ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!

Top 5 bowlers who hold the most number of hat-trick wickets record in ODIs

ಬೆಂಗಳೂರು, ಮೇ 19: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ದಾಖಲೆಗಳೇ ಅಪರೂಪ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪರಿಸ್ಥಿತಿಗಳು ಮತ್ತು ಪಿಚ್‌ಗಳು ಬ್ಯಾಟ್ಸ್‌ಮನ್‌ಗಳತ್ತ ಹೆಚ್ಚು ಒಲವು ತೋರುತ್ತವೆಯಾದ್ದರಿಂದ ಲಿಮಿಟೆಡ್ ಓವರ್‌ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಇನ್ನೂ ಕಷ್ಟ. ಆದರೆ ಏಕದಿನ ಕ್ರಿಕೆಟ್‌ನಲ್ಲಿ ಸುಮಾರು 49ಕ್ಕೂ ಅಧಿಕ ಬಾರಿ ಹ್ಯಾಟ್ರಿಕ್ ವಿಕೆಟ್ ಸಾಧನೆಗಳ ನಿದರ್ಶನಗಳು ಸಿಕ್ಕುತ್ತವೆ. ಹ್ಯಾಟ್ರಿಕ್ ವಿಕೆಟ್‌ ಸಾಧನೆ ಮೆರೆದ ಬೌಲರ್‌ಗಳೂ ಒಂದಿಷ್ಟು ಬಂದಿ ಸಿಕ್ಕುತ್ತಾರೆ.

ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!ಭಾರತ ವಿರುದ್ಧದ 17 ವರ್ಷಗಳ ಹಿಂದಿನ ಪಂದ್ಯ ನೆನೆದು ಮರುಕ ಪಟ್ಟ ಅಖ್ತರ್!

ಮೂರೇ ಎಸೆತಗಳಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸುವುದೆಂದರೆ ಸುಲಭದ ಮಾತಲ್ಲ. ಅದು ಆಗಾಗ ಕಾಣಲು ಸಿಗುವುದೂ ಇಲ್ಲ. ಆದರೆ ಹ್ಯಾಟ್ರಿಕ್‌ ವಿಕೆಟ್‌ನ ಅಪರೂಪ ಸಂಭ್ರಮಕ್ಕೆ ಸಾಕ್ಷಿಯಾದ ಬಹಳಷ್ಟು ಬೌಲರ್‌ಗಳು ಇದ್ದಾರೆ.

ಐಪಿಎಲ್‌ ಇತಿಹಾಸದ ಐಪಿಎಲ್‌ ಇತಿಹಾಸದ "ಚೂಸಿ" ಭಾರತೀಯ ಬೌಲರ್‌ಗಳು ಇವರು!

ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳ ಮಾಹಿತಿ ಇಲ್ಲಿದೆ. ಈ ಪಟ್ಟಿಯಲ್ಲಿ ಒಬ್ಬರು ಭಾರತೀಯರೂ ಇದ್ದಾರೆ.

1. ಲಸಿತ್ ಮಾಲಿಂಗ

1. ಲಸಿತ್ ಮಾಲಿಂಗ

ಶ್ರೀಲಂಕಾದ ಅನುಭವಿ ವೇಗಿ ಲಸಿತ್ ಮಾಲಿಂಗ ಹ್ಯಾಟ್ರಿಕ್ ವಿಕೆಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅತೀ ಹೆಚ್ಚು ಬಾರಿ ಮಾಲಿಂಗ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಲಸಿತ್ ಒಟ್ಟಿಗೆ 3 ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಇದರಲ್ಲಿ 2007ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಹ್ಯಾಟ್ರಿಕ್ ಸಾಧನೆ ಹೆಚ್ಚು ಸ್ಮರಣೀಯ. ಆವತ್ತು ಮಾಲಿಂಗ ಶಾನ್ ಪೊಲಕ್, ಆ್ಯಂಡ್ರ್ಯೂ ಹಾಲ್, ಜಾಕ್‌ ಕ್ಯಾಲೀಸ್ ವಿಕೆಟ್ ಮುರಿದಿದ್ದರು. ಈ ಪಂದ್ಯವನ್ನು ಶ್ರೀಲಂಕಾ ಜಯಿಸಿತ್ತು. ದ್ವಿತೀಯ ಹ್ಯಾಟ್ರಿಕ್ ಬಂದಿದ್ದು 2011ರ ವಿಶ್ವಕಪ್‌ನಲ್ಲಿ ಕೀನ್ಯಾ ವಿರುದ್ಧ. ತನ್ಮಯ್ ಮಿಶ್ರಾ, ಪೀಟರ್ ಒಂಗೊಂಡೋ ಮತ್ತು ಶೆಮ್ ಎನ್‌ಗೋಚೆ ವಿಕೆಟ್‌ಗಳು ಮಾಲಿಂಗಗೆ ಲಭಿಸಿದ್ದವು, 3ನೇ ಹ್ಯಾಟ್ರಿಕ್ 2011ರಲ್ಲಿ ಆಸ್ಟ್ರೇಲಿಯಾ ವಿರುದ್ಧ. ಆವತ್ತು ಮಿಚೆಲ್ ಜಾನ್ಸನ್, ಜಾನ್ ಹೇಸ್ಟಿಂಗ್ಸ್ ಮತ್ತು ಜೇವಿಯರ್ ಡೊಹೆರ್ಟಿ ವಿಕೆಟ್‌ಗಳು ದೊರೆತಿತ್ತು.

2. ವಾಸಿಮ್ ಅಕ್ರಮ್

2. ವಾಸಿಮ್ ಅಕ್ರಮ್

ಪಾಕಿಸ್ತಾನದ ಮಾಜಿ ಎಡಗೈ ವೇಗಿ ವಾಸಿಮ್ ಅಕ್ರಮ್ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ. ಮಾಸ್ಟರ್ ಆಫ್ ರಿವರ್ಸ್ ಸ್ವಿಂಗ್ ಖ್ಯಾತಿಯ ವಾಸಿಮ್ ಅಕ್ರಮ್ 1989ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಜೆಫ್ ಡುಜಾನ್, ಮಾಲ್ಕಮ್ ಮಾರ್ಷಲ್ ಮತ್ತು ಕರ್ಟ್ಲಿ ಆಂಬ್ರೋಸ್ ವಿಕೆಟ್‌ಗಳನ್ನು ಆವತ್ತು ವಾಸಿಮ್ ಮುರಿದಿದ್ದರು. ಎರಡನೇ ಬಾರಿ ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್ ವಿಕೆಟ್ (ಮರ್ವ್ ಹ್ಯೂಸ್, ಕಾರ್ಲ್ ರಾಕೆಮನ್ ಮತ್ತು ಟೆರ್ರಿ ಆಲ್ಡರ್ಮನ್) ಸಾಧನೆ ಮಾಡಿದ್ದರು.

3. ಕುಲದೀಪ್ ಯಾದವ್

3. ಕುಲದೀಪ್ ಯಾದವ್

ಎಡಗೈ ಚೌನಾಮನ್ ಬೌಲರ್, ಭಾರತದ ಕುಲದೀಪ್ ಯಾದವ್ ಕೂಡ ಏಕದಿನದಲ್ಲಿ ಹ್ಯಾಟ್ರಿಕ್ ದಾಖಲೆ ಪಟ್ಟಿಯಲ್ಲಿದ್ದಾರೆ. ಕುಲದೀಪ್ 2 ಬಾರಿ ಈ ಸಾಧನೆ ತೋರಿದ್ದಾರೆ. 50 ಓವರ್‌ಗಳ ಪಂದ್ಯದಲ್ಲಿ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಭಾರತದ ಒಬ್ಬನೇ ಬೌಲರ್ ಕುಲದೀಪ್ ಯಾದವ್. ಮೊದಲ ಹ್ಯಾಟ್ರಿಕ್ ಸಾಧನೆ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ (ಮ್ಯಾಥ್ಯೂ ವೇಡ್, ಆಷ್ಟನ್ ಅಗರ್ ಮತ್ತು ಪ್ಯಾಟ್ ಕಮ್ಮಿನ್ಸ್) ಮಾಡಿದ್ದರು. ಎರಡನೇ ಸಾರಿ ವೆಸ್ಟ್ ಇಂಡೀಸ್ ವಿರುದ್ಧ 2019ರಲ್ಲಿ ಹ್ಯಾಟ್ರಿಕ್ ವಿಕೆಟ್ (ಶೈ ಹೋಪ್, ಜೇಸನ್ ಹೋಲ್ಡರ್ ಮತ್ತು ಅಲ್ಜಾರಿ ಜೋಸೆಫ್) ಪಡೆದಿದ್ದರು.

