ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ಸಹಕಾರಿಯಾಯಿತು ಎಂದ U-19 ಆಟಗಾರ್ತಿ ತಿತಾಸ್ ಸಧು

U19 Womens World Cup player Titas Sadhu said Jhulan Goswamis tips helped me

ಅಂಡರ್ 19 ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಕಿರಿಯರ ತಂಡ ಚೊಚ್ಚಲ ಟೂರ್ನಿಯ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿ ಟ್ರೋಫಿ ಎತ್ತಿಹಿಡಿದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಪರಾಕ್ರಮ ಮೆರೆದ ಭಾರತ ಅರ್ಹವಾಗಿಯೇ ಚಾಂಪಿಯನ್ ಎನಿಸಿಕೊಂಡಿದೆ.

ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ವಿಭಾಗದ ಪ್ರದರ್ಶನ ವಿಶೇಷವಾಗಿ ಗಮನಸೆಳೆದಿದೆ. ಅದರಲ್ಲೂ ಬಂಗಾಳ ಮೂಲದ ಆಟಗಾರ್ತಿ ತಿತಾಸ್ ಸಧು ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 6 ರನ್ ನೀಡಿ 2 ವಿಕೆಟ್ ಸಂಪಾದಿಸುವ ಮೂಲಕ ಇಂಗ್ಲೆಂಡ್ ಪಡೆಗೆ ಆಘಾತ ನೀಡಿದರು. ಈ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಸಧು ಫೈನಲ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನವಾಗಿದ್ದಾರೆ. ಈ ಸಾಧನೆಯ ಬಳಿಕ ಮಾತನಾಡಿದ ಸಧು ತಮ್ಮ ತಂಡಚಾಂಪಿಯನ್ ಪಟ್ಟಕ್ಕೆರಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

U-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾU-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ

"ನಾವು ಚಾಂಪಿಯನ್ ಪಟ್ಟಕ್ಕೇರಿ ಅದಾಗಲೇ ಕೆಲವು ಗಂಟೆಗಳಾಗಿದೆ. ಆದರೆ ನಾವು ಈಗ ವಿಶ್ವದ ಅತ್ಯುತ್ತಮ ತಂಡ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಗೆಲುವು ಸಾಧಿಸಿದ ಬಳಿಕ ನಮ್ಮ ಸಂಬ್ರಮ ಮುಂದುವರಿಯುತ್ತಲೇ ಇದೆ. ಭಾರತ ತಂಡದ ಜೆರ್ಸಿಯಲ್ಲಿ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದಿರುವುದು ಸಂತಸ ತಂದಿದೆ" ಎಂದಿದ್ದಾರೆ ತಿತಾಸ್ ಸಧು.

ಇನ್ನು ಈ ಸಂದರ್ಭದಲ್ಲಿ ನೆಚ್ಚಿನ ಕ್ರಿಕೆಟರ್ ಯಾರು ಎಂದು ಕೇಳಿದಾಗ ತಿತಾಸ್ ಸಧು ಜೂಲನ್ ಗೋಸ್ವಾಮಿ ಹೆಸರನ್ನು ಉಲ್ಲೇಖಸಿದ್ದಾರೆ. ಅಲ್ಲದೆ ದಿಗ್ಗಜ ಆಟಗಾರ್ತಿ ನೀಡಿದ ಸಲಹೆ ವಿಶ್ವಕಪ್‌ನಲ್ಲಿಯೂ ತನಗೆ ಸಹಕಾರಿಯಾಯಿತು ಎಂದಿದ್ದಾರೆ. "ದಿದಿ(ಜೂಲನ್ ಗೋಸ್ವಾಮಿ) ನನ್ನ ನೆಚ್ಚಿನ ಆಟಗಾರ್ತಿ. ಎಲ್ಲರ ನಂಬಿಕೆಯನ್ನು ಉಳಿಸಿಕೊಳ್ಳಲ ಸಾಧ್ಯವಾಗುವುದು ಖುಷಿ ನೀಡುತ್ತದೆ. ನನಗೆ ಅವರು ಸಾಕಷ್ಟು ಸಲಹೆ ನೀಡಿದ್ದಾರೆ. ಅದನ್ನು ಬಳಸಿಕೊಳ್ಳಲು ನನ್ನಿಂದ ಸಾಧ್ಯವಾಗಿದೆ" ಎಂದಿದ್ದಾರೆ ತಿತಾಸ್ ಸಧು.

ದಕ್ಷಿಣ ಆಫ್ರಿಕಾದ ಪೊಚೆಸ್ಟ್ರೂಮ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡಕ್ಕೆ ಇಂಗ್ಲೆಂಡ್ ಎದುರಾಳಿಯಾಗಿತ್ತು. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದ್ದು ಮೊದಲಿಗೆ ಎದುರಾಳಿಯನ್ನು ಬ್ಯಾಟಿಂಗ್‌ಗೆ ಇಳಿಸಿತು. ಭಾರತದ ನಾಯಕಿ ಶಫಾಲಿ ವರ್ಮ ನಿರ್ಧಾರವನ್ನು ಸಮರ್ಥೆ ಮಾಡಿಕೊಳ್ಳುವಂತೆ ಅದ್ಭುತವಾಗಿ ಬೌಲಿಂಗ್ ನಡೆಸಿದ ಭಾರತ ಇಂಗ್ಲೆಂಡ್ ತಂಡವನ್ನು ಕೇವಲ 68 ರನ್‌ಗಳಿಗೆ ಆಲೌಟ್ ಮಾಡುವಲಗಲಿ ಯಶಸ್ವಿಯಾಗಿತ್ತು.

ಈ ಅಲ್ಪ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಹಂತದಲ್ಲಿ ಸಣ್ಣ ಹಿನ್ನಡೆ ಅನುಭವಿಸಿದರೂ ಅದು ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆರಂಬಿಕ ಆಟಗಾರ್ತಿಯರಾದ ಶಫಾಲಿ ವರ್ಮ ಹಾಗೂ ಶ್ಏತಾ ಸೆಹ್ರಾವತ್ 20 ರನ್‌ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಬಳಿಕ ಸೌಮ್ಯ ತಿವಾರಿ ಹಾಗೂ ಗೊಂಗದಿ ತ್ರಿಷಾ ಉತ್ತಮ ಜೊತೆಯಾಟ ನೀಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದುನಿಲ್ಲಿಸಿದರು. ಅಂರಿಮವಾಗಿ ಭಾರತ 14 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್ ನೀಡಿದ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.

Story first published: Tuesday, January 31, 2023, 5:35 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X