದ್ಧ ಓವರ್‌ನಲ್ಲಿ 6 ಸಿಕ್ಸಸ್ ಚಚ್ಚಿದ್ದಾರೆ. ಪಂದ್ಯದಲ್ಲಿ ಕೇವಲ 13 ಎಸೆತಗಳನ್ನು ಎದುರಿಸಿದ ಪೆರೆರ ಅಜೇಯ 52 ರನ್‌ ಬಾರಿಸಿದ್ದರು. ಲಂಕಾ ಪರ ಪೆರೆರ, 6 ಟೆಸ್ಟ್‌, 166 ಏಕದಿನ ಪಂದ್ಯಗಳು ಮತ್ತು 64 ಟಿ20ಐ ಪಂದ್ಯಗಳನ್ನು ಆಡಿದ್ದಾರೆ.

ಕೌಶಲ್ಯ ವೀರರತ್ನೆ ಮೊದಲಿಗ

ಕೌಶಲ್ಯ ವೀರರತ್ನೆ ಮೊದಲಿಗ

ಭಾನುವಾರದ ಪಂದ್ಯದಲ್ಲಿ ಪೆರೆರ ಒಟ್ಟು 8 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದರಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ದಾಖಲೆ ಕೂಡ ಸೇರಿತ್ತು. ಅಷ್ಟೇ ಅಲ್ಲ, ಶ್ರೀಲಂಕಾದ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್‌ ಆಗಿಯೂ ಪೆರೆರ ಗುರುತಿಸಿಕೊಂಡಿದ್ದಾರೆ. 2015ರಲ್ಲಿ ಲಂಕಾ ಆಲ್ ರೌಂಡರ್ ಕೌಶಲ್ಯ ವೀರರತ್ನೆ ಅವರು ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರು.

ಸಿಕ್ಸ್ ಸಿಕ್ಸರ್ ದಾಖಲೆ ಶೂರರು

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಪೆರೆರ, ಸ್ಪಿನ್ನರ್ ದಿಲ್ಹಾನ್ ಕೂರೆ ಎಸೆತಗಳಿಗೆ ಸಿಕ್ಸರ್‌ಗಳನ್ನು ಬಾರಿಸುತ್ತಾ ಸಾಗಿ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ವಿಶ್ವದಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸ್ ಚಚ್ಚಿದ 9ನೇ ಬ್ಯಾಟ್ಸ್‌ಮನ್‌ ಆಗಿ ಪೆರೆರ ದಾಖಲೆ ಪಟ್ಟಿ ಸೇರಿದ್ದಾರೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ನ ಗ್ಯಾರಿ ಸೋಬರ್ಸ್, ಭಾರತದ ರವಿ ಶಾಸ್ತ್ರಿ, ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್, ಭಾರತದ ಯುವರಾಜ್ ಸಿಂಗ್, ಇಂಗ್ಲೆಂಡ್‌ನ ರಾಸ್ ವೈಟ್ಲಿ, ಅಫ್ಘಾನಿಸ್ತಾನದ ಅಝರತುಲ್ಲ ಝಝಾಯ್, ನ್ಯೂಜಿಲೆಂಡ್‌ನ ಲಿಯೋ ಕಾರ್ಟರ್ ಮತ್ತು ವೆಸ್ಟ್ ಇಂಡೀಸ್ ನ ಕೀರನ್ ಪೊಲಾರ್ಡ್ ಈ ದಾಖಲೆಗಾಗಿ ಗುರುತಿಸಿಕೊಂಡಿದ್ದರು.

Story first published: Tuesday, March 30, 2021, 8:06 [IST]
Other articles published on Mar 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X