4. ಟ್ರೆಂಟ್ ಬೌಲ್ಟ್

4. ಟ್ರೆಂಟ್ ಬೌಲ್ಟ್

ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಕೂಡ 2 ಬಾರಿ ಹ್ಯಾಟ್ರಿಕ್ ವಿಕೆಟ್‌ ಪಡೆದು ಗಮನ ಸೆಳೆದಿದ್ದರು. ಅಬುಧಾಬಿಯಲ್ಲಿ 2018ರಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನದ ಫಖರ್ ಜಮಾನ್, ಬಾಬರ್ ಅಜಮ್ ಮತ್ತು ಮೊಹಮ್ಮದ್ ಹಫೀಜ್ ವಿಕೆಟ್‌ಗಳನ್ನು ಮುರಿದಿದ್ದರು ಪಂದ್ಯದಲ್ಲಿ ಪಾಕಿಸ್ತಾನ 47 ರನ್‌ ಜಯ ಸಾಧಿಸಿತ್ತು. ಇನ್ನೊಮ್ಮೆ 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಹ್ಯಾಟ್ರಿಕ್ ಪಡೆದು ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮೆರೆದ 10ನೇ ಬೌಲರ್‌ ಆಗಿ ದಾಖಲೆ ನಿರ್ಮಿಸಿದ್ದರು. ಉಸ್ಮಾನ್ ಖವಾಜಾ, ಮಿಚೆಲ್ ಸ್ಟಾರ್ಕ್ ಮತ್ತು ಜೇಸನ್ ಬೆಹ್ರೆಂಡೋರ್ಫ್ ವಿಕೆಟ್‌ಗಳು ಆವತ್ತು ಬೌಲ್ಟ್‌ಗೆ ಆಹುತಿಯಾಗಿದ್ದವು.

5. ಸಕ್ಲೇನ್ ಮುಷ್ತಾಕ್

5. ಸಕ್ಲೇನ್ ಮುಷ್ತಾಕ್

ಪಾಕಿಸ್ತಾನದ ಶ್ರೇಷ್ಠ ಬೌಲರ್ ಸಕ್ಲೇನ್ ಮುಷ್ತಾಕ್ ಹೆಸರಿನಲ್ಲೂ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆಯಿದೆ. ಮುಷ್ತಾಕ್‌ಗೆ ಮೊದಲ ಹ್ಯಾಟ್ರಿಕ್ ವಿಕೆಟ್ ಲಭಿಸಿದ್ದು 1996ರಲ್ಲಿ ಜಿಂಬಾಬ್ವೆ ವಿರುದ್ಧ. ಗ್ರಾಂಟ್ ಫ್ಲವರ್, ಜಾನ್ ರೆನ್ನಿ ಮತ್ತು ಆಂಡಿ ವಿಟ್ಟಾಲ್ ವಿಕೆಟ್‌ಗಳು ಸಕ್ಲೇನ್‌ ಮುರಿದಿದ್ದರು. ಎರಡನೇ ಬಾರಿಯೂ ಜಿಂಬಾಬ್ವೆ ವಿರುದ್ಧವೇ 1999ರ ವಿಶ್ವಕಪ್‌ ವೇಳೆ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಹೆನ್ರಿ ಒಲೊಂಗಾ, ಆಡಮ್ ಹಕಲ್ ಮತ್ತು ಪೊಮ್ಮಿ ಎಂಬಂಗ್ವಾ ವಿಕೆಟ್‌ಗಳು ಸಕ್ಲೇನ್‌ಗೆ ಲಭಿಸಿತ್ತು.

(ಶ್ರೀಲಂಕಾದ ಚಮಿಂಡ ವಾಸ್ ಕೂಡ ಎರಡು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ವಿರುದ್ಧ ವಾಸ್ ಕ್ರಮವಾಗಿ 2001 ಮತ್ತು 2003ರಲ್ಲಿ ಹ್ಯಾಟ್ರಿಕ್ ವಿಕೆಟ್ ಗಳಿಸಿದ್ದರು).

Story first published: Saturday, May 23, 2020, 9:09 [IST]
Other articles published on May 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X