ಒತ್ತಡದಿಂದ ಮೂರು ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ: ಮೊಹಮ್ಮದ್ ಶಮಿ

ನವದೆಹಲಿ, ಮೇ 4: ಕೆಲ ವರ್ಷಗಳ ಹಿಂದೆ ವೈಯಕ್ತಿಕ ಸಮಸ್ಯೆಗಳಿಂದಾಗಿ ಮಾನಸಿಕ ಒತ್ತಡಕ್ಕೊಳಗಾಗಿ ಮೂರು ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ ಎಂದು ಭಾರತದ ವೇಗಿ ಮೊಹಮ್ಮದ್ ಶಮಿ ಹೇಳಿಕೊಂಡಿದ್ದಾರೆ. ಆ ವೇಳೆ ಕುಟುಂಬದ ಕಡೆಗೆ ಹೆಚ್ಚು ಗಮನಹರಿಸಬೇಕಾದ ಅನಿವಾರ್ಯತೆಯಲ್ಲಿದ್ದೆ ಎಂದು ಶಮಿ ಹೇಳಿದ್ದಾರೆ.
24 ಅಂತಸ್ತಿನ ಕಟ್ಟಡವೊಂದರಿಂದ ತಾನು ಜಂಪ್ ಮಾಡುತ್ತೇನೆಂದು ಕುಟುಂಬದ ಸದಸ್ಯರು ಹೆದರಿದ್ದರು ಎಂದು ಶಮಿಯೇ ಹೇಳಿಕೊಂಡಿದ್ದಾರೆ. ಶಮಿ, ಭಾರತದ ಮುಂಚೂಣಿ ಆಟಗಾರರಲ್ಲಿ ಗುರುತಿಸಿಕೊಂಡವರು. ಇನ್‌ಸ್ಟಾಗ್ರಾಮ್‌ನಲ್ಲಿ ತಂಡದ ಸಹ ಆಟಗಾರ ರೋಹಿತ್ ಶರ್ಮಾ ಜೊತೆ ಮಾತನಾಡಿದ ಅವರು ತನ್ನ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಂಡಿದ್ದಾರೆ.
'ಕುಟುಂಬಸ್ಥರು ಒಂದುವೇಳೆ ನನಗೆ ಬೆಂಬಲ ನೀಡದಿದ್ದರೆ ನಾನು ನನ್ನ ಕ್ರಿಕೆಟ್ ವೃತ್ತಿ ಬದುಕನ್ನೇ ಕಳೆದುಕೊಳ್ಳುತ್ತಿದ್ದೆ. ವೈಯಕ್ತಿಕ ಬದುಕಿನ ಒತ್ತಡದಿಂದಾಗಿ ನಾನು ಒಟ್ಟಿಗೆ 3 ಬಾರಿ ಆತ್ಮಹತ್ಯೆಗೆ ಯೋಚಿಸಿದ್ದೆ,' ಎಂದು ಲೈವ್ ಚಾಟ್‌ನಲ್ಲಿ ಶಮಿ ನುಡಿದರು.
'ನಾನು ಆ ಸಂದರ್ಭದಲ್ಲಿ ಕ್ರಿಕೆಟ್ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ. ನಾವಾಗ 24ನೇ ಅಂತಸ್ತಿನ ಕಟ್ಟದಲ್ಲಿ ವಾಸಿಸುತ್ತಿದ್ದೆವು. ಹೀಗಾಗಿ ನಾನು ಬಾಲ್ಕನಿಯಿಂದ ಜಪ್ ಮಾಡಬಹುದು ಎಂದು ನನ್ನ ಕುಟುಂಬಸ್ಥರು ಹೆದರಿದ್ದರು. ನನ್ನ ಸಹೋದರ ನನಗೆ ಆ ಹೊತ್ತು ಬಹಳ ಮಾನಸಿಕ ಸ್ಥೈರ್ಯ ತುಂಬಿದ್ದ,' ಎಂದು 29ರ ಹರೆಯದ ಶಮ್ಮಿ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications